ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಲಾಕ್‌ಡೌನ್‌ ಮಧ್ಯೆ ವಿದ್ಯುತ್ ಬಿಲ್ ಬರೆ ಕೊಟ್ಟ ಬೆಸ್ಕಾಂ!

|
Google Oneindia Kannada News

ಬೆಂಗಳೂರು, ಮೇ 10: ಕೊರೊನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಬೆಂಗಳೂರಿಗರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಲಾಕ್‌ಡೌನ್‌ ಬಳಿಕ ಬಂದಿರುವ ಮೊದಲ ವಿದ್ಯುತ್ ಬಿಲ್‌ನಲ್ಲಿ ಏಕಾಏಕಿ ಬಹಳಷ್ಟು ಹೆಚ್ಚಾಗಿದೆ. ಇದರಿಂದಾಗಿ ವಿದ್ಯುತ್ ಬಳಸಿರುವ ಗ್ರಾಹಕರು ಬೆಸ್ಕಾಂ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಬಿಲ್ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೊದಲ ಹಾಗೂ ಎರಡನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದವರಿಗೂ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ. ಸಾವಿರಾರು ರೂಪಾಯಿಗಳ ವಿದ್ಯುತ್ ಬಿಲ್ ಒಮ್ಮೆಲೆ ಹೆಚ್ಚಳವಾಗಿದ್ದಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮೇಲೆ ಗ್ರಾಹಕರು ಗರಂ ಆಗಿದ್ದಾರೆ. ಆದರೆ ಬೆಸ್ಕಾಂ ಮಾತ್ರ ಬಳಕೆ ಮಾಡಿದ ವಿದ್ಯುತ್‌ಗೆ ಮಾತ್ರ ದರ ವಿಧಿಸಲಾಗಿದೆ ಎಂದು ನುಣುಚಿಕೊಂಡಿದೆ.

3ನೇ ಹಂತದ ಲಾಕ್‌ಡೌನ್‌ ಮಧ್ಯೆ ಬೆಸ್ಕಾಂ ಥ್ರಿಬಲ್ ಶಾಕ್!

3ನೇ ಹಂತದ ಲಾಕ್‌ಡೌನ್‌ ಮಧ್ಯೆ ಬೆಸ್ಕಾಂ ಥ್ರಿಬಲ್ ಶಾಕ್!

ಇನ್ನೇನೂ ಮೂರನೇ ಹಂತದ ಲಾಕ್‌ಡೌನ್‌ ಸಂದರ್ಭ ಕೆಲವೊಂದಿಷ್ಟು ಸಡಿಲಿಕೆಗಳು ಸಿಕ್ಕಿವೆ ಎಂದುಕೊಂಡಿದ್ದ ಬೆಂಗಳೂರಿಗೆ ಬೆಸ್ಕಾಂ ಭರ್ಜರಿ ಶಾಕ್ ಕೊಟ್ಟಿದೆ. ಒಮ್ಮೆಲೆ ಮೂರರಷ್ಟು ಹೆಚ್ಚು ಬಿಲ್ ವಸೂಲಿಗೆ ಇಳಿಸಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಕೊರೊನಾದಿಂದ ಕಂಗೆಟ್ಟವರಿಗೆ ಬರೆ ಎಳೆದಂತಾಗಿದೆ. ಮಾಮೂಲಿಗಿಂತ ಯದ್ವಾತದ್ವಾ ಬಿಲ್ ವಸೂಲಿಗೆ ಬೆಸ್ಕಾಂ ಇಳಿದಿದೆ. ಜೊತೆಗೆ ಅವೈಜ್ಞಾನಿಕ ರೀತಿಯಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ಸಾಮಾನ್ಯ ಗ್ರಾಹಕರು ಆರೋಪಿಸಿದ್ದಾರೆ.

ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡ ಸಾಮಾನ್ಯ ಗ್ರಾಹಕರು

ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡ ಸಾಮಾನ್ಯ ಗ್ರಾಹಕರು

ಏಕಾಏಕಿ ಮೂರರಷ್ಟು ಹೆಚ್ಚು ವಿದ್ಯುತ್ ಬಂದಿರುವುದರಿಂದ ಮನೆಗಳಲ್ಲಿ ವಿದ್ಯುತ್ ಬಳಕೆ ಮಾಡುವ ಸಾಮಾನ್ಯ ಗ್ರಾಹಕರು ಕಂಗಾಲಾಗಿದ್ದಾರೆ. ಪ್ರತಿತಿಂಗಳು ಸರಾಸರಿ 8 ನೂರು ರೂ.ಗಳಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಮಾರ್ಚ್‌ ತಿಂಗಳಿನ ವಿದ್ಯುತ್ ಬಿಲ್‌ನ್ನು ಮೀಟರ್ ನೋಡದೆ ಸರಾಸರಿ ಆಧಾರದ ಮೇಲೆ ಕಳೆದ ಏಪ್ರಿಲ್‌ನಲ್ಲಿ ಕಟ್ಟಿದ್ದೇವೆ. ಆದರೆ ಇದೀಗ ಎರಡೂ ತಿಂಗಳುಗಳ ಬಿಲ್‌ ಸೇರಿಸಿದರೂ ಹೆಚ್ಚಾಗುವಷ್ಟು ದರ ವಿಧಿಸಿದ್ದಾರೆಂದು ರಾಜಾಜಿನಗರದ ಸಿದ್ದಲಿಂಗೇಶ್ ಅವರು ಆರೋಪಿಸಿದ್ದಾರೆ. ಇದು ಬೆಂಗಳೂರಿನ ಬಹಳಷ್ಟು ಗ್ರಾಹಕರು ಆರೋಪಿಸುತ್ತಿರುವ ವಿಚಾರವಾಗಿದೆ.

ಬಳಕೆ ಮಾಡಿದಷ್ಟು ಬಿಲ್ ಹಾಕಲಾಗಿದೆ: ಬೆಸ್ಕಾಂ

ಬಳಕೆ ಮಾಡಿದಷ್ಟು ಬಿಲ್ ಹಾಕಲಾಗಿದೆ: ಬೆಸ್ಕಾಂ

ಇನ್ನು ಗ್ರಾಹಕರ ಆರೋಪಗಳಿಗೆ ಷ್ಪಷ್ಟನೆ ಕೊಟ್ಟಿರುವ ಬೆಸ್ಕಾಂ, ಬೆಸ್ಕಾಂ ವತಿಯಿಂದ ಸಾಮಾನ್ಯ ಗ್ರಾಹಕರಿಗೆ ಯಾವುದೇ ತೊಂದರೆ ಆಗಿಲ್ಲ. ಟೆಕ್ನಿಕಲ್ ಆಗಿಯೂ ಯಾವುದೇ ಸಮಸ್ಯೆ ಇಲ್ಲ. ಎರಡು ತಿಂಗಳ ಬಿಲ್ ಒಟ್ಟಿಗೆ ನೀಡಲಾಗಿದೆ. ಇದು ಗ್ರಾಹಕರಲ್ಲಿ ಗೊಂದಲವನ್ನುಂಟು ಮಾಡಿದೆ. ಎರಡು ತಿಂಗಳುಗಳ ಬಿಲ್ ವಿಭಾಗಿಸಿದ್ರೆ ಕಡಿಮೆ ಆಗಲಿದೆ. ಸದ್ಯ, ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ಬಿಲ್ ಒಟ್ಟಿಗೆ ನೀಡಲಾಗಿದೆ. ಮಾರ್ಚ್ ರೀಡಿಂಗ್ ಬಿಲ್, ಏಪ್ರಿಲ್ ತಿಂಗಳದ್ದು ಅಂದಾಜಿಸಿ ಹಾಕಲಾಗಿದೆ. ಬೇಸಿಗೆ ಆರಂಭ, ಲಾಕ್‌ಡೌನ್‌ನಿಂದ ಎಲೆಕ್ಟ್ರಾನಿಕ್ ಬಳಕೆ ಹೆಚ್ಚಾಗಿರುತ್ತದೆ. ಜೊತೆಗೆ ಬಹಳಷ್ಟು ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಸಹಜವಾಗಿಯೆ ವಿದ್ಯುತ್ ಬಿಲ್ ಹೆಚ್ಚಿಗೆ ಬಂದಿರುವ ಬಂದಿದೆ. ಮೇ ತಿಂಗಳ‌ ಬಿಲ್‌ನಲ್ಲಿ, ಸರಿಯಾದ ಲೆಕ್ಕ ಸಿಗಲಿದ್ದು, ಏಪ್ರಿಲ್ ತಿಂಗಳಲ್ಲಿ ಕರೆಂಟ್ ಬಳಕೆಯಾಗಿಲ್ಲವಾಗಿದ್ದಲ್ಲಿ ದರವನ್ನ ಕಡಿತಗೊಳಿಸಲಾಗುತ್ತದೆ. ಬೆಸ್ಕಾಂ ವತಿಯಿಂದ ಯಾವುದೇ ಸಮಸ್ಯೆಯಾಗಿಲ್ಲ.‌ ಹೆಚ್ಚುವರಿ ದರ ನಿಗದಿ ಮಾಡಿ ಬೆಸ್ಕಾಂ ಆದಾಯ ಹೆಚ್ಚಿಸುವ ಅವಶ್ಯಕತೆ ಇಲ್ಲ ಬೆಸ್ಕಾಂ ಜನರಲ್ ಮ್ಯಾನೇಜರ್ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ಸ್ಲ್ಯಾಬ್‌ನಿಂದಾಗಿ ದರ ಸಮಸ್ಯೆ

