ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಘು ವಾಹನಕ್ಕೆ ಸುಮನಹಳ್ಳಿ ಫ್ಲೈ ಓವರ್ ಮುಕ್ತ

|
Google Oneindia Kannada News

ಬೆಂಗಳೂರು, ನವೆಂಬರ್ 19 : ಗುಂಡಿ ಬಿದ್ದಿದ್ದ ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಗುಂಡಿ ಬೆಳಕಿಗೆ ಬಂದ ಬಳಿಕ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿದ್ದ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ರಸ್ತೆ ಗುಂಡಿ ಬಿದ್ದು ಹಾಳಾಗಿತ್ತು. ಬೆಂಗಳೂರು ಮಹಾನಗರ ಪಾಲಿಕೆ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೊಂಡು ಪೂರ್ಣಗೊಳಿಸಿದೆ.

1 ವಾರದಲ್ಲಿ ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ವಾಹನ ಸಂಚಾರ 1 ವಾರದಲ್ಲಿ ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ವಾಹನ ಸಂಚಾರ

ಫ್ಲೈ ಓವರ್ ಮೇಲೆ ಈಗಾಗಲೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತಜ್ಞರು ಮತ್ತು ಅಧಿಕಾರಿಗಳು ತಪಾಸಣೆ ನಡೆಸಿ ವರದಿ ನೀಡಿದ ನಂತರ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶವನ್ನು ನೀಡಲಾಗುತ್ತದೆ.

ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ, ಸಂಚಾರ ದಟ್ಟಣೆ ಸುಮನಹಳ್ಳಿ ಫ್ಲೈ ಓವರ್‌ನಲ್ಲಿ ಗುಂಡಿ, ಸಂಚಾರ ದಟ್ಟಣೆ

2007ರಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಕಾಮಗಾರಿ ಕೈಗೊಳ್ಳಲಾಯಿತು. 2010ರಲ್ಲಿ ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು. 2016ರಲ್ಲಿ ಬಿಡಿಎ ಫ್ಲೈ ಓವರ್ ನಿರ್ವಹಣೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿತು.

ಬೆಂಗಳೂರು ರಸ್ತೆ ಗುಂಡಿ ಫೋಟೋ ಶೂಟ್ ವೈರಲ್ ಬೆಂಗಳೂರು ರಸ್ತೆ ಗುಂಡಿ ಫೋಟೋ ಶೂಟ್ ವೈರಲ್

ಆರ್. ಆರ್. ನಗರದ ವ್ಯಾಪ್ತಿಗೆ ಸೇರುತ್ತದೆ

ಆರ್. ಆರ್. ನಗರದ ವ್ಯಾಪ್ತಿಗೆ ಸೇರುತ್ತದೆ

ನಾಯಂಡಹಳ್ಳಿ-ತುಮಕೂರು ರಸ್ತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಬರುವ ಸುಮನಹಳ್ಳಿ ಫ್ಲೈ ಓವರ್ ಪಾಲಿಕೆಯ ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಗೆ ಸೇರುತ್ತದೆ. ಈ ಫ್ಲೈ ಓವರ್‌ನಲ್ಲಿ ಗುಂಡಿ ಬಿದ್ದ ಕಾರಣ ವಾಹನ ಸಂಚಾರ ನಿಷೇಧಿಸಲಾಗಿತ್ತು.

10 ದಿನ ಸಂಚಾರ ಬಂದ್

10 ದಿನ ಸಂಚಾರ ಬಂದ್

ಫ್ಲೈ ಓವರ್ ಗುಂಡಿ ಬಿದ್ದ ಮಾಹಿತಿ ತಿಳಿದ ತಕ್ಷಣ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸಂಚಾರವನ್ನು 10 ದಿನ ಬಂದ್ ಮಾಡಿದರು. ಬಿಬಿಎಂಪಿ ಮೇಯರ್, ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ದುರಸ್ತಿ ಕಾರ್ಯ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಂಚಾರ ದಟ್ಟಣೆ

ಸಂಚಾರ ದಟ್ಟಣೆ

ಸುಮನಹಳ್ಳಿ ಫ್ಲೈ ಓವರ್ ಬಂದ್ ಆಗಿದ್ದರಿಂದ ನಾಯಂಡಹಳ್ಳಿ-ತುಮಕೂರು ರಸ್ತೆ ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಫ್ಲೈ ಓವರ್ ಮೇಲೆ ಉಂಟಾಗಿದ್ದ 6*4 ಅಳತೆಯ ಗುಂಡಿಯನ್ನು ಮುಚ್ಚಲಾಗಿದ್ದು, ಈಗ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಚೆನ್ನೈ ಮೂಲದ ಕಂಪನಿ ಕಾಮಗಾರಿ

ಚೆನ್ನೈ ಮೂಲದ ಕಂಪನಿ ಕಾಮಗಾರಿ

ಸುಮನಹಳ್ಳಿ ಫ್ಲೈ ಓವರ್ ನಿರ್ಮಾಣ ಮಾಡಿದ್ದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 2010ರಲ್ಲಿ ಫ್ಲೈ ಓವರ್ ನಿರ್ಮಾಣಗೊಂಡ ಬಳಿಕ 2016ರ ತನಕ ಬಿಡಿಎ ಅದರ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಬಳಿಕ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿತ್ತು.

English summary
Summanali flyover now open for light vehicles. Bengaluru traffic police closed the vehicle movement in flyover after a pothole found in a flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X