ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಕ್ ಪೂರೈಕೆ; ಪತ್ರಕರ್ತನಿಂದ ಉದ್ಯಮಿಗೆ 1 ಕೋಟಿ ವಂಚನೆ!

|
Google Oneindia Kannada News

ಬೆಂಗಳೂರು, ಜೂನ್ 21 : ಕಡಿಮೆ ದರಕ್ಕೆ ಗಾರ್ಮೆಂಟ್ಸ್‌ನಿಂದ ಮಾಸ್ಕ್ ಕೊಡಿಸುವುದಾಗಿ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ವಂಚಿಸಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಈ ಕುರಿತು ದೂರು ದಾಖಲು ಮಾಡಿದ್ದಾರೆ.

Recommended Video

ಗಂಗೂಲಿ ಕುಟುಂಬದ ಮೂವರಿಗೆ ಕೊರೊನ ಸೋಂಕು | Oneindia Kannada

ವಸಂತ್ ಕುಮಾರ್ ಎಂಬ ಉದ್ಯಮಿ ಪತ್ರಕರ್ತರೊಬ್ಬರು 1 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಶನಿವಾರ ದೂರು ನೀಡಿದ್ದಾರೆ. ಉದ್ಯಮಿ ಬಳಿ ಹಣ ಪಡೆದ ಬಳಿಕ ಪತ್ರಕರ್ತ ನಾಪತ್ತೆಯಾಗಿದ್ದಾನೆ. ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ.

'ಮಾಸ್ಕ್ ದಿನ' ಆಚರಣೆ; ಮಾರ್ಗಸೂಚಿಗಳು 'ಮಾಸ್ಕ್ ದಿನ' ಆಚರಣೆ; ಮಾರ್ಗಸೂಚಿಗಳು

ಪತ್ರಕರ್ತ ಫಾಸ್ಟ್ ನ್ಯೂಸ್ ಎಂಬ ಯೂ ಟ್ಯುಬ್ ಚಾನೆಲ್ ನಡೆಸುತ್ತಾನೆ. ಕಡಿಮೆ ಬೆಲೆಯಲ್ಲಿ ಮಾಸ್ಕ್‌ಗಳನ್ನು ಪೂರೈಕೆ ಮಾಡುತ್ತೇನೆ ಎಂದು ಆತ ಉದ್ಯಮಿ ವಸಂತ್ ಕುಮಾರ್‌ಗೆ ಭರವಸೆ ನೀಡಿದ್ದ. 1 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದ.

ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ ಮೆಟ್ರೋ ಪ್ರಯಾಣಕ್ಕೆ ಆರೋಗ್ಯ ಸೇತು, ಮಾಸ್ಕ್ ಕಡ್ಡಾಯ

Supply Of Mask Journalist Cheated Industrialist

ತನಗೆ ಗಾರ್ಮೆಂಟ್ಸ್ ಮಾಲೀಕರು ಗೊತ್ತು ಎಂದು ಹೇಳಿದ್ದ ಪತ್ರಕರ್ತ, ಅಲ್ಲಿ ಮಾಸ್ಕ್ ತಯಾರು ಮಾಡುತ್ತಾರೆ. ಕಡಿಮೆ ಬೆಲೆಯಲ್ಲಿ ಅವುಗಳನ್ನು ನಿಮಗೆ ಪೂರೈಕೆ ಮಾಡುತ್ತೇನೆ ಎಂದು ಹೇಳಿದ್ದ. ಇದಕ್ಕಾಗಿ ಹಣವನ್ನು ಪಡೆದಿದ್ದ.

 ಕರ್ನಾಟಕ ಬ್ಯಾಂಕ್‌ಗೆ 4 ಕಂಪನಿಗಳಿಂದ 285 ಕೋಟಿ ರುಪಾಯಿ ವಂಚನೆ ಕರ್ನಾಟಕ ಬ್ಯಾಂಕ್‌ಗೆ 4 ಕಂಪನಿಗಳಿಂದ 285 ಕೋಟಿ ರುಪಾಯಿ ವಂಚನೆ

ಹಣ ಪಡೆದ ದಿನದಿಂದ ಆತನ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮನ್ನು ಭೇಟಿ ಸಹ ಮಾಡಿಲ್ಲ ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

English summary
Journalist who runs Youtube channel cheated industrialist by taking 1 crore Rs by assuring to supply mask from garment unit. Complaint field in Rajarajeshwari nagar police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X