ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರವನ್ನೇ ಟಾರ್ಗೆಟ್ ಮಾಡಿಕೊಂಡ ಸರಗಳ್ಳರು

|
Google Oneindia Kannada News

ಬೆಂಗಳೂರು, ಅಕ್ಟೋಬರ್, 12: ಸರಗಳ್ಳರು ಭಾನುವಾರವನ್ನೇ ಟಾರ್ಗೆಟ್ ಮಾಡಿಕೊಂಡಂತಿದೆ. ಜನ ಸಂಚಾರ ವಿರಳವಾಗಿರುತ್ತದೆ ಎಂಬುದು ಅದಕ್ಕೆ ಕಾರಣ ಇರಬಹುದು.

ಭಾನುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾರಣ್ಯಪುರದಲ್ಲಿ ಇಬ್ಬರು ಮಹಿಳೆಯರ ಸರ ಕಳ್ಳತನ ಮಾಡಲಾಗಿದೆ. ಮತ್ತೊಂದೆಡೆ ಬ್ಲ್ಯಾಕ್ ಪಲ್ಸರ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪೀಣ್ಯ ಎಂವಿಐ ಲೇಔಟ್‌ನಲ್ಲಿ ಮಹಿಳೆಯ ಸರ ಅಪಹರಣಕ್ಕೆ ಯತ್ನಿಸಿ ಪರಾರಿಯಾಗಿದ್ದಾರೆ.[ಈ ಎರಡು ಕೆಜಿ ಚಿನ್ನದಲ್ಲಿ ನಿಮ್ಮ ಸರವೂ ಇದೆಯಾ ನೋಡಿ?]

sunday-chain-snatching-incidents-continues-in-bengaluru

ವಿದ್ಯಾರಣ್ಯಪುರ ವ್ಯಾಪ್ತಿಯ ಬಿಇಎಲ್ 3ನೇ ಬ್ಲಾಕ್ ನಿವಾಸಿ ಭಾನುಮತಿ (65) ಎಂಬುವರು ತರಕಾರಿ ತರಲು ಹತ್ತಿರದ ಅಂಗಡಿಗೆ ಹೋಗುತ್ತಿದ್ದಾಗ ಹಿಂದಿನಿಂದ ನಡೆದುಕೊಂಡು ಬಂದ ದುಷ್ಕರ್ಮಿ 70 ಗ್ರಾಂ ಸರ ಕಿತ್ತುಕೊಂಡಿದ್ದಾನೆ. ಮಹಿಳೆ ಸಹಾಯಕ್ಕಾಗಿ ಕೂಗಿದ್ದಾಳೆ ಆದರೆ ಜನರು ಆಗಮಿಸುವಷ್ಟರಲ್ಲಿ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯ ಜತೆ ಕಳ್ಳ ಪರಾರಿಯಾಗಿದ್ದಾನೆ.[ಬಜಾಜ್ ಪಲ್ಸರ್ ವಿಶೇಷತೆಯೇನು?]

ಕಾಮಾಕ್ಷಿಪಾಳ್ಯದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಮೀಪದ ಬಿಡಿಎ ಲೇಔಟ್‌ನ ಲತಾ (50) ಎಂಬುವರು ಸಮೀಪದ ಅಂಗಡಿಯಿಂದ ತರಕಾರಿ ಖರೀದಿಸಿ ಮನೆಗೆ ವಾಪಸಾಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಲತಾ ಅವರಿಂದ 100 ಗ್ರಾಂ ಚಿನ್ನದ ಸರ ದೋಚಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಬಂದರು
ಪೀಣ್ಯ ಎಂವಿಐ ಲೇಔಟ್‌ನಲ್ಲಿ ರಮಾಲಕ್ಷ್ಮಮ್ಮ (65) ಎಂಬುವರು ಮನೆ ಮುಂದೆ ನಿಂತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಬಳಿ ಬಂದ ದುಷ್ಕರ್ಮಿಯೊಬ್ಬ ಅವರ ಕುತ್ತಿಗೆಗೆ ಕೈ ಹಾಕಿ ಸರ ದೋಚಲು ಪ್ರಯತ್ನ ಮಾಡಿದ್ದಾನೆ. ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಲಕ್ಷ್ಮಮ್ಮ ಕೂಗಿಕೊಂಡಿದ್ದಾರೆ. ಲಕ್ಷ್ಮಮ್ಮನ ಚೀರಾಟ ಕೇಳಿಸಿ ಮನೆಯಲ್ಲಿದ್ದ ಕುಟುಂಬ ಸದಸ್ಯರು ಹೊರಬರುತ್ತಿದ್ದಂತೆ ಹೆದರಿದ ಆರೋಪಿ ಪರಾರಿಯಾಗಿದ್ದಾನೆ. ಹಿಂದೆ ನಡೆದ ಬಹುತೇಕ ಸರಗಳ್ಳತ ಪ್ರಕರಣಗಳು ಭಾನುವಾರವೇ ನಡೆದಿದ್ದವು.

English summary
Bengaluru: Two Chain snatching incidents happen on Sunday, October 11. The first incident, a homemaker was robbed of her gold chain on Sunday noon. According to the police, Latha, a resident of BDA Layout in Kamakshipalya, was buying vegetables when two motorcycle-borne men snatched away her gold chain weighing 100 grams before fleeing from the spot. The Kamakshipalya police are trying to obtain the CCTV camera footage to trace the robbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X