ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಿಶಕ್ತಿ ದೇವಸ್ಥಾನಕ್ಕೆ ಬಿಬಿಎಂಪಿ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಬಿಬಿಎಂಪಿ ಆವರಣದಲ್ಲಿರುವ ಸಪ್ತಮಾತೃಕೆ ಆದಿಶಕ್ತಿ ದೇವಸ್ಥಾನದ ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸದಂತೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸೂಚನೆ ನೀಡಿದ್ದಾರೆ.

ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ಅನುದಾನವನ್ನು ಬಿಬಿಎಂಪಿ ನೀಡಿದ್ದು, ಕೆಆರ್‌ಐಡಿಎಲ್‌ನಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಯಾದಗಿರಿ; ಕಾಡಿನ ನಡುವೆ ಗವಿಸಿದ್ದಲಿಂಗೇಶ್ವರನಿಗೆ ರಥೋತ್ಸವದ ರಂಗುಯಾದಗಿರಿ; ಕಾಡಿನ ನಡುವೆ ಗವಿಸಿದ್ದಲಿಂಗೇಶ್ವರನಿಗೆ ರಥೋತ್ಸವದ ರಂಗು

ಧಾರ್ಮಿಕ ಆಚರಣೆ ವೇಳೆ ವಾದ್ಯಗಳನ್ನು ಬಾರಿಸುವುದರಿಂದ ಕಚೇರಿ ಕೆಲಸಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಕಚೇರಿ ಅವಧಿಯಲ್ಲಿ ತಮಟೆ, ಡೊಳ್ಳು ಸೇರಿದಂತೆ ಇನ್ನಿತರೆ ವಾದ್ಯಗಳನ್ನು ಬಾರಿಸದಂತೆ ಸೂಚನೆ ನೀಡಲಾಗಿದೆ.

Strict Notice From BBMP Commissioner For Adi Shakti Temple

ಆದಿಶಕ್ತಿ ದೇವಸ್ಥಾನ ಪಾರಂಪರಿಕ ಹಿನ್ನೆಲೆ ಹೊಂದಿರುವುದರಿಂದ ಅನೇಕ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಾಗಿ ಭಕ್ತರು ಮೆರವಣಿಗೆ ನಡೆಸುತ್ತಾರೆ. ಈ ವೇಳೆ ತಮಟೆ ಹಾಗೂ ಡೊಳ್ಳು ಬಾರಿಸಲಾಗುತ್ತದೆ.

ದುರಸ್ತಿ ಕಾಮಗಾರಿಗೆ ಚಾಲನೆ ನೀಡುವುದಕ್ಕೆ ದೇವಸ್ಥಾನದ ಅರ್ಚಕರು ಆಯುಕ್ತರನ್ನು ಆಹ್ವಾನಿಸುವುದಕ್ಕೆ ಹೋದ ಸಂದರ್ಭದಲ್ಲಿ ಈ ಸೂಚನೆ ನೀಡಿದ್ದಾರೆ.

English summary
BBMP Commissioner Anil Kumar has instructed not to play instruments during the rituals of the Saptamatruk Adhishakti Temple at the BBMP premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X