ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗವಿ ಗಂಗಾಧೇಶ್ವರನಿಗೆ ಸೂರ್ಯ ರಶ್ಮಿ ಸಿಂಚನ: ಶುಭ ಫಲದ ಸೂಚನೆ

|
Google Oneindia Kannada News

ಬೆಂಗಳೂರು, ಜ 15: ಪ್ರತೀ ಮಕರ ಸಂಕ್ರಾಂತಿ ಪುಣ್ಯಕಾಲದಂದು ನಡೆಯುವ ವಿಸ್ಮಯ, ನಗರದ ಪುರಾತನ ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿಯ ಅಭಿಷೇಕ ಶುಕ್ರವಾರ (ಜ 14) ಸಂಜೆ ನಡೆದಿದೆ. ಎರಡು ನಿಮಿಷ ಶಿವಲಿಂಗವನ್ನು ಸೂರ್ಯ ಸ್ಪರ್ಶಿಸಿದ್ದು ಇನ್ನೊಂದು ವಿಸ್ಮಯವಾಗಿತ್ತು.

ಈ ಕೌತುಕವನ್ನು ವೀಕ್ಷಿಸಲು ಭಕ್ತಾದಿಗಳಿಗೆ ದೇವಾಲಯದ ಹೊರಗೆ ಬೃಹತ್ ಎಲ್ಇಡಿ ಪರದೆಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೊರೊನಾ ಹಾವಳಿಯಿಂದಾಗಿ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು.

ಕೋಡಿಶ್ರೀಗಳು ಭವಿಷ್ಯ ನುಡಿದಿದ್ದ ಬಹುದೊಡ್ಡ ದುರಂತಕ್ಕೆ ಇನ್ನು ಒಂದೇ ದಿನ!ಕೋಡಿಶ್ರೀಗಳು ಭವಿಷ್ಯ ನುಡಿದಿದ್ದ ಬಹುದೊಡ್ಡ ದುರಂತಕ್ಕೆ ಇನ್ನು ಒಂದೇ ದಿನ!

ಶಿವಲಿಂಗಕ್ಕೆ ರಶ್ಮಿ ಸ್ಪರ್ಶಿಸಲು ಆರಂಭವಾಗುತ್ತಿದ್ದಂತೆಯೇ ರುದ್ರ ಪಠಣದೊಂದಿಗೆ ರುದ್ರಾಭಿಷೇಕ ನಡೆಸಲಾಯಿತು. ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ ಹದಿನೈದರಂದು ಆಚರಿಸಲಾಗುತ್ತಿದೆ, ಆದರೆ, ಒಂದು ದಿನದ ಮೊದಲೇ ಶಿವನಿಗೆ ರಶ್ಮಿ ಸಿಂಚನವಾಗಿದೆ.

ಕಳೆದ ಬಾರಿ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯ ರಶ್ಮಿಯು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ. ಇದೊಂದು ಅಪಶುಕನದ ಮುನ್ಸೂಚನೆಯೆಂದು ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದರು. ಅದರಂತೇ, ಇಡೀ ವರ್ಷ ಕೊರೊನಾ ಛಾಯೆಯಲ್ಲೇ ಜನರು ಕಳೆಯುವಂತಾಯಿತು. ಆದರೆ, ಈ ವರ್ಷ ಶುಭ ಶಕುನವಿದೆ ಎಂದು ಅರ್ಚಕರು ಭವಿಷ್ಯ ನುಡಿದಿದ್ದಾರೆ.

ಜನವರಿ 14ಕ್ಕೆ ಆಚರಿಸುತ್ತಿದ್ದ ಮಕರ ಸಂಕ್ರಾಂತಿ 15ಕ್ಕೆ ಏಕೆ? ಲೆಕ್ಕಾಚಾರ ಹೀಗೆ!ಜನವರಿ 14ಕ್ಕೆ ಆಚರಿಸುತ್ತಿದ್ದ ಮಕರ ಸಂಕ್ರಾಂತಿ 15ಕ್ಕೆ ಏಕೆ? ಲೆಕ್ಕಾಚಾರ ಹೀಗೆ!

