ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಕಾರ್ಮಿಕ ಹೆಣ್ಣುಮಕ್ಕಳ ನೆರವಿಗಾಗಿ ಸಂತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಘಮಘಮಿಸಿ ಕಾಫಿ ಪ್ರಿಯರನ್ನು ತನ್ನೆಡೆಗೆ ಸೆಳೆಯುವ ಕಾಫಿ ಸಂತೆ ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಮುಕ್ತಾಯವಾಗಿದೆ. ಸಾವಿರಾರು ಕಾಫಿ ಪ್ರಿಯರು ಸಂತೆಯ ಪ್ರಯೋಜನ ಪಡೆದಿದ್ದಾರೆ.

ಇಂದಿರಾ ಕ್ಯಾಂಟೀನ್ ಯಶಸ್ಸಿನ ಸಂಭ್ರಮಕ್ಕೆ ಕಾಫಿಬುಕ್ಇಂದಿರಾ ಕ್ಯಾಂಟೀನ್ ಯಶಸ್ಸಿನ ಸಂಭ್ರಮಕ್ಕೆ ಕಾಫಿಬುಕ್

ಕಾಫಿತೋಟಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸಬಲೀಕರಣ ಹಾಗೂ ಅವರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಮಹಿಳಾ ಕಾಫಿ ಅಲೆಯನ್ಸ್ ಇಂಡಿಯಾ'ವು ಡಿ.1 ರಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಕಾಫಿ ಸಂತೆ ಆಯೋಜಿಸಿತ್ತು.

cofee

ಕಾಫಿಪ್ರಿಯರನ್ನು ಪ್ರೋತ್ಸಾಹಿಸುವುದು ಆ ಮೂಲಕ ಕಾಫಿಯನ್ನು ಜನಪ್ರಿಯಗೊಳಿಸುವುದು ಸಂತೆಯ ಉದ್ದೇಶ. ಸಂತೆಯಲ್ಲಿ ಉತ್ತಮ ಗುಣಮಟ್ಟದ ಕಾಫಿಪುಡಿ ಮಾರಾಟ, ಕಾಫಿ ತಯಾರಿಸುವ ಯಂತ್ರಗಳ (ಕಾಫಿ ಮೇಕಿಂಗ್ ಮಷಿನ್ ) ಮಾರಾಟ ನಡೆಯಿತು.

ಸಂತೆಯಲ್ಲಿ ಕಾಫಿ ಬೆಳೆಗಾರರು, ಕೆಫೆಗಳು, ಕಾಫಿ ಮಾರಾಟ ಮಳಿಗೆಗಳು, ಕಾಫಿ ಬೀಜದಿಂದ ತಯಾರಿಸಿದ ಆಭರಣಗಳ ಮಾರಾಟಕ್ಕೂ ವೇದಿಕೆ ಕಲ್ಪಿಸಲಾಗಿತ್ತು. ಕಾಫಿ ಬೀಜಗಳನ್ನು ಬಳಸಿ ರಚಿಸಿದ ಚಿತ್ರಕಲೆಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

cofee

ಕಾಫಿ ಸಂತೆಯಲ್ಲಿ ಸಂಗ್ರಹಿಸಿದ ಹಣವನ್ನು ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಶಿಬಿರ, ಆರೋಗ್ಯವಿಮೆ ಹಾಗೂ ಪೌಷ್ಠಿಕ ಆಹಾರ ವಿತರಣೆಗೆ ಬಳಸಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದರು.

cofee

'ಸಕಲೇಶಪುರ, ಹಾಸನ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಕಾರ್ಮಿಕರ ಹೆಣ್ಣು ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಒದಗಿಸಲು ಹಣ ಸಂಗ್ರಹಿಸುವ ಉದ್ದೇಶದಿಂದ ನಗರದಲ್ಲಿ ಕಾಫಿ ಸಂತೆಯನ್ನು ಏರ್ಪಡಿಸಲಾಗಿತ್ತು. ಘಟಕವು ಮೂರನೇ ಬಾರಿಗೆ ಸಂತೆಯನ್ನು ಆಯೋಜಿಸಿದೆ.

English summary
To empower the women workers in coffee plants Women Coffee Alliance India Organized successfully Coffee Sante in Chitrakala Parishath at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X