ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ

|
Google Oneindia Kannada News

ಬೆಂಗಳೂರು, ಜ 15: ಪ್ರತೀವರ್ಷ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಐತಿಹಾಸಿಕ ಗವಿಗಂಗಾಧರೇಶ್ವರನನ್ನು ಸೂರ್ಯರಶ್ಮಿ ಸ್ಪರ್ಶಿಸುವ ಪ್ರಕೃತಿಯ ಅಚ್ಚರಿ ಈ ಬಾರಿ ನಡೆಯಲಿಲ್ಲ.

ಸೂರ್ಯಾಸ್ತವಾಗುವ ವೇಳೆ ಶಿವಲಿಂಗಕ್ಕೆ ಸೂರ್ಯರಶ್ಮಿಯ ಅಭಿಷೇಕವಾಗುತ್ತಿತ್ತು, ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಆದರೆ, ಸಂಕ್ರಾಂತಿಯ ದಿನದಂದು ಮೋಡಕವಿದ ವಾತಾವರಣ ಇದ್ದಿದ್ದರಿಂದ ಈ ಬಾರಿ ಸೂರ್ಯರಶ್ಮಿಯ ಸ್ಪರ್ಶವಾಗಲಿಲ್ಲ.

ಸಂಕ್ರಾಂತಿ 2021ರ ವಿಶೇಷ: ತುಲಾದಿಂದ ಮೀನದ ತನಕ ರಾಶಿ ಭವಿಷ್ಯಸಂಕ್ರಾಂತಿ 2021ರ ವಿಶೇಷ: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ

ಸಂಜೆ 5.17ನಿಮಿಷಕ್ಕೆ ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತು. ಸೂರ್ಯರಶ್ಮಿಯ ಪ್ರವೇಶ ದೇವಾಲಯ ಮತ್ತು ಗರ್ಭಗುಡಿಯೊಳಗೆ ಆದರೂ, ಅದು ಪ್ರತೀವರ್ಷ ನಡೆಯುವಂತೆ ಶಿವಲಿಂಗಕ್ಕೆ ಸ್ಪರ್ಶವಾಗಲಿಲ್ಲ. ಇದು ನಡೆಯದೇ ಇದ್ದಿದ್ದರಿಂದ ಗಂಗಾಧರೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

 ಸಂಕ್ರಾಂತಿ 2021ರ ವಿಶೇಷ: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ ಸಂಕ್ರಾಂತಿ 2021ರ ವಿಶೇಷ: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ

ಈ ಬಗ್ಗೆ ವಿವರಣೆಯನ್ನು ನೀಡಿರುವ ದೇವಾಲಯದ ಪ್ರಧಾನ ಆರ್ಚಕರಾದ ಸೋಮಸುಂದರ್ ದೀಕ್ಷಿತ್ ಅವರು, "ಸೂರ್ಯನ ರಶ್ಮಿ ಶಿವಲಿಂಗಕ್ಕೆ ಬೀಳದೇ ಇರುವುದರಿಂದ ತಪ್ಪು ಕಲ್ಪನೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ"ಎಂದು ಹೇಳಿದ್ದಾರೆ.

ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ

ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ

"ಸೂರ್ಯದ್ವಾರದಿಂದ, ಶಿವದ್ವಾರದಿಂದ, ಬಸವಣ್ಣನನ್ನು ಪೂರ್ತಿ ಆವರಿಸಿ, ಅಲ್ಲಿಂದ ಶೃಂಗಗಳ ಮಧ್ಯದಿಂದ ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ ಮಾಡಿದಾಗ, ಅಲ್ಲಿಗೆ ದಕ್ಷಿಣಾಯಣ ಮುಗಿಯುತು ಎನ್ನುವುದು ಪ್ರತೀತಿ. ದಕ್ಷಿಣಾಯಣದಿಂದ ಉತ್ತರಾಯಾಣಕ್ಕೆ ಬರುವ ಆರಂಭದ ಎರಡು ನಿಮಿಷ ಯಾವಾಗಲೂ ಸೂರ್ಯನ ಬೆಳಕು ಇರುವುದಿಲ್ಲ"ಎಂದು ದೀಕ್ಷಿತರು ಹೇಳಿದ್ದಾರೆ.

ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು

ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು

ಮೋಡಕವಿದ ವಾತಾವರಣ ಇದ್ದಿದ್ದರಿಂದ, ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುವಾಗ, ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತೋ,ಅದು ಆಗಿಲ್ಲ. ಕಳೆದ ಬಾರಿ 2.36ನಿಮಿಷ ಸೂರ್ಯರಶ್ಮಿ ಶಿವಲಿಂಗದ ಮೇಲೆ ಇತ್ತು.ಆಗಲೇ, ಜಗತ್ತಿಗೆ ತೊಂದರೆ ಇದೆ ಎನ್ನುವುದನ್ನು ನಾನು ಹೇಳಿದ್ದೆ. ಅದರಂತೇ, ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು. ಅದೇ ರೀತಿ, ಈ ಬಾರಿಯ ಘಟನೆಯೂ ಒಳ್ಳೆಯ ಲಕ್ಷಣವಲ್ಲ"ಎಂದು ದೀಕ್ಷಿತರು ಅಭಿಪ್ರಾಯ ಪಟ್ಟಿದ್ದಾರೆ.

ಯುದ್ದ ನಡೆಯುವ ಸಂಭವ ಇರಬಹುದು

ಯುದ್ದ ನಡೆಯುವ ಸಂಭವ ಇರಬಹುದು

"ಸ್ವಾಮಿ ಈ ಬಾರಿ ನಗೋಚರವಾಗಿ ಪೂಜೆಯನ್ನು ಮಾಡಿಸಿಕೊಂಡು ಹೋಗಿದ್ದಾನೆ. ಇದೇ ಕಾಲದಲ್ಲಿ ಮಹಾಭಾರತದ ಯುದ್ದ ನಡೆದದ್ದು, ಭೀಷ್ಮರು ಶರಶಯ್ಯೆಯಿಂದ ದೇಹ ವಿಸರ್ಜನೆ ಮಾಡಿದ್ದದ್ದು. ಯುದ್ದ ನಡೆಯುವ ಸಂಭವ ಇರಬಹುದು, ಆ ರೀತಿ ಆಗಬಾರದೆಂದು ವಿಶೇಷ ಸಂಕಲ್ಪ ಪೂಜೆಯನ್ನು ಮಾಡಿದ್ದೇವೆ. ನನ್ನ 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ"ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

Recommended Video

Yediyurappa ಮತ್ತು Vijayendra ನ ಮಾಯ ಜಾಲ!!| Oneindia Kannada
ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು

ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು

"ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು. ಮಹಾಭಾರತದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನಿಕರು ಮೃತಪಟ್ಟಿದ್ದರು. ಲಯಕರ್ತನಾದ ಶಿವನನ್ನು ಮೃತ್ಯುಂಜಯ ಜಪ/ಹೋಮದ ಮೂಲಕ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ನಾವು ಅತಿರುದ್ರ ಹೋಮ ನಡೆಸುವುದಾಗಿ ಸಂಕಲ್ಪವನ್ನು ಮಾಡಿದ್ದೇವೆ"ಎಂದು ದೀಕ್ಷಿತ್ ಹೇಳಿದ್ದಾರೆ.

English summary
Sun Rays Miss Touching Bengaluru's Gavi Gangadareshwara Temple Shivalinga This Time , A War Time Forcasted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X