ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಮಾದರಿಯಲ್ಲಿ ಸಬ್‌ಅರ್ಬನ್ ರೈಲು ಯೋಜನೆ: ಹೇಗಿರಲಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ನಮ್ಮ ಮೆಟ್ರೋ ಮಾದರಿಯಲ್ಲೇ ಉಪನಗರ ರೈಲು ಯೋಜನೆ ಕೂಡ ರೂಪಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಬೆಂಗಳೂರಿನಿಂದ ತುಮಕೂರು,ಚಿಕ್ಕಬಳ್ಳಾಪುರ, ಯಲಹಂಕ, ವೈಟ್‌ಫೀಲ್ಡ್ ನಡುವೆ ಸಂಚರಿಸಲಿರುವ ಉದ್ದೇಶಿತ ಬೆಂಗಳೂರ ಉಪನಗರ ರೈಲು ಯೋಜನೆಯನ್ನು ಮೆಟ್ರೋ ಮಾದರಿಯಲ್ಲಿ ರೂಪಿಸಲಾಗುತ್ತಿದೆ.

ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿಲ್ಲ

ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿಲ್ಲ

ಉಪನಗರ ರೈಲು ಯೀಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದರೂ ಕೇಂದ್ರ ಸಚಿವ ಸಂಪುಟದ ಅನುಮತಿ ಸಿಕ್ಕಿಲ್ಲ. ಆದರೆ ನೈಋತ್ಯ ರೈಲ್ವೆ ಪ್ರಯಾಣಿಕ ಸ್ನೇಹಿ ಹಾಗೂ ಸುರಕ್ಷತೆ ಒಳಗೊಂಡ ವ್ಯವಸ್ಥೆ ಇರುವ ಸೇವೆ ನೀಡಲು ಯೋಜನೆ ರೂಪಿಸಿದೆ.

ಉಪನಗರ ರೈಲು ಯೋಜನೆಯ ಡಿಪಿಆರ್ ಬದಲಿಸಿದ ರೈಲ್ವೆ ಇಲಾಖೆಉಪನಗರ ರೈಲು ಯೋಜನೆಯ ಡಿಪಿಆರ್ ಬದಲಿಸಿದ ರೈಲ್ವೆ ಇಲಾಖೆ

ಮೆಟ್ರೋ ಮಾದರಿಯಲ್ಲಿ ಪ್ರಯಾಣ ಶುಲ್ಕ

ಮೆಟ್ರೋ ಮಾದರಿಯಲ್ಲಿ ಪ್ರಯಾಣ ಶುಲ್ಕ

ವಿಶೇಷವಾಗಿ ಮೆಟ್ರೋ ಮಾದರಿಯಲ್ಲಿನ ಪ್ರಯಾಣ ಶುಲ್ಕ ವಸೂಲಿ ಮತ್ತು ರೈಲುಗಳ ಸಂಚಾರಿ ವ್ಯವಸ್ಥೆಯನ್ನು ಉಪನಗರ ರೈಲ್ವೆ ವ್ಯವಸ್ಥೆಯಲ್ಲಿ ಜಾರಿಗೆ ಮುಂದಾಗಿದೆ. ಒಟ್ಟು 148 ಕಿ.ಮೀ ಉದ್ದದ ಉಪನಗರ ರೈಲು ಯೋಜನೆ ಮಾರ್ಗದಲ್ಲಿ 53 ಹವಾನಿಯಂತ್ರಿತ ರೈಲುಗಳು ಸಂಚರಿಸಲಿವೆ.

ಉಪನಗರ ರೈಲುಗಳ ಬಾಗಿಲುಗಳು ಸ್ವಯಂಚಾಲಿತ

ಉಪನಗರ ರೈಲುಗಳ ಬಾಗಿಲುಗಳು ಸ್ವಯಂಚಾಲಿತ

ರೈಲುಗಳ ಬಾಗಿಲುಗಳು ಸ್ವಯಂ ಚಾಲಿತವಾಗಿರಲಿದ್ದು,ಎಲ್‌ಇಡಿ ಲೈಟ್, ಸಿಸಿ ಕ್ಯಾಮರಾ ಸೇರಿ ಇನ್ನಿತರೆ ವಸ್ತುಗಳು ಇರಲಿವೆ. ಇನ್ನು ಪ್ರಯಾಣ ದರದಲ್ಲೂ ಮೆಟ್ರೋ ಮಾದರಿಯನ್ನು ಅನುಸರಿಸಲಾಗುತ್ತದೆ. ಪ್ರಯಾಣಿಕರಿಗೆ ಟೋಕನ್ ಅಥವಾ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಅವುಗಳ ಮೂಲಕ ಸ್ವಯಂ ಆಗಿ ದರ ವಸೂಲಿ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಮುಂದೆ ಬಿಎಂಟಿಸಿ ಬಸ್, ಮೆಟ್ರೋ ಮತ್ತು ಉಪನಗರ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಏಕರೂಪ ಟಿಕೆಟಿಂಗ್ ವ್ಯವಸ್ಥೆ ಅಳವಡಿಸಲು ಇದು ಸಹಕಾರಿಯಾಗಲಿದೆ.

ಉಪನಗರ ರೈಲು ವೇಳಾಪಟ್ಟಿ

ಉಪನಗರ ರೈಲು ವೇಳಾಪಟ್ಟಿ

ಉಪನಗರ ರೈಲುಗಳು ಮುಂಜಾನೆ 5ರಿಂದ ಆರಂಭವಾಗಿ ಮಧ್ಯರಾತ್ರಿ 12ರವರೆಗೆ ಸೇವೆ ನೀಡಲಿದೆ. ಪ್ರತಿ ಗಂಟೆಗೆ 30-90 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಅಲ್ಲದೆ, 12ರಿಂದ 20 ನಿಮಿಷಕ್ಕೊಂದು 14 ಬೋಗಿಗಳಿರುವ ರೈಲು ಸಂಚರಿಸುವ ವ್ಯವಸ್ಥೆ ಜಾರಿಗೆ ತರಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

English summary
Railway Officials have also decided to form a suburban rail scheme similar to Namma Metro model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X