ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರ ಬೆಂಬಿಲಿಸಿ ಜನವರಿ 20ರಂದು ಬೃಹತ್ ಹೋರಾಟ: ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು,ಜನವರಿ 19: ದೇಶದ ರೈತರನ್ನು ಬೆಂಬಲಿಸಿ ಜನವರಿ 20ರಂದು ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರೈತರ ಆಗ್ರಹದಲ್ಲಿ ನ್ಯಾಯವಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾವೆಲ್ಲರೂ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಜನವರಿ 20 ರಂದು ಬೃಹತ್ ಹೋರಾಟ ನಡೆಸಲಿದ್ದೇವೆಂದು ತಿಳಿಸಿದ್ದಾರೆ.

ಬಿಜೆಪಿಯು ಬ್ಲ್ಯಾಕ್‌ಮೇಲರ್ಸ್ ಜನತಾ ಪಕ್ಷ ಎಂದ ಡಿಕೆ ಶಿವಕುಮಾರ್ಬಿಜೆಪಿಯು ಬ್ಲ್ಯಾಕ್‌ಮೇಲರ್ಸ್ ಜನತಾ ಪಕ್ಷ ಎಂದ ಡಿಕೆ ಶಿವಕುಮಾರ್

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರೊಂದಿಗೆ ನಾವು ನಿಲ್ಲುತ್ತೇವೆ. ಸುಪ್ರೀಂಕೋರ್ಟ್ ಕಾಯ್ದೆಗೆ ತಡೆ ನೀಡಿದೆಯಷ್ಟೇ. ರದ್ದುಪಡಿಸಿಲ್ಲ. ಕಾಯ್ದೆ ರದ್ದುಪಡಿಸುವಂತೆ ಕಾಂಗ್ರೆಸ್ ಆಗ್ರಹಿಸಲಿದೆ ಎಂದರು.

 Supreme Court Shouldn’t Stay But Scrap Farm Laws

ಕಾಂಗ್ರೆಸ್ ಅನ್ನು ಬಲಪಡಿಸಲು ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಗೆಲ್ಲಲು ಪಕ್ಷ ವಿಭಾಗೀಯ ಮಟ್ಟದ ಸಂಕಲ್ಪ ಯಾತ್ರೆಗಳನ್ನು ನಡೆಸುತ್ತಿದೆ .

ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಜನರ ಹೃದಯ ಗೆಲ್ಲುವುದು ಅತ್ಯಂತ ಮುಖ್ಯ. ಇದಕ್ಕಾಗಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒಂದಾಗಬೇಕು. ಯಾವುದೇ ವ್ಯಕ್ತಿಯನ್ನು ಆರಾಧಿಸುವುದಕ್ಕಿಂತ ಪಕ್ಷದ ಪೂಜೆ ಮತ್ತು ಅದರ ನೀತಿಗಳನ್ನು ಪಾಲಿಸುವುದು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಎಲ್ಲರೂ ಸಮಾನರು ಎಂದು ಹೇಳಿದರು.

ರೈತರು, ದೀನ ದಲಿತರು ಮತ್ತು ಕಾರ್ಮಿಕ ವರ್ಗ ಸೇರಿದಂತೆ ಸಾಮಾನ್ಯರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

Recommended Video

ಉದ್ಧವ್‌ ಠಾಕ್ರೆ ಏನೇ ಹೇಳಿದ್ರೂ ನಮ್ಮರಾಜ್ಯದ ಯಾವ ಭಾಗವೂ ಮಹಾರಾಷ್ಟ್ರಕ್ಕೆ ಸಿಗಲ್ಲ ಡಿಕೆಶಿವಕುಮಾರ್ | Oneindia Kannada

ಕಾಂಗ್ರೆಸ್ ಕಾರ್ಯಕರ್ತರು ಜನರ ಬಳಿಗೆ ಹೋಗಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಪರಿಹರಿಸಲು ಹೋರಾಟ ನಡೆಸಬೇಕು ಎಂದು ಶಿವಕುಮಾರ್ ಕರೆ ನೀಡಿದರು.

English summary
Congress’s DK Shivakumar on Tuesday expressed solidarity with protesting farmers and announced that his party will be holding a “big protest” on Wednesday to support the farmers’ demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X