ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಪಿ ನಗರದ ಪ್ರಮುಖ ಆಕರ್ಷಣೆಯಾದ ಕಬ್ಬಿನ ಗಣಪತಿ

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್ 15: ಬೆಂಗಳೂರು ನಗರದಲ್ಲಿ ಪ್ರಮುಖ ಆಕರ್ಷಣೆ ಆಗಿರುವ ಅತಿ ದೊಡ್ಡ ಪರಿಸರ ಸ್ನೇಹಿ ಕಬ್ಬಿನ ಗಣಪತಿಯ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೇ ಅಗಮಿಸುತ್ತಿದೆ.

ಜೆ ಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 30 ಅಡಿ ಎತ್ತರದ ಕಬ್ಬಿನ ಗಣಪತಿಗೆ 4 ಸಾವಿರ ಕೆಜಿ ಬೃಹದಾಕಾರದ ಲಾಡು ನೈವೇದ್ಯಕ್ಕೆ ಇಟ್ಟಿದ್ದು ಕೂಡಾ ಪ್ರಮುಖ ಆಕರ್ಷಣೆ ಯೇ ಸರಿ.

Sugar Cane Ganesha at JP Nagar attracts Lakhs of visitors

ಬೆಳಗ್ಗಿನಿಂದಲೇ ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಭಕ್ತರು ಗಣಪತಿಯ ದರುಶನ ಪಡೆದರು

ಈ ಕಬ್ಬಿನ ಗಣಪತಿ ಯನ್ನು ಇನ್ನು 10 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಹಾಗೆಯೇ ಮೊದಲೇ ತಿಳಿಸಿದಂತೆ 4 ಸಾವಿರ ಕೆಜಿ ಲಾಡುವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತಿದೆ ಎಂದು ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದರು.

ಕಬ್ಬಿನ ಗಣೇಶನಿಗೆ 4 ಸಾವಿರ ಕೆಜಿ ಬೃಹತ್ ಲಾಡು ಅರ್ಪಣೆಕಬ್ಬಿನ ಗಣೇಶನಿಗೆ 4 ಸಾವಿರ ಕೆಜಿ ಬೃಹತ್ ಲಾಡು ಅರ್ಪಣೆ

ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂರ್ತಿ ಪರಿಸರ ಸ್ನೇಹಿಯಾಗಿರಲಿದೆ. ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನು ಉಂಟು ಮಾಡದ ರೀತಿಯಲ್ಲಿ ನಿರ್ಮಿಸಲಾಗುವುದು. 50 ಟನ್ ಕಬ್ಬನ್ನು ಬಳಸಲಾಗಿದ್ದು, 50 ಕ್ಕೂ ಹೆಚ್ಚು ಕಾರ್ಮಿಕರು ಈ ಗಣಪತಿಯನ್ನು ನಿರ್ಮಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದರು.

English summary
Sugar Cane Ganesha and, 4,000 Kg Maha laddu placed at Puttenahalli, JP Nagar has attracted lakhs of visitors, devottees said the organiser Mohan Raj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X