ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಲವಂತದ ನಮಾಜ್

|
Google Oneindia Kannada News

ಬೆಂಗಳೂರು, ಫೆಬ್ರವರಿ 24 : ನಗರದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ನಮಾಜ್ ಮಾಡುವಂತೆ ಬೋಧಕ ಸಿಬ್ಬಂದಿಗಳು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿವಾಜಿನಗರದ ಶಿವಾಜಿ ರಸ್ತೆಯಲ್ಲಿರುವ ವಿಕೆಒ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಲಸವಂತವಾಗಿ ಪ್ರತಿನಿತ್ಯ ನಮಾಜ್ ಮಾಡಿಸಲಾಗುತ್ತಿದೆ ಎನ್ನಲಾಗಿದೆ. ಈ ಶಾಲೆಯಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ಇತರೆ ಜನಾಂಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯನ್ನೇ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರ ಮಾಡಿಕೊಂಡಿದ್ದಾರೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ.

ಈ ಸರ್ಕಾರಿ ಶಾಲೆಯನ್ನು ಖಾಸಗಿ ಸಂಸ್ಥೆಯೊಂದು ದತ್ತು ಪಡೆದಿದೆ. ಅಡ್ಮಿಷನ್ ಸಂದರ್ಭದಲ್ಲಿ ಅವರು ಅಲ್ಪ ಸಂಖ್ಯಾತರಿಗೆ ಮಣೆ ಹಾಕುತ್ತಿದ್ದಾರೆ. ಅಲ್ಲದೆ. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಬದಲು ನಮಾಜ್ ಮಾಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

Students in Government school forced to offer Namaz

ಆದರೆ ಈ ಆರೋಪವನ್ನು ನಿರಾಕರಿಸಿರುವ ಶಾಲೆಯ ಮುಖ್ಯೋಪಧ್ಯಾಯರು ಇಡೀ ಶಾಲೆಯನ್ನು ಪ್ರರ್ಥನಾ ಮಂದಿರ ಮಾಡಿಲ್ಲ. ಅಲ್ಪಸಂಖ್ಯಾತರಿಗೆ ಪ್ರಾರ್ಥನೆ ಮಾಡಲು ಜಾಗವಿಲ್ಲ. ಹಾಗಾಗಿ ಕೇವಲ ಒಂದು ಕೊಠಡಿ ಬಿಟ್ಟುಕೊಡಲಾಗಿದೆ . ನಾವು ಪ್ರತಿನಿತ್ಯ ಬಲಸವಂತವಾಗಿ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

English summary
Government school in Shivajinagar is forcing students for do Namaz daily. Students and parents have alleged this about Government school as well as management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X