• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆನ್‌ಲೈನ್ ಚಿತ್ರಸಂತೆ: ಇನ್ಫೋಸಿಸ್ ಸುಧಾಮೂರ್ತಿಯವರಿಂದ ಉದ್ಘಾಟನೆ

|
Google Oneindia Kannada News

ಬೆಂಗಳೂರು, ಜನವರಿ 03: ಕೊರೊನಾದಿಂದಾಗಿ ಚಿತ್ರಕಲಾ ಪರಿಷತ್ ಪ್ರತಿವರ್ಷ ನಡೆಸುತ್ತಿದ್ದ ಚಿತ್ರಸಂತೆ ಮಂಕಾಗಿದೆ. ಈ ಬಾರಿ ಆನ್‌ಲೈನ್ ಮೂಲಕ ಚಿತ್ರಸಂತೆ ನಡೆಸಲು ಉದ್ದೇಶಿಸಲಾಗಿದ್ದು, ಇನ್ಫೋಸಿಸ್ ಸುಧಾಮೂರ್ತಿಯವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ಇಂದಿನಿಂದ (ಜನವರಿ 3) ಒಂದು ತಿಂಗಳ ಕಾಲ ಚಿತ್ರಸಂತೆ ನಡೆಯಲಿದೆ. ಕೊರೋನಾ ಕಾರಣದಿಂದ ಈ ಬಾರಿ ಚಿತ್ರಸಂತೆಯನ್ನು ಆನ್ ಲೈನ್ ನಲ್ಲಿ ನಡೆದಲು ಚಿತ್ರಕಲಾ ಪರಿಷತ್ ತೀರ್ಮಾನಿಸಿದೆ.

ಆನ್ ಲೈನ್ ಚಿತ್ರಸಂತೆಯಲ್ಲಿ ಚಿತ್ರಗಳ ಪ್ರದರ್ಶನ ಮಾರಾಟದ ವ್ಯವಸ್ಥೆ ಇದ್ದು chitrasanthe.org ಮೂಲಕ ಚಿತ್ರಸಂತೆ ವೀಕ್ಷಣೆ ಮಾಡಬಹುದಾಗಿದೆ.ಈ ಬಾರಿಯ ಚಿತ್ರಸಂತೆಯನ್ನು ಕೊರೊನಾ ವಾರಿಯರ್ ಗಳಿಗೆ ಅರ್ಪಣೆ ಮಾಡಲಾಗಿದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದ್ದಾರೆ.

ಈ ಚಿತ್ರಸಂತೆಯಲ್ಲಿ 1500 ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿ ಕಲಾವಿದರಿಗೂ ಪ್ರತ್ಯೇಕ ಆನ್ ಲೈನ್ ಪುಟ ಮೀಸಲಾಗಿದ್ದು ಒಬ್ಬ ಕಲಾವಿದ ತನ್ನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಕಲಾವಿದರ ಸಂಪರ್ಕ ವಿವರ ಹಾಗೂ ಕಲಾಕೃತಿಗಳ ಮಾರಾಟ ವ್ಯವಸ್ಥೆ ಇರಲಿದೆ.

ಎಸ್‌ಎಂ ಕೃಷ್ಣ ಅಧ್ಯಕ್ಷತೆವಹಿಸಲಿದ್ದಾರೆ, ಇಂದು ಚಿತ್ರಕಲಾ ಪರಿಷತ್ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನೆರವೇರಲಿದೆ.

English summary
The 18th edition of Chitra Santhe will begin on Sunday at the Karnataka Chitrakala Parishath on Kumara Krupa Road.Infosys Sudha Murthy Will Inaugurate Digital Chitra Santhe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X