ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲೂ ಭಾನುವಾರದ ಲಾಕ್ ಡೌನ್ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜುಲೈ.26: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಪ್ರತಿನಿತ್ಯ 5000ದ ಗಡಿ ದಾಟುತ್ತಿದೆ. ಈ ಹಿನ್ನೆಲೆ ಇನ್ನೂ ಮೂರು ವಾರಗಳ ಕಾಲ ಭಾನುವಾರದ ಲಾಕ್ ಡೌನ್ ವಿಸ್ತರಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.

Recommended Video

Karnataka Government ಒಂದು ವರ್ಷದ ಸಾಧನೆ ಕುರಿತ ಪುಸ್ತಕ ಬಿಡಗಡೆ | Oneindia Kannada

ದೇಶಾದ್ಯಂತ ಎರಡನೇ ಅವಧಿ ಅನ್ ಲಾಕ್ ಮಾರ್ಗಸೂಚಿಯು ಐದು ದಿನಗಳಲ್ಲೇ ಅಂತ್ಯಗೊಳ್ಳಲಿದೆ. ಆಗಸ್ಟ್.01ರಿಂದ ಅನ್ ಲಾಕ್-3 ಮಾರ್ಗಸೂಚಿ ಜಾರಿಗೊಳಿಸಲು ಕೇಂದ್ರ ಸರ್ಕಾರವು ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ರಾಜ್ಯ ಸರ್ಕಾರವು ಮಹತ್ವ ತೀರ್ಮಾನವನ್ನು ತೆಗೆದುಕೊಂಡಿದೆ.

ಸಂಡೇ ಲಾಕ್ ಡೌನ್: ರಾಜ್ಯದ ವಿವಿಧ ಜಿಲ್ಲೆಗಳ ಅಪ್ಡೇಟ್ಸ್ಸಂಡೇ ಲಾಕ್ ಡೌನ್: ರಾಜ್ಯದ ವಿವಿಧ ಜಿಲ್ಲೆಗಳ ಅಪ್ಡೇಟ್ಸ್

ಆಗಸ್ಟ್ ತಿಂಗಳಿನಲ್ಲಿಯೂ ಭಾನುವಾರದ ಲಾಕ್ ಡೌನ್ ಮುಂದುವರಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಒಲವು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಇನ್ನೂ ಮೂರು ವಾರಗಳ ಕಾಲ ಲಾಕ್ ಡೌನ್ ಮುಂದುವರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.

Sunday Lockdown Extended Another 3 Week In Karnataka Due To Coronavirus Spreading

ಜುಲೈ.27ರಂದು ಸಿಎಂಗಳ ಜೊತೆ ಪ್ರಧಾನಿ ಸಭೆ:

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಅನ್ ಲಾಕ್-2 ಮಾರ್ಗಸೂಚಿಗಳನ್ನು ಪಾಲಿಸುವಂತೆ ಈ ಹಿಂದೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿತ್ತು. ಜುಲೈ.31ರಂದು ಈ ಮಾರ್ಗಸೂಚಿಗಳ ಅವಧಿ ಪೂರ್ಣಗೊಳ್ಳಲಿದ್ದು, ರಾಜ್ಯಗಳಲ್ಲಿನ ಕೊರೊನಾವೈರಸ್ ಸೋಂಕಿನ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜುಲೈ.27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ಯಾವ ರೀತಿಯ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎನ್ನುವ ಬಗ್ಗೆ ಕೇಂದ್ರ ಸರ್ಕಾರವು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

English summary
Sunday Lockdown Extended Another 3 Week In Karnataka Due To Coronavirus Spreading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X