ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಹೂವುಗಳ ಹೆಸರು

|
Google Oneindia Kannada News

ಬೆಂಗಳೂರು, ಮಾರ್ಚ್ 08: ಬೆಂಗಳೂರು ನಗರ ಕಾತುರದಿಂದ ಕಾಯುತ್ತಿರುವ 148 ಕಿ.ಮೀ ಉದ್ದದ ಸಬ್‌ಅರ್ಬನ್ ರೈಲು ಕಾರಿಡಾರ್‌ಗಳಿಗೆ ಕನ್ನಡದ ಹೂವುಗಳ ಹೆಸರು ನಾಮಕರಣ ಮಾಡಲಾಗುತ್ತಿದೆ.

ನಗರದ ನಾಲ್ಕು ಉಪನಗರ ರೈಲು ಕಾರಿಡಾರ್‌ಗಳಿಗೆ ಸಂಪಿಗೆ, ಮಲ್ಲಿಗೆ, ಪಾರಿಜಾತಾ, ಕನಕ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಕೆ-ರೈಡ್ ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ಯೋಜನೆ ರೂಪಿಸಿದೆ.

ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಮತ್ತೊಂದು ಆಘಾತ ನೀಡಿದ ರೈಲ್ವೆ ಇಲಾಖೆಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಮತ್ತೊಂದು ಆಘಾತ ನೀಡಿದ ರೈಲ್ವೆ ಇಲಾಖೆ

ಮೂಲಗಳು ಪ್ರಕಾರ, ಹೂವುಗಳನ್ನು ಆರಿಸಿಕೊಂಡಿರುವುದು ಸಂಪಿಗೆ(Sampige), ಮಲ್ಲಿಗೆ(Mallige), ಪಾರಿಜಾತ(Parijaata), ಕನಕ(Kanaka). ಇದರ ಮೊದಲ ಅಕ್ಷರ ಆರಿಸಿಕೊಂಡರೆ ಅದು 'ಸಂಪರ್ಕ' ಎಂದಾಗುತ್ತದೆ.

Bengaluru Suburban Rail Corridors May Be Named After Flowers

ಮೆಜೆಸ್ಟಿಕ್ ಬಸ್‌ ನಿಲ್ದಾಣದೆದುರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವಿದೆ. ಯಲಹಂಕ-ದೇವನಹಳ್ಳಿ ಕಾರಿಡಾರ್‌ಗೆ ಸಂಪಿಗೆ, ಬೈಯಪ್ಪನಹಳ್ಳಿ -ಯಶವಂತಪುರ-ಚಿಕ್ಕಬಾಣಾವರ ಕಾರಿಡಾರ್‌ಗೆ ಮಲ್ಲಿಗೆ, ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್ ಕಾರಿಡಾರ್‌ಗೆ ಪಾರಿಜಾತಾ ಹಾಗೂ ಹೀಳಲಿಗೆ, ಯಲಹಂಕ-ರಾಜಾನುಕುಂಟೆ ಕಾರಿಡಾರ್‌ಗೆ ಕನಕ ಎಂದು ನಾಮಕರಣ ಮಾಡಲಾಗುತ್ತದೆ.

ಸಬ್‌ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಅನುಮಾನಸಬ್‌ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಅನುಮಾನ

ಮೊದಲು ಕನಕ ಹಾಗೂ ಮಲ್ಲಿಗೆ ಕಾರಿಡಾರ್ ಕಾರ್ಯ ನಿರ್ಮಾಣವಾಗುತ್ತದೆ. ನಗರದ ನಮ್ಮ ಮೆಟ್ರೋಗೆ ಹಸಿರು, ನೇರಳೆ, ಹಳದಿ, ಗುಲಾಬಿ, ನೀಲಿ ಬಣ್ಣಗಳ ಹೆಸರಿಟ್ಟಂತೆ, ಉಪನಗರ ರೈಲು ಕಾರಿಡಾರ್‌ಗೆ ಹೂವುಗಳ ಹೆಸರಿಡಲು ಚಿಂತನೆ ನಡೆಸಲಾಗಿದೆ.

Recommended Video

ರಾಜಾಹುಲಿಯ ಬಜೆಟ್ ಗೆ ಕೌಂಟ್ ಡೌನ್ ಶುರು | Oneindia Kannada

ಇದು 16,000 ಕೋಟಿ ವೆಚ್ಚದ ಯೋಜನೆಯಾಗಿದ್ದು, 148 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಎಲ್ಲಾ ಕಾರಿಡಾರ್‌ಗಳು ಸೇರಿ ಒಟ್ಟು 57 ನಿಲ್ದಾಣಗಳು ಬರಲಿವೆ.

English summary
Bengaluru's much-awaited 148-km suburban rail corridors may be called by the Kannada names of a few flowers. The city's four suburban rail corridors will most likely go by the names of Sampige (Champa), Mallige (Jasmine), Parijaata (Coral Jasmine), and Kanaka (Crossandra), Karnataka Rail Infrastructure Development Enterprises (K-RIDE) sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X