ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಬೇಷರತ್ ಬೆಂಬಲ: ಋಣಿಯಾಗಿರುತ್ತೇನೆ ಎಂದ ಸುಮಲತಾ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಬಿಜೆಪಿಯು ನೀಡಿರುವ ಬೇಷರತ್ ಬೆಂಬಲಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ ಎಂದು ಮಂಡ್ಯದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ತಿಳಿಸಿದರು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕೃತಜ್ಞತೆ ತಿಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಪಟ್ಟಿ ಬಿಡುಗಡೆ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ ಬಿಜೆಪಿ ಪಟ್ಟಿ ಬಿಡುಗಡೆ: ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಣೆ

ಬಿಜೆಪಿಯು ಯಾವುದೇ ಷರತ್ತು ವಿಧಿಸದೆ ನನಗೆ ಬೆಂಬಲ ನೀಡಿದೆ ಅದಕ್ಕೆ ನಾನೆಂದಿಗೂ ಋಣಿಯಾಗಿರುತ್ತೇನೆ. ಅವರು ಮಂಡ್ಯದಲ್ಲಿ ಬಿಜೆಪಿಯಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ ಎಂದರು.

Sumalatha Ambareesh thanked BJP unconditional support

ಬಳಿಕ ನಟರಿಗೆ ಕಳ್ಳೆತ್ತುಗಳೆಂಬ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಈ ಕುರಿತು ದರ್ಶನ್ ಕೂಡ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ತಾವಿಬ್ಬರೂ ಉಳುಮೆ ಮಾಡುವ ಜೋಡೆತ್ತುಗಳು ಎಂದು ಅವರಿಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಹೊಲದಲ್ಲಿ ಉತ್ತಿ ಉಳುಮೆ ಮಾಡುವ ಜೋಡೆತ್ತುಗಳಲ್ಲ, ರೈತರು ಬೆಳೆದ ಫಸಲಿರುತ್ತದ್ದಲ್ಲ, ಅದನ್ನು ಅರ್ಧ ರಾತ್ರಿ ಕದ್ದು ತಿನ್ನುವ ಕಳ್ಳೆತ್ತುಗಳು ಎಂದು ಕುಮಾರಸ್ವಾಮಿ ಟೀಕಿಸಿದರು.

ಅವರು (ದರ್ಶನ್) ಬಳಸಿರುವ ಪದ ಇದೆಯಲ್ಲಾ, ಮಂಡ್ಯ ಜಿಲ್ಲೆಯ ತಾಯಂದಿರ ಬಗ್ಗೆ, ಅದೇನಾದರೂ ಮನೆ ಮನೆಗೆ ತಲುಪಿಬಿಟ್ರೆ ಮಂಡ್ಯ ಜಿಲ್ಲೆಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್! ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!

ಚುನಾವಣೆಗೆ ಅದ್ಯಾವುದೂ ಬೇಕಿಲ್ಲ, ಅವರಿಗೆ ಬೇಕು ಅನ್ನಿಸುತ್ತೆ ಅದಕ್ಕೆ ಹೀಗೆಲ್ಲಾ ಮಾತನಾಡಿದ್ದಾರೆ ಎಂದಿದ್ದಾರೆ.ಬಿಜೆಪಿಯಿಂದ ಅಧಿಕೃತವಾಗಿ ಬೆಂಬಲ ಘೋಷಣೆ ಆಗಿರುವುದು ನನಗೆ ಮತ್ತಷ್ಟು ಬಲ ಹೆಚ್ಚಿಸಿದೆ. ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಸುಮಲತಾ ಹೇಳಿದರು.

'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ

ನನ್ನನ್ನು ಯಾರೂ ನೇರವಾಗಿ ಭೇಟಿ ಮಾಡಿರಲಿಲ್ಲ. ಫೋನ್ ನಲ್ಲೂ ಹೇಳಿರಲಿಲ್ಲ. ಅಂಬರೀಶ್ ಅವರ ಮೇಲಿನ ಗೌರವದಿಂದ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ನನಗೆ ಬೆಂಬಲ ಸೂಚಿಸಿರುವುದು ನಿಜಕ್ಕೂ ತುಂಬಾ ಸಂತೋಷವಾಗಿದೆ.

ನನ್ನ ಮನಸಿನಲ್ಲೂ ಬಿಜೆಪಿ ಬೆಂಬಲ ನೀಡಲಿ ಎಂದಿತ್ತು. ಈಗ ನನಗೆ ಮತ್ತಷ್ಟು ಶಕ್ತಿ ಬಂದಂತಾಯಿತು ಎಂದರು.

English summary
Mandya independent candidate Sumalatha met BS Yeddyurappa and thanked BJP leadership for unconditional support for election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X