ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಟ್ ಹರಾಜು; ಬಿಡಿಎಗೆ 171.99 ಕೋಟಿ ಆದಾಯ

|
Google Oneindia Kannada News

ಬೆಂಗಳೂರು, ಆಗಸ್ಟ್ 13 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2ನೇ ಹಂತದಲ್ಲಿ 240 ಸೈಟ್‌ಗಳ ಹರಾಜು ಪ್ರಕ್ರಿಯೆನ್ನು ಪೂರ್ಣಗೊಳಿಸಿದೆ. ಮೂರನೇ ಹಂತದ ಹರಾಜು ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟವಾಗಲಿದೆ.

Recommended Video

ಬಾಲ ಬಿಚ್ಚಿದ್ರೆ ಬಗನಿ ಗೂಟ ಫಿಕ್ಸ್ | Oneindia Kannada

ಎರಡನೇ ಹಂತದ ಹರಾಜು ಮೂಲಕ ಬಿಡಿಗೆ 171.99 ಕೋಟಿ ಆದಾಯ ಬರಲಿದೆ. 2ನೇ ಹಂತದಲ್ಲಿ 308 ನಿವೇಶನಗಳನ್ನು ಬಿಡಿಎ ಹರಾಜಿಗೆ ಇಟ್ಟಿತ್ತು. ಜುಲೈ 20ರಂದು ಆರಂಭಗೊಂಡ ಬಿಡ್‌ನಲ್ಲಿ 1,601 ಜನರು ಪಾಲ್ಗೊಂಡಿದ್ದರು.

ಅಸಾರಾಂ ಬಾಪು ಆಶ್ರಮಕ್ಕೆ ನೀಡಿದ ಸೈಟ್ ರದ್ದುಗೊಳಿಸಿದ ಬಿಡಿಎಅಸಾರಾಂ ಬಾಪು ಆಶ್ರಮಕ್ಕೆ ನೀಡಿದ ಸೈಟ್ ರದ್ದುಗೊಳಿಸಿದ ಬಿಡಿಎ

45 ನಿವೇಶನಗಳನ್ನು ಯಾರೂ ಸಹ ಹರಾಜಿನಲ್ಲಿ ತೆಗೆದುಕೊಳ್ಳಲಿಲ್ಲ. 22 ನಿವೇಶನಗಳಿಗೆ ಮೂಲ ದರಕ್ಕಿಂತ ಶೇ 5ರಷ್ಟು ಕಡಿಮೆ ಮೊತ್ತವನ್ನು ಬಿಡ್ಡುದಾರರು ದಾಖಲಿಸಿದರು. ಆದ್ದರಿಂದ, ಅವುಗಳನ್ನು ಹರಾಜು ಹಾಕಲಿಲ್ಲ ಎಂದು ಬಿಡಿಎ ಹೇಳಿದೆ.

ಅಸಾರಾಂ ಬಾಪು ಆಶ್ರಮಕ್ಕೆ ನೀಡಿದ ಸೈಟ್ ರದ್ದುಗೊಳಿಸಿದ ಬಿಡಿಎಅಸಾರಾಂ ಬಾಪು ಆಶ್ರಮಕ್ಕೆ ನೀಡಿದ ಸೈಟ್ ರದ್ದುಗೊಳಿಸಿದ ಬಿಡಿಎ

Successful Bid For 240 BDA Site In 2nd Phase

ಬಿಡಿಎ ನಿವೇಶನಗಳಿಗೆ ಮೂಲ ದರದ ಮೊತ್ತ 103.87 ಕೋಟಿ ಆಗಿತ್ತು. ಮೂಲದರಕ್ಕಿಂತ ಸರಾಸರಿ ಶೇ 65.58ರಷ್ಟು ಹೆಚ್ಚು ಮೊತ್ತಕ್ಕೆ ನಿವೇಶನಗಳು ಮಾರಾಟವಾಗಿವೆ.

 ಫ್ಲ್ಯಾಟ್‌ ಹೆಸರಿನಲ್ಲಿ ಇನ್ಮುಂದೆ ಸೈಟ್ ನೋಂದಣಿ ಮಾಡುವಂತಿಲ್ಲ ಫ್ಲ್ಯಾಟ್‌ ಹೆಸರಿನಲ್ಲಿ ಇನ್ಮುಂದೆ ಸೈಟ್ ನೋಂದಣಿ ಮಾಡುವಂತಿಲ್ಲ

ಎರಡು ಹಂತದ ಹರಾಜು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಿಡಿಎ 3ನೇ ಹಂತದ ಹರಾಜು ನಡೆಸಲು ತೀರ್ಮಾನ ಕೈಗೊಂಡಿದೆ. ಸೆಪ್ಟೆಂಬರ್‌ನಲ್ಲಿ ನಿವೇಶನಗಳ ಮಾರಾಟಕ್ಕೆ ಅಧಿಸೂಚನೆ ಪ್ರಕಟಿಸುವ ನಿರೀಕ್ಷೆ ಇದೆ.

English summary
Bangalore Development Authority successfully conducted bid for 240 site in second phase. BDA to announce notification for 3rd phase of bidding soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X