• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಡನ್ನಾಗಿ ಸಕತ್ ಜೋರ್ ಮಳೆ, ಕಂಗಾಲಾದ ಬೆಂಗಳೂರಿಗರು

|

ಬೆಂಗಳೂರು, ಮೇ 24: ಈ ನಡುವೆ ಬೆಂಗಳೂರಲ್ಲಿ ಮಧ್ಯಾಹ್ನದ ಹೊತ್ತು ಏನೇನೋ ಆಗ್ತಾ ಉಂಟು, ಮೊನ್ನೆ ಮೊನ್ನೆ ಎಂಥದ್ದೋ ಸೋನಿಕ್ ಸೌಂಡ್ ಬಂದು ಅರ್ಧ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಇಂದು ಭಾನುವಾರದ ಲಾಕ್ಡೌನ್, ಕರ್ಫ್ಯೂ ಆಚರಣೆಯಲ್ಲಿ ತೊಡಗಿದ್ದವರಿಗೆ ಸಡನ್ನಾಗಿ ಸಕತ್ ಜೋರ್ ಮಳೆ ಎದುರಿಸುವಂತಾಗಿದೆ.

   ಭಾನುವಾರದ ಭಾರೀ ಮಳೆಗೆ ಬೆಂಗಳೂರು ತತ್ತರ | Bangalore Rain | Oneindia Kannada

   "ಪುಣ್ಯಕ್ಕೆ ಕಫ್ಯೂ ಇದ್ದಿದ್ದರಿಂದ ಒಳ್ಳೆದಾಯ್ತು ಇಲ್ಲಾಂದ್ರೆ ಯಾರು ಎಲ್ಲಿ ಹೋಗಿ ಬೀಳ್ತಾ ಇದ್ರೋ!" ಎಂದು ನಮ್ ಸಹದ್ಯೋಗಿ ಗುರುರಾಜ್ ಕುಂಟವಳ್ಳಿ ಹೇಳಿದ್ದು ನಿಜವಾಗುವಂಥ ಜೋರ್ ಗಾಳಿ ಇದೆ ಕಣ್ರಿ.

   ಬೆಂಗಳೂರಿನ ಬುಧವಾರದ ನಿಗೂಢ ಶಬ್ದದ ರಹಸ್ಯ ಬಯಲು

   ಸರಿ ಸುಮಾರು 100 ಕಿ.ಮೀ ವೇಗ ಇದೆಯೋ ಏನೋ! ಅದರ ಜೊತೆಗೆ ದಪ್ಪ ದಪ್ಪ ಆಲಿಕಲ್ಲು, ಆಲಿ ಕಲ್ಲು ಹೆಕ್ಕೋಣ ಅಂತಾ ಹೊರಗೆ ಕಾಲಿಟ್ಟರೆ ಸಾಕು ಜೋರಾದ ಗಾಳಿಗೆ ತೂರಿ ಬರುತ್ತಿರುವ ಮಳೆ ಗಾಳಿ ಕಸ ಕಣ್ಣಿಗೆ ಬಡಿಯುತ್ತಿದೆ. ಬಂಗಾಳದಲ್ಲಿ ತಣ್ಣಗಾದ ಅಂಫಾನ್ ದಾರಿ ತಪ್ಪಿ ಈ ಕಡೆ ಏನಾದ್ರೂ ದಾಳಿ ಮಾಡಿತಾ ಹೇಗೆ? ಅಂತಾ ಅನ್ನಿಸೋಕೆ ಶುರುವಾಗಿದೆ. ಇಲ್ಲ ಬಿಡಿ ಬೆಂಗಳೂರಿಗೆ ಚಂಡಮಾರುತಗಳ ಕಾಟ ಅಷ್ಟಾಗಿ ಇರಲ್ಲ, ಏನಾದ್ರೂ ಸೈಕ್ಲೋನ್ ಸೈಡ್ ಎಫೆಕ್ಟ್ ಅಷ್ಟೇ.

   ಬೆಂಗಳೂರಿನ ಬಹುತೇಕ ಕಡೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ

   ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರದಲ್ಲಿ ಭಾರಿ ಮಳೆಯ ಮುನ್ಸೂಚನೆ ದೊರೆತಿದೆ. ಬೆಂಗಳೂರಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ 1 ಗಂಟೆಯಿಂದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಟ್ವಿಟ್ಟರಲ್ಲಿ ಬಂದಿರುವ ವಿಡಿಯೋ, ಫೋಟೊಸ್ ನೋಡಿ, ಹೊರಗಡೆ ಎಲ್ಲೂ ಸದ್ಯ ಅಡ್ಡಾಡೋಕೆ ಹೋಗ್ಬೇಡಿ, ಇದು ಶಾಸನ ವಿಧಿಸಿರುವ ಎಚ್ಚರಿಕೆ.

