ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಜನ ಪ್ರೀತಿಗೆ ಮರುಳಾಗುತ್ತಾರೆ, ಮೋಸಕ್ಕಲ್ಲ: ಸುಮಲತಾ

|
Google Oneindia Kannada News

ಬೆಂಗಳೂರು, ಮೇ 24: ಲೋಕಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ ಮಂಡ್ಯ ಸಮರದಲ್ಲಿ ಗೆಲುವು ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದ ಬಳಿಕ ಸುಮಲತಾ ಅಂಬರೀಷ್ ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಮೊಟ್ಟಮೊದಲ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಗೂ ಮುನ್ನ ತಮ್ಮ ಪತಿ ಅಂಬರೀಷ್ ಅವರ ಸಮಾಧಿಗೆ ನಮಿಸಿ, ಕಣ್ಣೀರಿಟ್ಟರು. 'ಇದು ಕಾಂಗ್ರೆಸ್ ರೆಬೆಲ್ ನಾಯಕರ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು, ಮಂಡ್ಯ ಜನರು ಪ್ರೀತಿಗೆ ಮರುಳಾಗುತ್ತಾರೆ ಹೊರತೂ ಮೋಸಕ್ಕಲ್ಲ' ಎಂದರು.

ಮಂಡ್ಯ ಫಲಿತಾಂಶ ಅಪ್ಡೇಟ್ಸ್: ಸುಮಲತಾಗೆ ಭಾರಿ ಅಂತರದಿಂದ ಜಯ ಮಂಡ್ಯ ಫಲಿತಾಂಶ ಅಪ್ಡೇಟ್ಸ್: ಸುಮಲತಾಗೆ ಭಾರಿ ಅಂತರದಿಂದ ಜಯ

ಅಂಬರೀಷ್ ಅವರ 6ನೇ ಪುಣ್ಯತಿಥಿ ಅಂಗವಾಗಿ ಸಮಾಧಿ ಬಳಿ ಪೂಜೆ ಸಲ್ಲಿಸಿದರು. ನಂತರ ಸಂಸದೆಯಾಗಿದ್ದಕ್ಕೆ ಸಿಕ್ಕಿರುವ ಗೆಲುವಿನ ಪ್ರಮಾಣ ಪತ್ರವನ್ನು ಸಮಾಧಿ ಮೇಲಿಟ್ಟು ಕಣ್ಣೀರಿಟ್ಟರು. ರಾಜ್ಯ ಸರ್ಕಾರದ ಮೇಲೆ ಪರಿಣಾಮದ ಬಗ್ಗೆ ನಾನು ಯೋಚನೆ ಮಾಡಿಲ್ಲ. ನಾನು ಈ ಮುಂಚೆ ಕಾಂಗ್ರೆಸ್ ಟಿಕೆಟ್ ಕೇಳಿದ್ದೆ. ಆದರೆ, ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಕೊನೆಗೆ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಮಂಡ್ಯ ಜನರ ಸೇವೆ ಸಲ್ಲಿಸಲು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದೆ.

ಸಂಸದೆಯಾದ ಬಳಿಕ ಸುಮಲತಾ ಸುದ್ದಿಗೋಷ್ಠಿ

ಸಂಸದೆಯಾದ ಬಳಿಕ ಸುಮಲತಾ ಸುದ್ದಿಗೋಷ್ಠಿ

ಇಷ್ಟೊಂದು ಅಂತರ ಇರುತ್ತೆ ನಾವು ಊಹಿಸಿದ್ದೆವು. ಬೇರೆ ಬೇರೆ ಸುಮಲತಾ ಹೆಸರಿನಲ್ಲಿ ಬಂದಿರುವ 20 ಸಾವಿರ ವೋಟುಗಳು ನನಗೆ ಸಲ್ಲಬೇಕಿತ್ತು. ಆಗ ಒಂದೂವರೆ ಲಕ್ಷಕ್ಕೂ ಅಧಿಕ ಅಂತರ ಆಗುತ್ತಿತ್ತು. ನೆಗಟಿವ್ ಪ್ರಚಾರಕ್ಕೆ ಬೆಲೆ ತೆತ್ತಿದ್ದಾರೆ.

ಮಂಡ್ಯದ ಬೆಟ್ಟಿಂಗ್ ಬಗ್ಗೆ

ಮಂಡ್ಯದ ಬೆಟ್ಟಿಂಗ್ ಬಗ್ಗೆ

ಬೆಟ್ಟಿಂಗ್ ಮಾಡಬೇಡಿ, ಅದನ್ನು ಕೇಳಿದಾಗ ನನಗೆ ಭಯವಾಗುತ್ತದೆ. ಗ್ಲ್ಯಾಂಬರ್ಸ್ ಯಾರ ಮಾತು ಕೇಳಲ್ಲ, ಇದರಿಂದ ಆಗುವ ಅನಾಹುತಕ್ಕೆ ಯಾರು ಹೊಣೆ, ಬೆಟ್ಟಿಂಗ್ ಮಾಡಬಾರದು

ಪಕ್ಷೇತರವಾಗಿ ಸ್ಪರ್ಧಿಸಿ, ಗೆದ್ದು, ಇತಿಹಾಸ ಸೃಷ್ಟಿಸಿದ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿ, ಗೆದ್ದು, ಇತಿಹಾಸ ಸೃಷ್ಟಿಸಿದ ಸುಮಲತಾ

