ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ನೀಟ್ ಪಿಜಿ ಅಧಿಸೂಚನೆಗೆ ಸುಪ್ರೀಂ ತಡೆಯಾಜ್ಞೆ

|
Google Oneindia Kannada News

ಬೆಂಗಳೂರು, ಮಾರ್ಚ್ 29: ವೈದ್ಯಕೀಯ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ನೆಲೆಸಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಕರ್ನಾಟಕದಲ್ಲಿ ಪಿಜಿ, ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ಗಳಿಗಾಗಿ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಬೇಕಾದರೆ ಎಂಬಿಬಿಎಸ್, ಬಿಡಿಎಸ್ ಪದವಿಗಳನ್ನು ಕರ್ನಾಟಕದಲ್ಲೇ ಪಡೆದಿರಬೇಕು ಅಥವಾ ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲೇ ನೆಲೆಸಿರಬೇಕು ಎಂಬ ಕರ್ನಾಟಕದ ವೈದ್ಯಕೀಯ ವೃತ್ತಿಪರ ಕೋರ್ಸ್ ಗಳ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದರಿಂದ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವೃತ್ತಿಪರ ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ಗಳ ಪಿಜಿ ಪ್ರವೇಶಕ್ಕೆ ಈಗ ರಿಲೀಫ್ ಸಿಕ್ಕಂತಾಗಿದೆ.

Supreme court stays Karnataka NEET PG allotment process

ರಾಜ್ಯ ಸರ್ಕಾರದ ಈ ಅಧಿಸೂಚನೆಯನ್ನು ಪ್ರಶ್ನಿಸಿ ಡಾ. ಕೃತಿ ಲಖಿನಾ ಹಾಗೂ ಇತರೆ 39 ಜನರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಪಿಜಿ, ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ಗಳಿಗೆ ಅವಕಾಶ ನೀಡದ ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 30ರಿಂದ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ತಡೆ ಬೀಳಲಿದ್ದು, ಸುಪ್ರೀಂಕೋರ್ಟ್ ನ ಅಂತಿಮ ಆದೇಶದ ನಂತರ ಮುಂದಿನ ಪ್ರಕ್ರಿಯೆ ನಡೆಯಲಿದೆ.

English summary
Supreme court of India stayed future proceedings of a notification issued by the Karnataka government making a minimum 10-year study in the state mandatory to qualify for government seats in PG courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X