   ಎಲ್ಲೆಲ್ಲಿ ಜೋರು ಮಳೆ

   ಜೆಪಿ ನಗರ, ಜಯನಗರ, ಬಸವನಗುಡಿ, ಹನುಮಂತನಗರ, ಶ್ರೀನಗರ, ಹೊಸಕೆರೆಹಳ್ಳಿ, ಕೆ.ಆರ್.ಪುರಂ, ಬೈಯಪ್ಪನಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ವಿಧಾನಸೌಧ, ಯಶವಂತಪುರ, ಸದಾಶಿವನಗರ ಮುಂತಾದೆಡೆ ಗಾಳಿ ಮಳೆ ಬೀಳುತ್ತಿದೆ ಎಂದು ಟ್ವಿಟ್ಟರಲ್ಲಿ ಜನರು ಖುಷಿ ಗಾಬರಿಯಿಂದ ಫೋಟೊ, ವಿಡಿಯೋ ಹಂಚಿಕೊಂಡಿದ್ದಾರೆ.

   ಆರ್ ಸಿಬಿ ಬಗ್ಗೆ ಚಿಂತೆ

   ಇಂಥ ಜೋರು ಮಳೆಯಲ್ಲೂ ಕ್ರಿಕೆಟ್ ಅಭಿಮಾನಿಯೊಬ್ಬರು ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ ನಡೆದಿದ್ದರೆ, ಖಂಡಿತವಾಗಿಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಗೆ ಪಂದ್ಯ ರದ್ದಾಗುತ್ತಿತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 1 ಅಂಕ ಪುಕ್ಕಟ್ಟೆ ಸಿಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.

   ಮನೀಶ್ ಎಂಎಂಕೆ ಟ್ವೀಟ್

   ದಕ್ಷಿಣ ಬೆಂಗಳೂರಿನ ನಿವಾಸಿ ಮನೀಶ್ ಎಂಎಂಕೆ ಅವರು ನಿರಂತರವಾಗಿ ಟ್ವೀಟ್ ಮಾಡಿ, ಮಳೆ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ.

   ನಗರವನ್ನು ತಂಪಾಗಿಸಿದ ಮಳೆ

   ಸತತ ಒಂದು ಗಂಟೆಗಳ ಕಾಲ ಬೆಂಗಳೂರು ನಗರವನ್ನು ತಂಪಾಗಿಸಿದ ಮಳೆ, ತನ್ನ ಆರ್ಭಟವನ್ನು ಮಧ್ಯಾಹ್ನ 4 ಗಂಟೆ ವೇಳೆಗೆ ಕಡಿಮೆ ಮಾಡಿಕೊಂಡಿದೆ. ಬೆಂಗಳೂರಿನ ಮೈಸೂರು ರಸ್ತೆ, ಯೂನಿವರ್ಸಿಟಿ, ವಿಜಯ ನಗರ ಸುತ್ತಮುತ್ತ ಗಾಳಿ ಧೂಳಿನಿಂದ ತುಂಬಿವೆ. ಸಂಜೆ 7 ಗಂಟೆ ಎಂಬಂತೆ ಕತ್ತಲೆ ಕವಿದ ವಾತಾವರಣ ನಿರ್ಮಾಣವಾಗಿದೆ.

   ಬೆಂಗಳೂರು ಮಳೆ ಚೆಂದ

   ಬೆಂಗಳೂರು ಮಳೆ ಚೆಂದ, ಈ ಮಳೆಯ ಚಿತ್ರ, ವಿಡಿಯೋ ಹಂಚಿಕೊಳ್ಳುವುದೇ ಆನಂದ ಎನ್ನುತ್ತಿರುವ ಟ್ವಿಟ್ಟಿಗರು. ಕೆಲವೆಡೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳು ಗಾಳಿಯ ಅಬ್ಬರಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುಂತಾಗಿದೆ. ಭಾರೀ ಗಾಳಿಯಿಂದಾಗಿ ವಿದ್ಯುತ್ ಕಂಬ, ಮರಗಳು ಧರೆಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

   English summary
   severe high speed lashing winds with thunderstorm hitting hard on South Bengaluru today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more