ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಜೈಲಿನಿಂದ ವಿದ್ಯಾರ್ಥಿನಿ ಅಮೂಲ್ಯ ಹೊರಕ್ಕೆ

|
Google Oneindia Kannada News

ಬೆಂಗಳೂರು, ಜೂನ್ 12: 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿ ದೇಶದ್ರೋಹದ ಆರೋಪ ಹೊತ್ತುಕೊಂಡಿದ್ದ ವಿದ್ಯಾರ್ಥಿನಿ, ಎಡಪಂಥೀಯ ಚಿಂತನೆಯ ಅಮೂಲ್ಯ ಲಿಯೊನಾ ನರೋನಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಶುಕ್ರವಾರ ಸಂಜೆ ಹೊರಕ್ಕೆ ಬಂದಿದ್ದಾರೆ.

Recommended Video

ಸೌತೆಕಾಯಿ ಸೇವಿಸಿದ ನಂತರ ನೀರು ಕುಡಿದ್ರೆ ಆರೋಗ್ಯಕ್ಕೆ ಹಾನಿ | Oneindia Kannada

ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಮಾವೇಶ ಹಮ್ಮಿಕೊಳ್ಳಲೈತ್ತು. ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು.

ವಿದ್ಯಾರ್ಥಿನಿ ಅಮೂಲ್ಯಾ ಲಿಯೊನಾಗೆ ಜಾಮೀನು ಸಿಕ್ಕಿದ್ದು ಹೇಗೆ?ವಿದ್ಯಾರ್ಥಿನಿ ಅಮೂಲ್ಯಾ ಲಿಯೊನಾಗೆ ಜಾಮೀನು ಸಿಕ್ಕಿದ್ದು ಹೇಗೆ?

ಅಮೂಲ್ಯಾ ವಿರುದ್ಧ ದೇಶದ್ರೋಹದ ಆರೋಪ ಹೊರೆಸಿ ಜೈಲಿಗೆ ಕಳಿಸಲಾಗಿತ್ತು. ಆಕೆಗೆ ಜಾಮೀನು ದೊರೆತರೆ ಬೇರೆ ರೀತಿಯ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸಮಾಜಕ್ಕೂ ಒಳಿತಿಲ್ಲ ಎಂದು ಬುಧವಾರದಂದು ಜಡ್ಜ್ ವಿದ್ಯಾಧರ ಶಿರಹಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಆಕೆಗೆ ಜಾಮೀನು ನೀಡಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

Student Amulya Leona released from Parappana Agrahara Jail

ಕಾನೂನಿನ ಪ್ರಕಾರ,ಆರೋಪಿಯನ್ನು ಬಂಧಿಸಿ ಜೈಲಿನಲ್ಲಿರಿಸಿದ ಬಳಿಕ 90 ದಿನಗಳೊಳಗೆ ದೋಷಾರೋಪಣ ಪಟ್ಟಿಯನು ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ. ಆದರೆ, ಅಮೂಲ್ಯಾ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ಕಾರಣ ಆಕೆಗೆ ಡೀಫಾಲ್ಡ್ ಬೇಲ್ ಸಿಗಬೇಕಿದೆ ಎಂದು ವಾದಿಸಿದರು.

ಈ ಕುರಿತಂತೆ ಮೇ 26, ಮೇ 29ರಂದು ಇಮೇಲ್ ಕಳಿಸಿದ್ದರು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದೆಲ್ಲ ಫಲ ನೀಡದಿದ್ದಾಗ ಜೂನ್ 2 ರಂದು ಅರ್ಜಿ ಸಲ್ಲಿಸಿದ್ದಾರೆ. ಇದಾದ ಬಳಿಕ ಜೂನ್ 3 ರಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವಕೀಲ ಪ್ರಸನ್ನ ತಿಳಿಸಿದರು.

'ಪಾಕ್' ಘೋಷಣೆ; ವಿಚಾರಣೆ ವೇಳೆ ಬಿಕ್ಕಳಿಸಿ ಅತ್ತ ಅಮೂಲ್ಯ ಲಿಯೋನಾ'ಪಾಕ್' ಘೋಷಣೆ; ವಿಚಾರಣೆ ವೇಳೆ ಬಿಕ್ಕಳಿಸಿ ಅತ್ತ ಅಮೂಲ್ಯ ಲಿಯೋನಾ

ಹೀಗಾಗಿ, ಕಾನೂನಿಗೆ ಬದ್ಧವಾಗಿ ಸಿಆರ್ ಪಿ ಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ statutory bail ನೀಡಲಾಗಿದೆ. ಐದನೇ ಹೆಚ್ಚುವರಿ ಸಿಟಿ ಸಿವಿಎಲ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಿಂದಾಗಿ ಡಿಫಾಲ್ಡ್ ಜಾಮೀನು ನೀಡಲಾಗಿದೆ.

English summary
Student Amulya Leona Naroha who shouted ‘Pakistan Zindabad’ during anti-CAA stir gets default bail and got released from Parappana Agrahara Jail today (June 12).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X