ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಲ್‌ : ಬಿಎಂಟಿಸಿ, ಮೆಟ್ರೋದಿಂದ ಹೆಚ್ಚುವರಿ ಸೇವೆ

By Ashwath
|
Google Oneindia Kannada News

ಬೆಂಗಳೂರು, ಮೇ.4: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಬೆಂಗಳೂರು,ಹೈದರಾಬಾದ್‌ ತಂಡಗಳ ಕ್ರಿಕೆಟ್‌ ವೀಕ್ಷಿಸಲು ಆಗಮಿಸುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ. ಐಪಿಎಲ್‌ ಪ್ರಯುಕ್ತ ಪ್ರೇಕ್ಷಕರ ಅನುಕೂಲಕ್ಕಾಗಿ ನಗರದಲ್ಲಿ ಹೆಚ್ಚುವರಿಯಾಗಿ ಬಿಎಂಟಿಸಿ ಮತ್ತು ಮೆಟ್ರೋ ರೈಲುಗಳು ಸಂಚರಿಸಲಿವೆ.

ಭಾನುವಾರ ಸಂಜೆ 5 ರಿಂದ ರಾತ್ರಿ 8ರವರೆಗೆ ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣಕ್ಕೆ ಹೆಚ್ಚುವರಿಯಾಗಿ ವೋಲ್ವೋ ಬಸ್‌ಗಳು ಸಂಚರಿಸಲಿವೆ. ಪಂದ್ಯ ಮುಗಿದ ಬಳಿಕವೂ ಪ್ರೇಕ್ಷಕರು ಮನೆಗೆ ತರೆಳಲು ರಾತ್ರಿ 11ರ ನಂತರವೂ ಹೆಚ್ಚುವರಿ ವೋಲ್ವೋ ಬಸ್‌ಗಳನ್ನು ಓಡಿಸಲಾಗುವುದು ಎಂದು ಬಿಎಂಟಿಸಿ ಹೇಳಿದೆ.[ಐಪಿಎಲ್ ಪಂದ್ಯಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್]

IPL bash -BMTC and namma metro

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ ಬಸ್‌ ಸಂಖ್ಯೆ ವಿ-335ಇ, ಬನ್ನೇರುಘಟ್ಟ ನಿಲ್ದಾಣಕ್ಕೆ ಬಸ್‌ ಸಂಖ್ಯೆ ವಿ-365, ಅತ್ತಿಬೆಲೆಗೆ ವಿ-360 ಬಸ್‌ ಗಳು ಸಂಚರಿಸಲಿದೆ. ಮಾರಾಟವಾದ ಟಿಕೆಟ್‌ಗಳ ಆಧಾರದ ಮೇಲೆ ಹೆಚ್ಚುವರಿ ಬಸ್‌ಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚುವರಿ ಮೆಟ್ರೋ ಸೇವೆ: ಐಪಿಎಲ್‌ ಪ್ರಯುಕ್ತ ಮೆಟ್ರೋ ರೈಲುಗಳು ತಡರಾತ್ರಿ 12.20ರವರಗೆ ಸಂಚರಿಸಲಿದೆ. ಮಹಾತ್ಮ ಗಾಂಧಿ ರಸ್ತೆ- ಬೈಯಪ್ಪನಹಳ್ಳಿ ಮಾರ್ಗದ ಮಧ್ಯೆ ರೈಲುಗಳು ಸಾಮಾನ್ಯವಾಗಿ ರಾತ್ರಿ 10 ಗಂಟೆಯವರೆಗೆ ಸಂಚರಿಸುತ್ತವೆ. ಆದರೆ ಇಂದು ಪ್ರೇಕ್ಷಕರ ಅನುಕೂಲಕ್ಕಾಗಿ ಪ್ರತಿ 20 ನಿಮಿಷಕ್ಕೊಮ್ಮೆ ತಡರಾತ್ರಿ 12.20ವರೆಗೆ ಸಂಚರಿಸಲಿದೆ ಎಂದು ಬೆಂಗಳೂರು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

English summary
BMTC will operate extra buses and from different parts of the City for the convenience of cricket fans travelling to Chinnaswamy Stadium to watch IPL match on May 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X