ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನ ಕಳ್ಳನ ಬಂಧಿಸಿ, 5 ವಾಹನ ವಶ ಪಡಿಸಿಕೊಂದ ಸುಬ್ರಹ್ಮಣ್ಯನಗರ ಪೊಲೀಸರು

|
Google Oneindia Kannada News

ಬೆಂಗಳೂರು, ನ. 26: ಬೆಂಗಳೂರಿನ ಗಾಯತ್ರಿನಗರದ 9ನೇ ಕ್ರಾಸ್‍ನಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ದ್ವಿಚಕ್ರವಾಹನ ಜೊತೆಗೆ ಹಲವು ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಾಯತ್ರಿನಗರದ 9ನೇ ಕ್ರಾಸ್‍ ಬಳಿ ನೆಲೆಸಿರುವ 23 ವರ್ಷ ವಯಸ್ಸಿನ ಅನಿಲ್ ಕುಮಾರ್ ಎಂಬುವರು ನವೆಂಬರ್ 19ರಂದು ಸಂಜೆ 6 ಗಂಟೆಗೆ ತಮ್ಮ ವಾಹನವನ್ನು ಮನೆ ಮುಂದೆ ನಿಲ್ಲಿಸಿದ್ದರು. ಕೆಲ ಹೊತ್ತಿನಲ್ಲಿ ಹೊಂಡಾ ಆಕ್ಟೀವಾ ಸ್ಕೂಟರ್ ಕಳುವಾಗಿದೆ ಎಂದು ದೂರು ನೀಡಿದ್ದರು.

ಯಾರೋ ಅಪರಿಚಿತ ಅಸಾಮಿಗಳು ತಮ್ಮ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅನಿಲ್ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Subramanya Nagar police arrest Vehicle thief

ಈ ಪ್ರಕರಣದ ಆರೋಪಿಯಾದ ವಿಜಯ್‍ಕುಮಾರ್ ಅಯ್ಯರ್ ಎನ್.ಎಸ್ ಅಲಿಯಾಸ್ ಪಿಂಕು(35 ವರ್ಷ) ದಸ್ತಗಿರಿ ಪಡಿಸಿ, ಈತನ ವಶದಿಂದ ಸುಮಾರು ರೂ. 2,00,000/- ಬೆಲೆ ಬಾಳುವ 05 ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಸುಬ್ರಹ್ಮಣ್ಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಸಿಕ್ಕಿ ಬಿದ್ದಿದ್ದು ಹೇಗೆ?:
ನವೆಂಬರ್ 24ರಂದು ಸಂಜೆ ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಕ್ರೈಂ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದ ಈತನನ್ನು ವಾಹನದ ದಾಖಲಾತಿಗಳನ್ನು ನೀಡಲು ಕೇಳಿದಾಗ, ಆರೋಪಿಯ ಬಳಿ ಯಾವುದೇ ದಾಖಲಾತಿಗಳು ಇಲ್ಲವಾಗಿದ್ದು, ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತನು ವಾಹನ ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ.

ಆರೋಪಿಯ ಬಂಧನದಿಂದ ಸುಬ್ರಹ್ಮಣ್ಯನಗರ - 1, ಕೋಣನಕುಂಟೆ - 1, ಒಟ್ಟು 05 ದ್ವಿಚಕ್ರ ವಾಹನಗಳಲ್ಲಿ 02 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 03 ದ್ವಿಚಕ್ರ ವಾಹನಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿರುತ್ತದೆ.

Recommended Video

CBI ವಿಚಾರಣೆಗೂ ಮುನ್ನ Roshan Baig ಆಸ್ಪತ್ರೆಗೆ ದಾಖಲು | Oneindia Kannada

ಈ ಪ್ರಕರಣದಲ್ಲಿ ಮಲ್ಲೇಶ್ವರ ಉಪ-ವಿಭಾಗ ಸಹಾಯಕ ಪೊಲೀಸ್ ಕಮೀಷನರ್ ವೆಂಕಟೇಶ ನಾಯ್ಡು ಮಾರ್ಗದರ್ಶನದಲ್ಲಿ, ಇನ್ಸ್ ಪೆಕ್ಟರ್ ಸಂಜೀವ್ ಗೌಡ, ಪಿ.ಎಸ್.ಐ. ಬಿ.ಜಿ.ಕೃಷ್ಣಮೂರ್ತಿ, ಎ.ಎಸ್.ಐ ಶ್ರೀಮತಿ ನಿರ್ಮಲಾ ಬಿ.ಜಿ ಮತ್ತು ಸಿಬ್ಬಂದಿಗಳಾದ ತಿಮ್ಮಪ್ಪ, ಹೆಚ್.ಸಿ 6941, ಉಮಾಮಹೇಶ್, ಹೆಚ್.ಸಿ 7986, ರಾಜಣ್ಣ ಎನ್.ಹೆಚ್, ಪಿ.ಸಿ 11869 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Subramanya Nagar police arrest Vehicle thief and recovered five two wheelers from different companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X