ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಸುಮನಹಳ್ಳಿ ಫ್ಲೈ ಓವರ್ ಮತ್ತೆ ಬಂದ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ನಾಯಂಡಹಳ್ಳಿ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಫ್ಲೈ ಓವರ್‌ ಮೇಲೆ ವಾಹನ ಸಂಚಾರ ಮತ್ತೆ ಬಂದ್ ಆಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫ್ಲೈ ಓವರ್ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದೆ.

ನವೆಂಬರ್ ತಿಂಗಳಿನಲ್ಲಿ ಫ್ಲೈ ಓವರ್‌ನಲ್ಲಿ 6*4 ಅಳತೆಯ ಗುಂಡಿ ಕಾಣಿಸಿಕೊಂಡಿತ್ತು. ಆದ್ದರಿಂದ, ಸುಮಾರು 15 ದಿನಗಳ ಕಾಲ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದ್ದರು.

ಲಘು ವಾಹನಕ್ಕೆ ಸುಮನಹಳ್ಳಿ ಫ್ಲೈ ಓವರ್ ಮುಕ್ತಲಘು ವಾಹನಕ್ಕೆ ಸುಮನಹಳ್ಳಿ ಫ್ಲೈ ಓವರ್ ಮುಕ್ತ

ಈಗ ಒಂದು ತಿಂಗಳ ಕಾಲ ಸುಮನಹಳ್ಳಿ ಫ್ಲೈ ಓವರ್ ಬಂದ್ ಆಗಲಿದೆ. ಕಾಮಗಾರಿಯನ್ನು ಎಂದು ಆರಂಭಿಸಬೇಕು ಎಂದು ಬಿಬಿಎಂಪಿ ಇನ್ನು ಅಧಿಕೃತ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಡಿಸೆಂಬರ್ 20ರ ಬಳಿಕ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಸುಮನಹಳ್ಳಿ ಆಯ್ತು ಈಗ ಮತ್ತೊಂದು ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ ಸುಮನಹಳ್ಳಿ ಆಯ್ತು ಈಗ ಮತ್ತೊಂದು ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ

2007ರಲ್ಲಿ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಾಗ ಫ್ಲೈ ಓವರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಯಿತು. ಬಿಡಿಎ ಫ್ಲೈ ಓವರ್ ನಿರ್ಮಾಣದ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತು. 2010ರಲ್ಲಿ ಫ್ಲೈ ಓವರ್ ಲೋಕಾರ್ಪಣೆಗೊಂಡಿತು. 2016ರ ತನಕ ಇದರ ನಿರ್ವಹಣೆ ಬಿಡಿಎ ಕೈಯಲ್ಲಿ ಇತ್ತು, ಬಳಿಕ ಬಿಬಿಎಂಪಿಗೆ ಹಸ್ತಾಂತರವಾಯಿತು.

ಸುಮನಹಳ್ಳಿ-ಕೊಟ್ಟಿಗೆಪಾಳ್ಯ ರಸ್ತೆಗೆ ನಾಲ್ಕು ಪಥ ಸೇರ್ಪಡೆಸುಮನಹಳ್ಳಿ-ಕೊಟ್ಟಿಗೆಪಾಳ್ಯ ರಸ್ತೆಗೆ ನಾಲ್ಕು ಪಥ ಸೇರ್ಪಡೆ

ಒಂದು ಕಾಮಗಾರಿ ಮುಗಿದಿದೆ

ಒಂದು ಕಾಮಗಾರಿ ಮುಗಿದಿದೆ

ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚುವ ಕಾಮಗಾರಿಯನ್ನು ಈಗಾಗಲೇ ಬಿಬಿಎಂಪಿ ಪೂರ್ಣಗೊಳಿಸಿದೆ. ಈಗ ಫ್ಲೈ ಓವರ್‌ನ ಇತರ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ, ಒಂದು ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ.

ವಾಹನಗಳ ಸಂಚಾರ ಸ್ಥಗಿತ

ವಾಹನಗಳ ಸಂಚಾರ ಸ್ಥಗಿತ

ನಾಯಂಡಹಳ್ಳಿ ಮತ್ತು ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಫ್ಲೈ ಓವರ್ ಮೇಲೆ ವಾಹನ ಸಂಚಾರವನ್ನು ಪೊಲೀಸರು ನಿಷೇಧಿಸಲಿದ್ದಾರೆ. ಜನರು ಸರ್ವೀಸ್ ರಸ್ತೆಯನ್ನು ಬಳಸಿ ಸಂಚಾರವನ್ನು ನಡೆಸಬಹುದಾಗಿದೆ. ಇದರಿಂದಾಗಿ ಫ್ಲೈ ಓವರ್ ಬಂದ್ ಆದರೆ ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ.

ಏನು ಕಾಮಗಾರಿ ನಡೆಯಲಿದೆ

ಏನು ಕಾಮಗಾರಿ ನಡೆಯಲಿದೆ

ಫ್ಲೈ ಓವರ್ ಬೀಮ್, ಸ್ಲ್ಯಾಬ್‌ಗಳಲ್ಲಿ ಕಾಂಕ್ರೀಟ್ ಪದರ ಟೊಳ್ಳಾಗಿದೆ. ಸೇತುವೆ ಪಿಲ್ಲರ್ ಮತ್ತು ರಸ್ತೆಯ ನಡುವಿನ ಬೇರಿಂಗ್ ಬದಲಾವಣೆ ಮಾಡಬೇಕಿದೆ. ಈ ಕಾಮಗಾರಿ ಕೈಗೊಳ್ಳುವ ಕಾರಣ ವಾಹನ ಸಂಚಾರವನ್ನು ಬಂದ್ ಮಾಡಲಾಗುತ್ತದೆ.

ಬಿಬಿಎಂಪಿ ಹೇಳುವುದೇನು?

ಬಿಬಿಎಂಪಿ ಹೇಳುವುದೇನು?

ಸುಮನಹಳ್ಳಿ ಫ್ಲೈ ಓವರ್ ನಿರ್ವಹಣೆಯನ್ನು ಸರಿಯಾಗಿ ಮಾಡಿಲ್ಲ. ಆದ್ದರಿಂದ, ಈಗ ಕಾಮಗಾರಿ ಕೈಗೊಂಡು ದುರಸ್ತಿ ಮಾಡುವುದು ಅನಿವಾರ್ಯವಾಗಿದೆ. ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾಮಗಾರಿ ಆರಂಭದ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ.

ಮೇಯರ್ ಟ್ವೀಟ್

ಬಿಬಿಎಂಪಿ ಮೇಯರ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ತಜ್ಞರ ತಂಡ ಫ್ಲೈ ಓವರ್ ಪರಿಶೀಲನೆ ನಡೆಸಿ ಕಾಮಗಾರಿಗೆ ಎಷ್ಟು ವೆಚ್ಚವಾಗಲಿದೆ ಎಂದು ವರದಿ ನೀಡಿದೆ.

English summary
Bengaluru traffic police may close vehicle movement in Summanali flyover. BBMP will take repair work of the flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X