ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಣ್ಣ ಕೈಗಾರಿಕೆಗಳ ಬೆಂಬಲಿಸುವುದು ಆರ್ಥಿಕ ಉತ್ತೇಜನಕ್ಕೆ ರಹದಾರಿ'

|
Google Oneindia Kannada News

ಬೆಂಗಳೂರು, ಮೇ 4: ಲಾಕ್‌ಡೌನ್ ಸವಾಲಿನ ಈ ಸಮಯದಲ್ಲಿ ನಮ್ಮ ಆರ್ಥಿಕತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುವುದು ಮುಖ್ಯವಾಗಿದೆ ರಾಜ್ಯಸಬಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.

ಕೊರೋನ ವೈರಸ್ ಆಘಾತದ ನಂತರ ಭಾರತೀಯ ಆರ್ಥಿಕತೆಯನ್ನು ಪುನಃಸಿದ್ಧಗೊಳಿಸುದು ಹೇಗೆ ಎಂಬ ಬಗ್ಗೆ ನಡೆದ ಉದ್ಯಮಿಗಳ ಸಭೆಯಲ್ಲಿ ಅವರು ಈ ಅಭಿಪ್ರಾಯ ಮಂಡಿಸಿದರು.

ಅಕ್ರಮ ಬಾರ್, ಪಾರ್ಲರ್ ವಿರುದ್ಧ ದೂರು ಸಲ್ಲಿಸಲು ಬಿಜೆಪಿ ಸಂಸದರ ಕರೆಅಕ್ರಮ ಬಾರ್, ಪಾರ್ಲರ್ ವಿರುದ್ಧ ದೂರು ಸಲ್ಲಿಸಲು ಬಿಜೆಪಿ ಸಂಸದರ ಕರೆ

ಸಾಂಕ್ರಾಮಿಕ ರೋಗದ ಗಂಭೀರ ಸವಾಲನ್ನು ಗುರುತಿಸಿ ಅದನ್ನು ನಿರ್ಣಾಯಕವಾಗಿ ನಿಭಾಯಿಸಲು ಪ್ರಧಾನ ಮಂತ್ರಿಗಳ ಕ್ರಮಗಳನ್ನು ಎಲ್ಲರೂ ಮೆಚ್ಚಬೇಕಾಗಿದೆ. ಸೂಕ್ಷ್ಮ ಕೈಗಾರಿಕೆಗಳ ಉಳಿವಿಗಾಗಿ ಬ್ಯಾಂಕುಗಳಿಗೆ ಆರ್‌ಬಿಐ ನೀತಿ ನಿಯಮಗಳನ್ನು ರವಾನಿಸಬೇಕು ಎಂದರು. ಇಂತಹ ಸವಾಲಿನ ಕಾಲದಲ್ಲಿ ಮರುಪಾವತಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸಹಾಯ ಮಾಡಲು ಬಡ್ಡಿಯನ್ನು ಅಲ್ಪಾವಧಿಗೆ ಕಡಿಮೆ ಮಾಡುವ ಬಗ್ಗೆ ಸಹಲಹೆಗಳನ್ನು ಉದ್ಯಮಿಗಳು ಚಂದ್ರಶೇಖರ ಜೊತೆ ಹಂಚಿಕೊಂಡರು.

Give Boost For MSMEs Industries Say MP Rajeev Chandrasekhar

ರಾಜೀವ್ ಚಂದ್ರಶೇಖರ್ ಅವರೊಂದಿಗೆ ತೊಡಗಿಸಿಕೊಂಡಿರುವ ಎಂಎಸ್‌ಎಂಇಗಳು ಮತ್ತು ಉದ್ಯಮಿಗಳು ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಮತ್ತೆ ಪುಟಿಯಲು ನಿರ್ಧರಿಸಿದ್ದಾರೆ. ಆದರೆ, ಈ ಸವಾಲಿನ ಸಮಯದಲ್ಲಿ ಅವರಿಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಬೆಂಬಲ ಬೇಕಾಗುತ್ತದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ, ರಾಜೀವ್ ಅವರು ಕೇಂದ್ರ ಹಣಕಾಸು ಮಂತ್ರಿಗಳಿಗೆ, ಪ್ರಧಾನಮಂತ್ರಿಗಳಿಗೆ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ವಿವರವಾದ ಪತ್ರವೊಂದನ್ನು ಬರೆದಿದ್ದಾರೆ ಮತ್ತು ಉದ್ಯಮಿಗಳೊಂದಿಗಿನ ಅವರ ವಿಡಿಯೋ ಕಾನ್ಫ್ ರೆನ್ಸ್ ಆಧರಿಸಿ ಅವರ ಹೆಚ್ಚಿನ ಸಲಹೆಗಳನ್ನು ಪರಿಗಣಿಸುವಂತೆ ಕೋರಿದ್ದಾರೆ.

English summary
Give Boost For MSME Industries Say MP Rajeev Chandrasekhar. he done meeting with MSMEs Industries persons at bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X