 ಗಂಗಾಧರನ ಗುಡಿಯಲ್ಲಿ ಮೋಡದಿಂದಾಗಿ ಬೆಳಕಿನ ಆಟ ನಡೆಯಿರಲಿಲ್ಲ

ಗಂಗಾಧರನ ಗುಡಿಯಲ್ಲಿ ಮೋಡದಿಂದಾಗಿ ಬೆಳಕಿನ ಆಟ ನಡೆಯಿರಲಿಲ್ಲ

ಕಳೆದ ವರ್ಷ ಅಪರೂಪಕ್ಕೆ ಎನ್ನುವಂತೆ ವರ್ಷಕ್ಕೊಮ್ಮೆ ನಡೆಯುವ ವಿಸ್ಮಯ ನಡೆದಿರಲಿಲ್ಲ. ಗಂಗಾಧರನ ಗುಡಿಯಲ್ಲಿ ಮೋಡದಿಂದಾಗಿ ಬೆಳಕಿನ ಆಟ ನಡೆಯಿರಲಿಲ್ಲ, ಶಿವಲಿಂಗಕ್ಕೆ ಬೆಳಕಿನ ಆಭರಣ ತೊಡಲಿರಲಿಲ್ಲ. 53 ವರ್ಷಗಳಲ್ಲಿ ಮೊದಲ ಬಾರಿಗೆ ಹೋದ ವರ್ಷ ಸೂರ್ಯ ರಶ್ಮಿ ಸ್ಪರ್ಶಿಸಿರಲಿಲ್ಲ. ಇದೊಂದು ಗಂಢಾಂತರದ ಮುನ್ಸೂಚನೆಯೆಂದೇ ವ್ಯಾಖ್ಯಾನಿಸಲಾಗಿತ್ತು. ಅದರಂತೆಯೇ, ಇಡೀ ವರ್ಷ ಕೊರೊನಾ ಹಾವಳಿಯಿಂದಾಗಿ ಜನರ ಬದುಕು ಹೈರಾಣವಾಗಿತ್ತು. ಆದರೆ, ಈ ವರ್ಷ ಬೆಳಕಿನ ವಿಸ್ಮಯ ನಡೆದಿದೆ.

 ನಂದೀಶ್ವರನ ಎರಡು ಕೊಂಬುಗಳ ನಡುವಿನಿಂದ ಹಾದು ಗರ್ಭಗುಡಿಗೆ

ನಂದೀಶ್ವರನ ಎರಡು ಕೊಂಬುಗಳ ನಡುವಿನಿಂದ ಹಾದು ಗರ್ಭಗುಡಿಗೆ

ಸಂಜೆ 5.18ಕ್ಕೆ ಸುಮಾರಿಗೆ ನಂದೀಶ್ವರನ ಎರಡು ಕೊಂಬುಗಳ ನಡುವಿನಿಂದ ಹಾದು ದೇವಾಲಯದ ಗರ್ಭಗುಡಿಯನ್ನು ಸೂರ್ಯ ನಿಧಾನವಾಗಿ ಪ್ರವೇಶಿಸಿತ್ತಾ, ನಂತರ ಸಂಪೂರ್ಣವಾಗಿ ಶಿವಲಿಂಗವನ್ನು ಆವರಿಸಿದ. ಆರು ನಿಮಿಷ ಗರ್ಭಗುಡಿಯಲ್ಲಿ ಎರಡು ನಿಮಿಷ ಶಿವಲಿಂಗದ ಮೇಲೆ ಸೂರ್ಯ ಪ್ರಜ್ವಲಿಸಿದ್ದು ವಿಶೇಷವಾಗಿತ್ತು. ಆ ವೇಳೆ, ರುದ್ರಾಭಿಷೇಕ ಮತ್ತು ರುದ್ರಪಠಣದ ನಂತರ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಸೋಮಸುಂದರ ದೀಕ್ಷಿತರು ಎಲ್ಲವೂ ಶುಭ ಶಕುನದ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ.

