ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂದ್, ಮುಷ್ಕರ : ಕೆಎಸ್ಆರ್‌ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ

|
Google Oneindia Kannada News

ಬೆಂಗಳೂರು, ಮೇ 15 : ಪ್ರತಿಭಟನೆ, ಬೆಂಗಳೂರು ಬಂದ್, ಕರ್ನಾಟಕ ಬಂದ್‌ನಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಅಪಾರವಾದ ನಷ್ಟ ಉಂಟಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 46 ಕೋಟಿ ನಷ್ಟ ಉಂಟಾಗಿದೆ.

ಬಂದ್, ಮುಷ್ಕರ ನಡೆದಾಗ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಮೊದಲ ಟಾರ್ಗೆಟ್ ಆಗಿರುತ್ತದೆ. ಬಸ್ ಸಂಚಾರವನ್ನು ನಿಲ್ಲಿಸಬೇಕಾಗುತ್ತದೆ. ಬಸ್‌ಗಳಿಗೆ ಕಲ್ಲು ತೂರಾಟ ಮಾಡಿ ನಷ್ಟ ಉಂಟು ಮಾಡಲಾಗುತ್ತದೆ.

ಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರಹೊಸ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ, ವಿವರ

ಬೆಂಗಳೂರು ಬಂದ್, ಕರ್ನಾಟಕ ಬಂದ್ ನಡೆದಾಗ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ. ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಬಂದ್‌ ನಡೆದಾಗ ಕೆಎಸ್ಆರ್‌ಟಿಸಿ ಸಂಚಾರ ರದ್ದುಗೊಳ್ಳುತ್ತದೆ, ಬಸ್‌ಗಳಿಗೆ ಕಲ್ಲು ಬೀಳುತ್ತದೆ.

2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ2 ಮಾರ್ಗದಲ್ಲಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

bmtc

ಬಿಎಂಟಿಸಿ ಬಸ್ ಬೆಂಗಳೂರು ಜನರ ಜೀವನಾಡಿ, 6500 ಬಸ್‌ಗಳಿದ್ದು ಪ್ರತಿದಿನ ಸುಮಾರು 45 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಒಂದು ದಿನ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡರೆ 3.34 ಕೋಟಿ ನಷ್ಟ ಸಂಸ್ಥೆಗೆ ಉಂಟಾಗುತ್ತದೆ.

ಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಬಿಎಂಟಿಸಿ ವಿದ್ಯಾರ್ಥಿ ಪಾಸ್‌ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

2016 ರಿಂದ 2018ರ ತನಕ ಕೆಎಸ್ಆರ್‌ಟಿಸಿ 28 ಕೋಟಿ ನಷ್ಟ ಅನುಭವಿಸಿದೆ. 2017-18ರಲ್ಲಿ 16 ಬಸ್‌ಗಳು ಜಖಂಗೊಂಡಿವೆ. 2016-17ರಲ್ಲಿ 175 ಬಸ್‌ಗಳಿಗೆ ಹಾನಿ ಉಂಟಾಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಕಾವೇರಿ ಹೋರಾಟದಿಂದಾಗಿ ಅಪಾರ ನಷ್ಟ ಉಂಟಾಯಿತು. ಕಾವೇರಿ ಹೋರಾಟ ನಡೆಯುವಾಗ ಹೊರ ರಾಜ್ಯಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಷ್ಟದ ವಿವರ ಬಿಎಂಟಿಸಿ
* 2016-17ರಲ್ಲಿ 36.8 ಕೋಟಿ
* 2017-18ರಲ್ಲಿ 15.26 ಕೋಟಿ
* 2018-19ರಲ್ಲಿ 9.14 ಕೋಟಿ

ಕೆಎಸ್ಆರ್‌ಟಿಸಿ ನಷ್ಟದ ವಿವರ
* 2016-17ರಲ್ಲಿ 25.98 ಕೋಟಿ
* 2017-18ರಲ್ಲಿ 2.69 ಕೋಟಿ

English summary
With the strikes and bandhs The Bangalore Metropolitan Transport Corporation (BMTC) and Karnataka State Road Transport Corporation (KSRTC) suffered losses of crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X