• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಲ್‌ಬಾಗ್‌ ದುಬಾರಿ ಶುಲ್ಕ ನಿಗದಿಗೆ ಪುಷ್ಪ ಪ್ರಿಯರ ಭಾರಿ ವಿರೋಧ

By Nayana
|

ಬೆಂಗಳೂರು, ಆಗಸ್ಟ್ 1: ಲಾಲ್‌ಬಾಗ್‌ನಲ್ಲಿ ಆ.4ರಿಂದ ಆರಂಭವಾಗಲಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದರಿಂದ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

2014ರಿಂದ ಇಲ್ಲಿಯವರೆಗೆ ಒಟ್ಟು 3 ಬಾರಿ ಪ್ರವೇಶ ಶುಲ್ಕ ಏರಿಕೆ ಮಾಡಲಾಗಿದೆ. ಇದೀಗ 70 ರೂ. ತಲುಪಿದೆ. ಪ್ರತಿ ಎರಡು ವರ್ಷಗಳಿಗೆ ವಯಸ್ಕರಿಗೆ 10 ರೂ.ನಂತೆ ಏರಿಕೆ ಮಾಡಲಾಗುತ್ತದೆ. ಈ ವರ್ಷ ಜಿಎಸ್‌ಸ್ಟಿ ಶೇ.18ರಷ್ಟು ವಿಧಿಸಿರುವ ಕಾರಣ ಪ್ರವೇಶ ಶುಲ್ಕವನ್ನು ರಜೆ ಇತರೆ ದಿನಗಳಲ್ಲಿ 70 ರೂ. ನಿಗದಿಪಡಿಸಲಾಗಿದೆ.

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಪ್ರವೇಶ ದುಬಾರಿ

ಫಲಪುಷ್ಪ ಪ್ರದರ್ಶನ ಆರು ತಿಂಗಳಿಗೊಮ್ಮೆ 15-20 ಲಕ್ಷ ರೂ. ಗಳಿಸುತ್ತಿದೆ. ಪ್ರದರ್ಶನದ ವೇಳೆ ಟಿಕೆಟ್‌ ದುಡ್ಡಿನ ಜತೆಗೆ 100 ಕ್ಕೂ ಅಧಿಕ ಮಳಿಗೆಗಳಿಂದ ಲಕ್ಷಾಂತರ ರೂ,ಹಣ ಸಂಗ್ರಹವಾಗುತ್ತದೆ. ಅನೇಕ ಕಡೆಯಿಂದ ಹಣ ಹರಿದುಬರುತ್ತದೆ.

ಕಳೆದ ವರ್ಷ ಆಗಸ್ಟ್‌ನಿಂದಲೇ ಲಲ್‌ ಬಾಗ್‌ ಪ್ರವೇಶ ಶುಲ್ಕದ ಜತೆಗೆ ಜಿಎಸ್‌ಸ್ಟಿ ಶುಲ್ಕವೂ ಅನ್ವಯವಾಗಿದೆ. ಆದರೆ ಆಗಸ್ಟ್‌ ಮತ್ತು ಜನವರಿಯ ಪ್ರದರ್ಶನದ ವೇಳೆ ಜಿಎಸ್‌ಸ್ಟಿ ಪಾವತಿಸದ ಕಾರಣ ತೆರಿಗೆ ಇಲಾಖೆಯಿಂದ ಇದೀಗ ಕೋಟಿ ತೆರಿಗೆ ಹಣ ಪಾವತಿಸುವಂತೆ ಆಯೋಜಕರಿಗೆ ನೋಟಿಸ್‌ ನೀಡಲಾಗಿದೆ.

2016-17ರ ಜನವರಿ ಮತ್ತು ಆಗಸ್ಟ್‌ ಪ್ರದರ್ಶನಗಳಲ್ಲಿ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 50 ರೂ. ಹಾಗೂ ರಜಾ ದಿನಗಳಲ್ಲಿ 60 ರೂ. ಇತ್ತು. ಮಕ್ಕಳಿಗೆ 10 ರೂ.ಗಳನ್ನು ನಿಗದಿಪಡಿಸಲಾಗಿತ್ತು.

ಇದೀಗ ಸಾಮಾನ್ಯ ದಿನಗಳಲ್ಲಿ ಒಳಗೊಂಡಂತೆ ಎಲ್ಲಾ ದಿನಗಳಲ್ಲೂ 70 ರೂ. ಹೆಚ್ಚಿಸಲಾಗಿದೆ. ಮಕ್ಕಳಿಗೆ 20 ರೂ. ವಿಧಿಸಲಾಗಿದೆ ಇದೀಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ 10 ರೂ.ಗಳನ್ನು ಏರಿಸಬಹುದಾಗಿತ್ತು, ಕೆಲವು ಪುಷ್ಪ ಪ್ರಿಯರು ಪ್ರತಿ ನಿತ್ಯವೂ ಬರುತ್ತಾರೆ ಈ ಶುಲ್ಕ ಹೊರೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Including walkers association many citizens have strongly opposed entrance fee hike for flora exhibition at Lalbagh flora exhibition and alleged that the department of horticulture increasing fee since consecutive three years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more