ಸ್ಲ್ಯಾಬ್‌ನಿಂದಾಗಿ ದರ ಸಮಸ್ಯೆ

ಗ್ರಾಹಕರು ಬಳಕೆ ಮಾಡುವ ವಿದ್ಯುತ್‌ಗೆ ಸ್ಲ್ಯಾಬ್ ಆಧಾರದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ದರ ವಿಧಿಸುತ್ತದೆ. ಸಾಮಾನ್ಯ ಗ್ರಾಹಕರು ವಿದ್ಯುತ್ ಬಳಸುವ ಯುನಿಟ್‌ಗಳ ಆಧಾರದ ಮೇಲೆ ನಾನಾ ಸ್ಲ್ಯಾಬ್‌ಗಳನ್ನು ನಿಗದಿ ಮಾಡಲಾಗಿದೆ. ಬಳಕೆ ಹೆಚ್ಚಾದಂತೆ ವಿದ್ಯುತ್ ಬೆಲೆ ಹೆಚ್ಚಾಗುತ್ತದೆ. ಗ್ರಾಹಕರು ಬಳೆಕ ಮಾಡುವ ಮೊದಲ 30 ಯುನಿಟ್‌ ವಿದ್ಯುತ್‌ಗೆ ಪ್ರತಿ ಯುನಿಟ್‌ಗೆ 3.75 ರೂ. ನಿಗದಿ ಮಾಡಲಾಗಿರುತ್ತದೆ. ಮುಂದೆ 70 ಯೂನಿಟ್‌ಗೆ 5.20 ರೂ., 100 ರಿಂದ 200 ಯೂನಿಟ್ಸ್‌ಗೆ 6.75 ರೂ.ಗಳು, 200 ಯೂನಿಟ್ಸ್‌ ನಂತರ ಪ್ರತಿ ಯುನಿಟ್‌ಗೆ 7.80 ರೂ. ದರ ನಿಗದಿ ಮಾಡಲಾಗಿರುತ್ತದೆ. ಜೊತೆಗೆ ಮೊದಲಿನಿಂದಲೂ ಶೇಕಡಾ 9 ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟನೆ ಕೊಟ್ಟಿದೆ.

English summary
The sudden increase in electricity bill has brought new hardship to consumers during the lockdown in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X