ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕ್ಕರೆ ಬೆಲೆ ಏರಿಕೆಗೆ ರಮ್ಯಾ ಟ್ವೀಟ್ ಬಾಣ

By Mahesh
|
Google Oneindia Kannada News

ಬೆಂಗಳೂರು, ಜೂ.23: ಸಕ್ಕರೆ ಮೇಲಿನ ಆಮದು ಸುಂಕ ಏರಿಕೆ ಎನ್ ಡಿಎ ಸರ್ಕಾರ ಮುಂದಾಗಿರುವುದಕ್ಕೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಪುಣ್ಯಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಇನ್ನೂ ಅಪ್ದೇಡ್ ಆಗಿಲ್ಲ ಹಾಗಾಗಿ ಟ್ವೀಟ್ ಬಾಣದಿಂದ ಬಚಾವಾಗಿದ್ದಾರೆ.

ಸಕ್ಕರೆ ಮೇಲಿನ ಆಮದು ಸುಂಕ ಶೇ 15 ರಿಂದ 25 ಏರಿಕೆ ಮಾಡುವುದು ಅನಿವಾರ್ಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಪಾಸ್ವಾನ್ ಅವರ ಟ್ವೀಟ್ ಐಡಿ(@RamVilasPaswan) ಪ್ರಕಾರ ಇನ್ನೂ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಎಂದು ತೋರಿಸುತ್ತಿದೆ. ಕೇಂದ್ರ ಸಚಿವ ಎಂದು ಬದಲಾಗಿಲ್ಲ. [ರಾಜಕೀಯಕ್ಕೆ ಮಂಡ್ಯದ ಹೆಣ್ಣು ರಮ್ಯಾ ಗುಡ್ ಬೈ]

ಈಗ ರಮ್ಯಾ ವಿಷಯಕ್ಕೆ ಬಂದರೆ, ಸಕ್ಕರೆ ಮೇಲಿನ ಆಮದು ಸುಂಕ ಏರಿಕೆಯಾಗಲಿರುವ ಸುದ್ದಿ ಕೇಳಿ ರಮ್ಯಾ ಅವರ ಕಣ್ಣು ಕೆಂಪಾಗಿದೆ. ಇತ್ತೀಚೆಗಷ್ಟೇ 'ರೈಲ್ವೆ ಪ್ರಯಾಣ ದರ ಏರಿಕೆ' ಬಗ್ಗೆ ಮೋದಿ ಅವರು ಮಾಡಿದ್ದ ಹಳೆ ಟ್ವೀಟ್ ತೆಗೆದು ಹಾಕಿದ್ದ ರಮ್ಯಾ ಅವರು ಈಗ ಸಕ್ಕರೆ ಬೆಲೆ ಏರಿಕೆ, ರೈತರು, ಎಥಾನಾಲ್ ಬಳಕೆ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಗಳನ್ನು ನೀವೆ ಓದಿ...

ಕಬ್ಬು ಬೆಳೆಗಾರರ ಪರ ಮಾತನಾಡಿದ್ದ ರಮ್ಯಾ

ಕಬ್ಬು ಬೆಳೆಗಾರರ ಪರ ಮಾತನಾಡಿದ್ದ ರಮ್ಯಾ

ರಮ್ಯಾ ಅವರು ಸಂಸತ್ತಿನಲ್ಲಿ ಮಾಡಿದ ಮೊದಲ ಭಾಷಣದಲ್ಲೇ ಮಂಡ್ಯದ ಕಬ್ಬು ಬೆಳೆಗಾರರ ಬವಣೆ, ಬೆಂಬಲ ಬೆಲೆ, ಎಥನಾಲ್ ಬಳಕೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು.[ವಿವರ ಇಲ್ಲಿ ಓದಿ]

ಮೋದಿ ಅವರ ಟ್ವೀಟ್ ಪೋಸ್ಟ್ ಮಾಡಿದ ರಮ್ಯಾ

ಮೋದಿ ಅವರ ಹಳೆ ಟ್ವೀಟ್ ಪೋಸ್ಟ್ ಮಾಡಿದ ರಮ್ಯಾ ಅವರು ಈಗ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಮತ್ತೊಮ್ಮೆ ಎಥನಾಲ್ ಬಳಕೆ ಬಗ್ಗೆ ಪ್ರಸ್ತಾಪ

ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕಾದರೆ, ಪರಿಸರ ಸಹಕಾರಿ ಎಥೆನಾಲ್ ಇಂಧನವಾಗಬೇಕು. ವಿದೇಶಗಳಲ್ಲಿ ಸಾರಿಗೆ ವಾಹನಗಳಿಗೆ ಶೇ.24 ರಷ್ಟು ಎಥೆನಾಲ್‌ಅನ್ನು ಬಳಕೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ, ನಮ್ಮ ದೇಶದಲ್ಲಿ ಇಂಥ ವ್ಯವಸ್ಥೆಯನ್ನು ಜಾರಿಗೆ ತಂದರೆ ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ ಎಂದು ರಮ್ಯಾ ಈ ಮೊದಲು ಹೇಳಿದ್ದನ್ನು ಸ್ಮರಿಸಬಹುದು

ಎಥನಾಲ್ ಉತ್ಪಾದನೆ ಬಗ್ಗೆ ಏಕೆ ಒತ್ತುಕೊಟ್ಟೆ

ಎಥನಾಲ್ ಉತ್ಪಾದನೆ ಬಗ್ಗೆ ಏಕೆ ಒತ್ತುಕೊಟ್ಟು ಸಂಸತ್ತಿನಲ್ಲಿ ಭಾಷಣ ಮಾಡಿದೆ ಎಂಬುದು ಅರಿವಾದರೆ ಸಾಕು

ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ

ಕರ್ನಾಟಕದಲ್ಲಿ ಕಬ್ಬು ಜಗಿದಷ್ಟು ಕಹಿ

ಪ್ರತಿ ಟನ್ ಕಬ್ಬಿಗೆ 3,500 ರು. ಬೆಂಬಲ ಬೆಲೆ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಸರ್ಕಾರ ಇತ್ತೀಚೆಗೆ ಪ್ರತಿ ಟನ್ ಕಬ್ಬಿಗೆ 2,500 ರು. ನಿಗದಿಪಡಿಸಿತ್ತು ಪ್ರತಿ ಟನ್ ಕಬ್ಬಿಗೆ 2,800 ರು ಖರೀದಿ ದರ ನೀಡುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಏರಿಸಿದರೆ ಎಲ್ಲವೂ ತಲೆ ಕೆಳಗಾಗುತ್ತದೆ. ಕರ್ನಾಟಕದಲ್ಲೇ ಕಬ್ಬು ಕಹಿ ಏಕೆ? ಮುಂದೆ ಓದಿ

ದೇಶದ ಕಥೆ ಇಷ್ಟೇ ಕಣಮ್ಮ ಎಂದ ಟ್ವೀಟ್

ದೇಶದ ಕಥೆ ಇಷ್ಟೇ ಕಣಮ್ಮ ಎಂದ ಟ್ವೀಟ್ ನ್ನು ರೀಟ್ವೀಟ್ ಮಾಡಿರುವ ರಮ್ಯಾ

English summary
Sugar prices are likely yo shoot up as the Union government has increase the import duty on the product to 40 per cent. Former MP from Mandya Ramya attacked Union government with Tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X