ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲು ರಜೆ: ಕೆಎಸ್ಆರ್ ಟಿಸಿ, ಖಾಸಗಿ ಬಸ್ ಪ್ರಯಾಣ ದರ ದುಬಾರಿ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಹಬ್ಬದ ದಿನಗಳು, ಬೇಸಿಗೆ ರಜೆ, ವಾರಾಂತ್ಯಗಳು ಬಂದರೆ ಸಾಕು ಕೆಎಸ್ಆರ್ ಟಿಸಿಯ ಐಷಾರಾಮಿ ಬಸ್ ಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪ್ರಯಾಣ ದರವನ್ನು ವಿಧಿಸುತ್ತಿವೆ.

ಇದರ ಬೆನ್ನಲ್ಲೇ ಖಾಸಗಿ ಟ್ರಾವಲ್ಸ್ ಬಸ್ ಗಳು ಕೂಡ ಪ್ರಯಾಣ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಸಂಸ್ಥೆಯು 2018ರಲ್ಲಿ ದೀರ್ಘಾವಧಿ ಸರ್ಕಾರಿ ರಜೆ ಇರುವ ಮತ್ತು ಅಧಿಕ ಪ್ರಯಾಣಿಕರ ದಟ್ಟಣೆ ಉಂಟಾಗಲಿರುವ 30 ದಿನಗಳನ್ನು ಗುರುತಿಸಿದೆ.

KSRTC:ಮಹಾವೀರ ಜಯಂತಿ, ಗುಡ್ ಫ್ರೈಡೇಯಂದು ಹೆಚ್ಚುವರಿ ಬಸ್KSRTC:ಮಹಾವೀರ ಜಯಂತಿ, ಗುಡ್ ಫ್ರೈಡೇಯಂದು ಹೆಚ್ಚುವರಿ ಬಸ್

ಈ ದಿನಗಳಲ್ಲಿ ಕಾರ್ಯಾಚರಣೆಗೊಳ್ಳುವ ಪ್ರತಿಷ್ಠಿತ ಬಸ್ ಗಳು ಮತ್ತು ಹೆಚ್ಚುವರಿ ವಿಶೇಷ ಬಸ್ ಗಳಿಗೆ ವಿಶೇಷ ದರ ಅನ್ವಯಿಸಲಿದೆ. ರಾಜ್ಯದೊಳಗೆ ಸಂಚರಿಸುವ ಐಷಾರಾಮಿ ಬಸ್ ಗಳಲ್ಲಿ ಶೇ 20 ಮತ್ತು ಹೊರರಾಜ್ಯಗಳಿಗೆ ಸಂಚರಿಸುವ ವಾಹನಗಳಲ್ಲಿ ಶೇ.50ರಷ್ಟು ಅಧಿಕ ಪ್ರಯಾಣ ದರ ಸಂಗ್ರಹಿಸಲಾಗುತ್ತಿದೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚುವರಿಯಾಗಿ ಶೇ.10ರಷ್ಟು ದರವನ್ನು ಪ್ರಯಾಣಿಕರು ಪಾವತಿ ಮಾಡಬೇಕಿದೆ.

Suddenly increase in bus fare worried passengers

ಕೆಎಸ್ಆರ್ ಟಿಸಿಯು ಹವಾನಿಯಂತ್ರಿತ, ಫ್ಲೈ ಬಸ್, ಐರಾವತ, ವೋಲ್ವೊ ಕ್ಲಬ್ ಕ್ಲಾಸ್, ಸ್ಲೀಪರ್ ಬಸ್ ಗಳನ್ನು ರಾಜ್ಯದ ನಾನಾ ಪ್ರದೇಶಗಳು ಮತ್ತು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾ, ಕೇರಳ, ಮಹಾರಷ್ಟ್ರಕ್ಕೆ ಕಾರ್ಯಾಚರಣೆಗೊಳಿಸುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು-ಧರ್ಮಸ್ಥಳ(ಐರಾವತ) ಸಾಮಾನ್ಯ ದಿನಗಳಲ್ಲಿ 919ರೂ. ಹಾಗೂ ವಿಶೇಷ ದಿನಗಳಲ್ಲಿ 1081 ರೂ, ಬೆಂಗಳೂರು- ಬೆಳಗಾವಿ(ಐರಾವತ ಕ್ಲಬ್ ಕ್ಲಾಸ್) ಸಾಮಾನ್ಯ ದಿನಗಳಲ್ಲಿ 676ರೂ ವಿಶೇಷ ದಿನಗಳಲ್ಲಿ 805ರೂ., ಬೆಂಗಳೂರು-ತಿರುಪತಿ-ಸಾಮಾನ್ಯ ದಿನಗಳಲ್ಲಿ 683ರೂ ಹಾಗೂ ವಿಶೇಷ ದಿನಗಳಲ್ಲಿ 1008ರೂ., ಬೆಂಗಳೂರು-ಮುಂಬೈ(ಐರಾವತ ಕ್ಲಬ್ ಕ್ಲಾಸ್) ಸಾಮಾನ್ಯ ದಿನಗಳಲ್ಲಿ 1365ರೂ ಹಾಗೂ ವಿಶೇಷ ದಿನಗಳಲ್ಲಿ 1985ರೂ. ಪಾವತಿ ಮಾಡಬೇಕಾಗುತ್ತದೆ.

English summary
Following the continuous holidays on Thursday and Friday, KSRTC and private operators have suddenly increased bus fare. KSRTC has increased 10 to 20 percent on regular fare while private buses have increased than 100 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X