ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಹೃದಯಾಘಾತಕ್ಕೊಳಗಾದ ಶೇ.75ರಷ್ಟು ಮಂದಿ ತಡವಾಗಿ ಆಸ್ಪತ್ರೆಗೆ ದಾಖಲು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ನಗರದಲ್ಲಿ ಹೃದಯಾಘಾತಕ್ಕೊಳಗಾದ ಶೇ.75 ಮಂದಿ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ಬೆಂಗಳೂರಿನಲ್ಲಿ ಇಬ್ಬರು ಹೃದ್ರೋಗ ತಜ್ಞರು ಈ ಸಮೀಕ್ಷೆ ನಡೆಸಿದ್ದು, ಬೆಂಗಳೂರಿನಲ್ಲಿ ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ಶೇ.75ರಷ್ಟು ಜನರು ಅರಿವಿನ ಕೊರತೆಯಿಂದಾಗಿ ತಡವಾಗಿ ಹೃದ್ರೋಗ ತಜ್ಞರನ್ನು ಭೇಟಿಯಾಗುತ್ತಿದ್ದಾರೆ ಎಂದಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

50 ವರ್ಷಕ್ಕಿಂತ ಮೇಲ್ಪಟ್ಟವರು, ಬೊಜ್ಜು, ಧೂಮಪಾನಿಗಳು, ಮದ್ಯವ್ಯಸನಿಗಳು ಮತ್ತು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗೃತರಾಗಿರಬೇಕು ಎಂದು ತಜ್ಞರು ಕೇಳಿದ್ದಾರೆ.

1 ಸಾವಿರ ಮಂದಿಯ ಸಮೀಕ್ಷೆ

1 ಸಾವಿರ ಮಂದಿಯ ಸಮೀಕ್ಷೆ

ಸಮೀಕ್ಷೆಯಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವ 1,000 ರೋಗಿಗಳನ್ನು ಬಳಸಿಕೊಳ್ಳಲಾಗಿದೆ. ಹೃದಯ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರು ಶೇ.60 ರಷ್ಟು ರೋಗಿಗಳು ಮಧುಮೇಹ ಮತ್ತು ಶೇ.50 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಕಂಡು ಬಂದಿದೆ.

ಸ್ನಾಯುಗಳಿಗೂ ಹಾನಿ

ಸ್ನಾಯುಗಳಿಗೂ ಹಾನಿ

ಹೃದಯ ಕಾಯಿಲೆಯು ಪರಿಧಮನಿಯ ಅಪಧಮನಿಗಳಲ್ಲಿ ಒಂದು ರಂಧ್ರವನ್ನುಂಟು ಮಾಡುತ್ತದೆ. ಇದೇ ಹೃದಯಾಘಾತಕ್ಕೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಸ್ನಾಯುಗಳಿಗೂ ಕೂಡ ಹಾನಿಯುಂಟಾಗುತ್ತವೆ ಎಂದು ಪಾಟೀಲ್ ತಿಳಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆ ದೀರ್ಘಕಾಲ ಇರಲಿದೆ

ಹೃದಯ ಸಂಬಂಧಿ ಕಾಯಿಲೆ ದೀರ್ಘಕಾಲ ಇರಲಿದೆ

ದೇಹದಲ್ಲಿ ರಕ್ತ ಸರಾಗವಾಗಿ ಚಲಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಆರಂಭದಲ್ಲಿ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ವೃದ್ಧಾಪ್ಯ, ಆಯಾಸ, ನಿಶಕ್ತಿ, ಕಾಲು ಊದಿಕೊಳ್ಳುವುದು ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಉಸಿರಾಟ ಸಮಸ್ಯೆಗಳು ಎದುರಾಗುತ್ತವೆ.

ಹೃದಯ ವೈಫಲ್ಯವು ಮುಂದುವರೆಯುವ ಹಾಗೂ ದೀರ್ಘಕಾಲದ ಸ್ಥಿತಿಯಾಗಿದ್ದು, ಇದರಲ್ಲಿ ಹೃದಯದ ಸ್ನಾಯುಗಳು ಬಿರುಸುಗೊಳ್ಳುವುದು ಅಥವಾ ದುರ್ಬಲವಂತೆ ಮಾಡುತ್ತದೆ.

ರೋಗದ ಲಕ್ಷಣ ತೀವ್ರವಾದಾಗ ಆಸ್ಪತ್ರೆ ಮೊರೆ

ರೋಗದ ಲಕ್ಷಣ ತೀವ್ರವಾದಾಗ ಆಸ್ಪತ್ರೆ ಮೊರೆ

ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ರೋಗಲಕ್ಷಣಗಳು ತೀವ್ರವಾದಾಗ ಮಾತ್ರ ರೋಗಿಗಳು ಆಸ್ಪತ್ರೆಗೆ ಹೋಗಲುವ ಮನಸ್ಸು ಮಾಡುತ್ತಾರೆ. ಇದರಿಂದ ಬಹು ಅಂಗಾಂಗ ವೈಫಲ್ಯ ಮತ್ತು ಸಾವು ಎದುರಾಗುತ್ತದೆ ಎಂದು ಸಮೀಕ್ಷೆ ನಡೆಸಿದ ವೈದ್ಯರಲ್ಲಿ ಒಬ್ಬರಾಗಿರುವ ಡಾ.ರಾಹುಲ್ ಪಾಟೀಲ್ ಅವರು ಹೇಳಿದ್ದಾರೆ.

English summary
An informal survey conducted by two cardiologists in Bengaluru found that 75% of Bengalureans who suffer from a heart failure, reach a cardiologist only at an advanced stage due to the lack of awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X