 ದೇವಾಲಯದ ಪ್ರಧಾನ ಅರ್ಚಕರಾದ ಡಾ.ಸೋಮಸುಂದರ ದೀಕ್ಷಿತರು

ದೇವಾಲಯದ ಪ್ರಧಾನ ಅರ್ಚಕರಾದ ಡಾ.ಸೋಮಸುಂದರ ದೀಕ್ಷಿತರು

"ಸೂರ್ಯನು ಶಿವಲಿಂಗದ ಮೇಲೆ ಪ್ರಜ್ವಲಿಸಿದ ಅವಧಿ ಶುಭ ಶಕುನದ ಮುನ್ಸೂಚನೆ. ಮೇ ತಿಂಗಳ ನಂತರ ಲೋಕಕ್ಕೆ ಕಲ್ಯಾಣವಾಗಲಿದೆ. ಈ ವರ್ಷವು ಎಲ್ಲವೂ ಮಂಗಳಕರವಾಗಲಿದೆ ಎನ್ನುವ ಸೂಚನೆಯನ್ನು ಸ್ವಾಮಿ ನಮಗೆಲ್ಲಾ ನೀಡಿದ್ದಾನೆ. ಆರು ನಿಮಿಷಗಳ ಕಾಲ ಸೂರ್ಯ ಗರ್ಭಗುಡಿಯಲ್ಲಿ ಪ್ರಜ್ವಲಿಸಿದ್ದು ವಿಶೇಷ. ಕಳೆದ ವರ್ಷ ಹೀಗಾಗಿರಲಿಲ್ಲ" ಎಂದು ಡಾ.ಸೋಮಸುಂದರ ದೀಕ್ಷಿತರು ಹೇಳಿದ್ದಾರೆ.

 ಸೂರ್ಯನು ಮಕರ ರಾಶಿಯನ್ನು (ಧನುರ್ ರಾಶಿಯಿಂದ) ಪ್ರವೇಶಿಸುತ್ತಾನೆ,

ಸೂರ್ಯನು ಮಕರ ರಾಶಿಯನ್ನು (ಧನುರ್ ರಾಶಿಯಿಂದ) ಪ್ರವೇಶಿಸುತ್ತಾನೆ,

ಸೂರ್ಯನು ಮಕರ ರಾಶಿಯನ್ನು (ಧನುರ್ ರಾಶಿಯಿಂದ) ಪ್ರವೇಶಿಸುತ್ತಾನೆ, ಪ್ರತಿ ವರ್ಷ ಇಂಗ್ಲಿಷ್ ಸಮಯ ಅಥವಾ ವಿಶ್ವ ಸಮಯಕ್ಕೆ ಹೋಲಿಸಿದರೆ 20 ನಿಮಿಷಗಳು ತಡವಾಗಿ. ಹೀಗೆ 3 ವರ್ಷಕ್ಕೊಮ್ಮೆ ಸೂರ್ಯನು ಒಂದು ಗಂಟೆ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅಂದರೆ, 72 ವರ್ಷಗಳ ಪ್ರತಿ ಚಕ್ರದಲ್ಲಿ, ಸೂರ್ಯನು ಒಂದು ದಿನ ತಡವಾಗಿ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ, ಕಳೆದ ಕೆಲವು ವರ್ಷಗಳಿಂದ ಮಕರ ಸಂಕ್ರಾಂತಿಯನ್ನು ಜನವರಿ ಹದಿನೈದರಂದು ಆಚರಿಸಲಾಗುತ್ತಿದೆ.

1935ರಿಂದ 2007ರವರೆಗೆ, ಪ್ರತೀ ವರ್ಷ ಜನವರಿ 14ರಂದು ಮಾತ್ರ ಸಂಕ್ರಾಂತಿ ಹಬ್ಬ ಬರುತ್ತಿತ್ತು. ಅದಕ್ಕಿಂತ ಮೊದಲು ಅಂದರೆ 1862 ರಿಂದ 1934ರವರೆಗೆ, ಅದು ಪ್ರತಿ ವರ್ಷ ಜನವರಿ 13 ರಂದು ಬೀಳುತ್ತಿತ್ತು. ಆದರೆ 2008 ರಿಂದ, ಪ್ರತಿ ವರ್ಷ ಜನವರಿ 15 ರಂದು ಸಂಕ್ರಾಂತಿ ಬರುತ್ತಿದೆ. 2080ರ ವರೆಗೆ, ಇದು ಪ್ರತಿ ವರ್ಷ ಜನವರಿ 15 ರಂದೇ ಬರುತ್ತದೆ. 2081ರಿಂದ ಮುಂದಿನ 72 ವರ್ಷಗಳವರೆಗೆ, ಅಂದರೆ 2153ರವರೆಗೆ ಪ್ರತಿ ವರ್ಷ ಜನವರಿ 16 ರಂದು ಮಕರ ಸಂಕ್ರಾಂತಿ ಬರಲಿದೆ.

Recommended Video

ರೊಚ್ಚಿಗೆದ್ದು ಮಾತನಾಡಿದ ರಾಹುಲ್ ಕೊಹ್ಲಿ ಮಾತು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ | Oneindia Kannada

English summary
Sunray Falling On Shivalinga At Gavi Gangadhareshwara Temple In Bengaluru,Good Sign. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X