ಮಂಡ್ಯದ ಸ್ವಾಭಿಮಾನಿಗಳ ಗೆಲುವು

ಮಂಡ್ಯದ ಸ್ವಾಭಿಮಾನಿಗಳ ಗೆಲುವು

ಇಡೀ ಸರ್ಕಾರ ವಿರುದ್ಧ ನಿಂತಿದ್ದೀರಿ, ಅದು ನಿಜ ಮಂಡ್ಯದ ಜನ ನನ್ನ ಪರವಾಗಿ ಇದ್ದರು. ಅಂಬರೀಷ್ ಮೇಲಿನ ಪ್ರೀತಿ ನನ್ನ ಕೈ ಹಿಡಿಯಿತು. ಇದು ಅಂಬರೀಷ್, ಮಂಡ್ಯದ ಸ್ವಾಭಿಮಾನಿಗಳ ಗೆಲುವು, ಕಾಂಗ್ರೆಸ್ಸಿನ ರೆಬೆಲ್ ಕಾರ್ಯಕರ್ತರು, ರಾಜ್ಯ ರೈತ ಸಂಘದವರು, ಯಶ್, ದರ್ಶನ್ ಅಭಿಮಾನಿಗಳು, ನನ್ನ ಪುಟ್ಟ ತಂಡ ಹಗಲು ರಾತ್ರಿ ದುಡಿದರು, ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿದೆ.

ಸ್ವಾಭಿಮಾನ, ಪ್ರೀತಿಯ ಗೆಲುವು

ಸ್ವಾಭಿಮಾನ, ಪ್ರೀತಿಯ ಗೆಲುವು

ಸ್ವಾಭಿಮಾನ ಎಂದರೆ ಏನು ಎಂಬುದನ್ನು ಇಂಡಿಯಾಕ್ಕೆ ತೋರಿಸಿಬಿಟ್ಟರು ಮಂಡ್ಯದ ಜನ, ಅವರು ಎಷ್ಟೇ ಹಣ ಚೆಲ್ಲಿರಬಹುದು, ಎಷ್ಟೇ ಮೋಸ, ಕುತಂತ್ರ ಮಾಡಿರಬಹುದು, ನೆಗಟಿವ್ ತಂತ್ರ ಮಾಡಿರಬಹುದು, ಟೀಕೆ ಮಾಡಿರಬಹುದು, ಜಾತಿ ವಿಷಯ ತಂದರು, ಆದರೆ , ಎಲ್ಲವನ್ನು ರಿಜೆಕ್ಟ್ ಮಾಡಿ ಒಂದೇ ದನಿಯಲ್ಲಿ ಮಂಡ್ಯದ ಜನರು ಹೇಳಿದರು ಪ್ರೀತಿಗೆ ಮರುಳಾಗುತ್ತೀವಿ, ಮೋಸಕ್ಕೆ ಮರುಳಾಗುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

'ನಿಖಿಲ್ ಎಲ್ಲಿದ್ದೀಯಪ್ಪ ?' ಎಂದು ಟ್ವೀಟ್ ಮಾಡಿದ ಬಿಜೆಪಿ 'ನಿಖಿಲ್ ಎಲ್ಲಿದ್ದೀಯಪ್ಪ ?' ಎಂದು ಟ್ವೀಟ್ ಮಾಡಿದ ಬಿಜೆಪಿ

ಬಿಜೆಪಿ ಸೇರುತ್ತಿದ್ದೀರಾ?

ಬಿಜೆಪಿ ಸೇರುತ್ತಿದ್ದೀರಾ?

ಎಲ್ಲಾ ಹಾರೈಸುತ್ತಿದ್ದಾರೆ. ಸದ್ಯಕ್ಕೆ ನನ್ನ ಮೈಂಡಲ್ಲಿರೋದು ಮೇ 29ರಂದು ಸ್ವಾಭಿಮಾನ ಮಹೋತ್ಸವ ಹೆಸರಿನಲ್ಲಿ ಅಂಬರೀಷ್ ಹುಟ್ಟುಹಬ್ಬ ಆಚರಿಸುವ ನಿಟ್ಟಿಯಲ್ಲಿ ಯೋಚಿಸುತ್ತಿದ್ದೇನೆ. ಯಶ್ ಹಾಗೂ ದರ್ಶನ್ ಅವರು ಸದ್ಯ ಶೂಟಿಂಗ್ ನಲ್ಲಿದ್ದಾರೆ. ಕಾರ್ಯಕ್ರಮಕ್ಕೆ ಬರುತ್ತಾರೆ.

ಅಂಬರೀಷ್ ಇದ್ದಿದ್ರೆ

ಅಂಬರೀಷ್ ಇದ್ದಿದ್ರೆ

ಅವರು ಇದ್ದಿದ್ರೇ ನಾನು ಮನೇಲಿರುತ್ತಿದ್ದೆ. ಈಗ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇನೆ. ಇತಿಹಾಸ ನಾನು ಮಾಡಿದ್ದಲ್ಲ, ಮಂಡ್ಯದ ಜನತೆ ಸೃಷ್ಟಿಸಿದ ಇತಿಹಾಸ. ಮಂಡ್ಯದ ಮಹಿಳೆಯರು ನನ್ನ ಪರ ನಿಂತಿದ್ದು ನನ್ನ ಗೆಲುವಿಗೆ ಮುಖ್ಯ ಕಾರಣವಾಯಿತು.

English summary
Sumalatha Ambareesh scored a resounding win over Nikhil Kumaraswamy, the son of Karnataka Chief Minister H D Kumaraswamy. In her victory from Mandya, she has also created a bit of history. Today she hold a press meet at Sri Kanteerava Stadium, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X