• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್‌ ಶಂಕರ್ ಯೂಟರ್ನ್, ತಿರುಗಿಬಿದ್ದ ಬೆಂಬಲಿಗರು

|
Google Oneindia Kannada News

ಬೆಂಗಳೂರು, ನವೆಂಬರ್ 15: ರಾಣೆಬೆನ್ನೂರಿನಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ರಾಜೀನಾಮೆ ಕೊಡುವುದಾಗಿ ಬೆಂಬಲಿಗರನ್ನು ಕರೆದುಕೊಂಡು ಸಿಎಂ ನಿವಾಸಕ್ಕೆ ಹೋಗಿದ್ದ ಆರ್ ಶಂಕರ್ ಯೂಟರ್ನ್ ಹೊಡೆದಿದ್ದಾರೆ.

ಅರುಣ್ ಕುಮಾರ್ ಪೂಜಾರಗೆ ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಈ ಕುರಿತು ಮಾತನಾಡಲು ಹೋದವರು ಕೊನೆಗೆ ಎಂಎಲ್‌ಸಿ ಸ್ಥಾನಕ್ಕೆ ಒಪ್ಪಿಗೆ ಸೂಚಿಸಿರುವುದಕ್ಕೆ ಅವರ ಬೆಂಬಲಿಗರು ತಿರುಗಿಬಿದ್ದಿದ್ದಾರೆ.

ಟಿಕೆಟ್ ಇಲ್ಲ ಆದ್ರೆ ಆರ್‌ ಶಂಕರ್‌ಗೆ ಯಡಿಯೂಪ್ಪರಿಂದ ಹೊಸ ಆಫರ್ಟಿಕೆಟ್ ಇಲ್ಲ ಆದ್ರೆ ಆರ್‌ ಶಂಕರ್‌ಗೆ ಯಡಿಯೂಪ್ಪರಿಂದ ಹೊಸ ಆಫರ್

ಒಳಗೆ ಹೋಗುವಾಗ ಒಂದು ಮಾತಾಡಿ, ಈಗ ಹೊರಗೆ ಬಂದು ಇನ್ನೊಂದು ಮಾತನಾಡ್ತರಲ್ಲ ಎಂದು ಗರಂ ಆಗಿದ್ದಾರೆ. ಆರ್ ಶಂಕರ್ ಗೆ ಘೇರಾವ್ ಬೆಂಬಲಿಗರು ಘೇರಾವ್ ಹಾಕಿದ್ದಾರೆ. ಏನು ಸರ್ ನಿಮಗೆ ಅನ್ಯಾಯ ಆಗಿದೆ ಅಂತಾ ನಾವು ಅಷ್ಟು ಪ್ರತಿಭಟನೆ ಮಾಡಿದ್ರೆ, ನೀವು ಹೋಗಿ ಯಡಿಯೂರಪ್ಪ ಜೊತೆ ಒಪ್ಪಂದ ಮಾಡಿಕೊಂಡು ಬಂದಿದ್ದೀರ.

ಇವಾಗ ತಮ್ಮ ಮಾತನ್ನು ಬದಲಾಯಿಸುತ್ತಿದ್ದೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಇನ್ನು ಮುಂದೆ ಕ್ಷೇತ್ರದ ಕಡೆಗೆ ಬರಬೇಡಿ ಎಂದು ಪ್ರತಿಭಟಿಸಿದ ಬೆಂಬಲಿಗರು ತಿಳಿಸಿದ್ದಾರೆ. ಸುಮಾರು ಜನ ಕಣ್ಣಿರುಹಾಕಿ ಅಸಮಾಧಾನ ಹೊರಹಾಕಿದ್ದಾರೆ.

ನಿಮ್ಮನ್ನು ಎಂಎಲ್‌ಸಿ ಮಾಡುತ್ತೇವೆ ಬಳಿಕ ಮಂತ್ರಿಯಾಗಬಹುದಂತೆ ಎಂದು ಯಡಿಯೂರಪ್ಪ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಒಪ್ಪಿಕೊಂಡಿರುವ ಆರ್ ಶಂಕರ್ ನಾನು ಎಂಎಲ್‌ಸಿ ಆಗಲು ತಯಾರಿದ್ದೇನೆ. ಯಡಿಯೂರಪ್ಪ ಅವರ ಮಾತಿಗೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಆರ್‌ ಶಂಕರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
R Shankar u-tern , who had gone to the CM's residence, was hit by supporters calling for him to resign after a ticket was dropped from Ranebennur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X