ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮಹಿಳೆಯರ ಭದ್ರತೆಗಾಗಿ 'ಸುರಕ್ಷಾ' ಆ್ಯಪ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ 'ಸುರಕ್ಷಾ' ಅಪ್ಲಿಕೇಷನ್ ಬಳಕೆ ಕುರಿತು ಮತ್ತೊಮ್ಮೆ ಧ್ವನಿ ಕೇಳಿಬಂದಿದೆ.

ದೌರ್ಜನ್ಯ, ಅತ್ಯಾಚಾರ ಯತ್ನ ಕೃತ್ಯಗಳಂತಹ ಪ್ರಯತ್ನಗಳು ನಡೆದಾಗ ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತ ಮಹಿಳೆಯರಿಗೆ ನೆರವಾಗಲು ಹಾಗೂ ಸುರಕ್ಷತಾ ಭಾವನೆ ಮೂಡಿಸಲು ಮಹಿಳಾ ಸುರಕ್ಷಾ ದಳ ಸ್ಥಾಪಿಸಲಾಗಿದೆ. ಇದರೊಂದಿಗೆ ಸುರಕ್ಷಾ ಎನ್ನುವ ಹೊಸ ಆಪ್ ಆರಂಭಿಸಲಾಗಿದ್ದು, ಈಗಾಗಲೇ ಈ ಆಪ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!ಮಹಿಳೆಯರೇ, ನಿಮ್ಮ ಸುರಕ್ಷೆಗಿರಲಿ ಸುರಕ್ಷಾ ಆಪ್!

ಸಾರ್ವಜನಿಕರ ಅನುಕೂಲಕ್ಕಾಗಿ 100ರ ಸಹಾಯವಾಣಿಯನ್ನು ಆಧುನೀಕರಣಗೊಳಿಸಲಾಗಿದ್ದು, ಯಾರೇ ಕರೆ ಮಾಡಿದರೂ, ಕೇವಲ 7 ಸೆಕೆಂಡ್‌ಗಳಿಗೆ ಪ್ರತಿಕ್ರಿಯೆ ದೊರೆಯಲಿದೆ. ಅಲ್ಲದೆ ಅದನ್ನು ಖಚಿತಪಡಿಸುವ ಎರಡು ಎಸ್‌ಎಂಎಸ್‌ಗಳು ರವಾನೆಯಾಗಲಿವೆ.

Suraksha Application For Womens Safety In Bengaluru

7 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಬಳಿಗೆ ಹೊಯ್ಸಳ ವಾಹನ ಧಾವಿಸಲಿದೆ. ಪ್ರತಿ ಠಾಣೆಗೆ ಎರಡರಂತೆ, ಹೊಯ್ಸಳ ವಾಹನಗಳಿದ್ದು, ಸಂತ್ರಸ್ತರ ಸ್ಥಳಗಳಿಗೆ ಕೆಲವೇ ನಿಮಿಷಗಳಲ್ಲಿ ಧಾವಿಸಿ, ನೆರವು ನೀಡಲಿದೆ ಎಂದು ಹೇಳಿದರು.

ಪೊಲೀಸ್ ಸಹಾಯವಾಣಿ 100ಕ್ಕೆ ಕರೆಮಾಡಲು ಯಾರೂ ಹೆದರಬೇಕಾಗಿಲ್ಲ. ಸುಳ್ಳು ಕರೆಯನ್ನಾದರೂ ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಕರೆ ಮಾಡಿದವರಿಗೆ ತಕ್ಷಣ ನೆರವು ನೀಡುವುದೇ ಪೊಲೀಸರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಡೌನ್‌ಲೋಡ್ ಮಾಡುವುದು ಹೇಗೆ?:ಡೌನ್ ಲೋಡ್ ಮಾಡೋದು ಹೇಗೆ? ಮೊದಲು ಗೂಗಲ್ ಪ್ಲೇಸ್ಟೋರ್ ಗೆ ಹೋಗಿ, ಸುರಕ್ಷಾ ಆಪ್ ಎಂದು ಟೈಪ್ ಮಾಡಿದರೆ, ಅಲ್ಲಿ ಕರ್ನಾಟಕ ಸರ್ಕಾರದ ಲೋಗೋ ಇರುವ ಸುರಕ್ಷಾ ಆಪ್ ಐಕಾನ್ ಕಾಣಿಸುತ್ತದೆ. ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಅಂದ ಹಾಗೇ ಇದು ಫ್ರಿ ಆಪ್ ಎಂಬುದು ನೆನಪಿರಲಿ!

ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?:ರಿಜಿಸ್ಟರ್ ಮಾಡಿಕೊಳ್ಳೋದು ಹೇಗೆ? ಡೌನ್ ಲೋಡ್ ಆಗಿರುವ ಸುರಕ್ಷಾ ಆಪ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡುವಂತೆ ಸೂಚಿಸುತ್ತದೆ.

ನಿಮ್ಮ ಹೆಸರು ಮತ್ತು ಫೋನ್ ನಂಬರ್ ಕೊಟ್ಟರೆ ನಿಮಗೊಂದು ವೆರಿಫಿಕೇಶನ್ ಕೋಡ್ ಬರುತ್ತದೆ. ಆ ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಿದರೆ ನಿಮ್ಮ ಹೆಸರು ಆಪ್ ನಲ್ಲಿ ರಿಜಿಸ್ಟರ್ ಆದಂತೆ.

ದೂರು ಪೋಸ್ಟ್‌ ಮಾಡುವುದು ಹೇಗೆ?:ದೂರು ಪೋಸ್ಟ್ ಮಾಡೋದು ಹೇಗೆ? ನಂತರ ನಿಮಗೆ ದೂರು ನೀಡಬೇಕಿದ್ದಲ್ಲಿ, ಪೋಸ್ಟ್ ಕಂಪ್ಲೆಂಟ್ ಎಂಬ ಆಯ್ಕೆ ಇರುತ್ತದೆ. ಅಲ್ಲಿ ನಿಮ್ಮ ದೂರನ್ನು ಪೋಸ್ಟ್ ಮಾಡಬಹುದು.

ದೂರಿನ ವಿಷಯ, ದೂರಿನ ವಿವರ ಮತ್ತು ದೂರಿಗೆ ಸಂಬಂಧಿಸಿದ ಫೋಟೋವನ್ನು ಪೋಸ್ಟ್ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ದೂರಿನ ಗಂಭೀರತೆ ಎಷ್ಟಿದೆ ಎಂಬುದನ್ನೂ ನೀವು ಈ ಆಪ್ ಮೂಲಕವೇ ತಿಳಿಸಬಹುದು, ತೀರಾ ಗಂಭೀರ, ಮತ್ತು ಶೀಘ್ರ ನೆರವಿನ ಅಗತ್ಯವಿದ್ದಲ್ಲಿ ಆ ದೂರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

English summary
Suraksha -Bengaluru City Police. Bengaluru City Police SOS is a fully integrated personal safety app with Policing. The App turns your Smartphone into a discreet personal safety device for use during emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X