ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

|
Google Oneindia Kannada News

ಬೆಂಗಳೂರು, ಜುಲೈ 19: ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಹತ್ವದ ಸಭೆ ನಡೆಸಿ, ಹಾಸಿಗೆ ಕಾಯ್ದಿರಿಸುವುದು, ಚಿಕಿತ್ಸೆ ವಿಧಾನ, ಮಕ್ಕಳ ಆರೋಗ್ಯ ಪಾಲನೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ಚರ್ಚಿಸಿದ ವಿಷಯಗಳು, ಸಿಎಂ ತೆಗೆದುಕೊಂಡ ನಿರ್ಣಯದ ಬಗ್ಗೆ ವಿವರಿಸಿದರು.

Recommended Video

ಹೆಂಡತಿಗೆ ಮಕ್ಕಳೊಂದಿಗೆ 4 Km ನಡೆದುಕೊಂಡು ಸಿಎಂ ಮನೆಮುಂದೆ ಬಂದ ಕೊರೊನ ಸೊಂಕಿತ | Oneindia Kannada

ಆರ್ಥಿಕ ಕಾರಣದಿಂದ ಲಾಕ್ ಡೌನ್ ಮುಂದುವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಲಾಕ್ ಡೌನ್ ಮುಂದುವರಿಸಲು ಸಾಧ್ಯವೇ ಆಗುವುದಿಲ್ಲ ಎನ್ನುವುದಾದರೆ, ಅದಕ್ಕೆ ತಜ್ಞರು ಪರ್ಯಾಯ ಮಾರ್ಗದ ಸಲಹೆಯನ್ನು ನೀಡಿದ್ದಾರೆ.

ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಲೋಪ: ಸುಧಾಕರ್ ಗರಂಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಲೋಪ: ಸುಧಾಕರ್ ಗರಂ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ಅಗತ್ಯವಾಗಿದೆ. ಈಗಾಗಲೇ ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದವರು ತಮ್ಮ ಪ್ಲಾಸ್ಮಾವನ್ನು ಹೆಚ್ಚು ಹೆಚ್ಚಾಗಿ ದಾನ ಮಾಡಬೇಕು. ಹೀಗೆ ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದ ವತಿಯಿಂದ 5,000 ರೂಪಾಯಿ ಸಹಾಯಧನವನ್ನು ನೀಡಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಮತ್ತೊಮ್ಮೆ ಮನವಿ ಮಾಡಿಕೊಂಡರು.

 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಿ

5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಿ

• ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಇಂದು ಮುಖ್ಯಮಂತ್ರಿಗಳ ಮಹತ್ವದ ಸಭೆ. 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಒಂದು ವಾರದೊಳಗೆ ಹೆಚ್ಚುವರಿ 3,000 ಹಾಸಿಗೆಗಳು ಸೇರ್ಪಡೆ. ಸಭೆಗೆ ಹಾಜರಾಗದ ಖಾಸಗಿ ಆಸ್ಪತ್ರೆ(ವೈದೇಹಿ ಆಸ್ಪತ್ರೆ, ಇತ್ಯಾದಿ)ಗಳ ವಿರುದ್ಧ ಕ್ರಮ.

• ಕೋವಿಡ್ ಮತ್ತು ಕೋವಿಡ್ ಅಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ.

 ಲಕ್ಷಣರಹಿತ ಸೋಂಕಿತರು ಖಾಸಗಿ ಆಸ್ಪತ್ರೆಗೆ ಹೋಗ್ಬೇಡಿ

ಲಕ್ಷಣರಹಿತ ಸೋಂಕಿತರು ಖಾಸಗಿ ಆಸ್ಪತ್ರೆಗೆ ಹೋಗ್ಬೇಡಿ

• ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭವಿಲ್ಲ.

ರಾಜ್ಯದಲ್ಲಿ ಪ್ರತಿನಿತ್ಯ ನಡೆಯುವ ಕೊವಿಡ್ ತಪಾಸಣೆ ಸಂಖ್ಯೆ ಎಷ್ಟು?ರಾಜ್ಯದಲ್ಲಿ ಪ್ರತಿನಿತ್ಯ ನಡೆಯುವ ಕೊವಿಡ್ ತಪಾಸಣೆ ಸಂಖ್ಯೆ ಎಷ್ಟು?

• ಲಕ್ಷಣರಹಿತ ಮತ್ತು ಅಲ್ಪ ಲಕ್ಷಣವುಳ್ಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ ಮಾಡುವ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆ. ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ.

 ರಾಜ್ಯದಲ್ಲಿ 24,909 RTPCR ಟೆಸ್ಟ್

ರಾಜ್ಯದಲ್ಲಿ 24,909 RTPCR ಟೆಸ್ಟ್

• ರಾಜ್ಯದಲ್ಲಿ ಇದುವರೆಗೆ 21,775 ಜನರು ಗುಣಮುಖರಾಗಿದ್ದು, ಇಂದು ರಾಜ್ಯದಲ್ಲಿ 24,909 RTPCR ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಈಗ 85 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ 50,000 ಆರ್ಟಿಪಿಸಿಆರ್ ಟೆಸ್ಟ್ ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ 9.8 ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಟೆಸ್ಟ್ ನಡೆಸಿವೆ.

ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಸಚಿವ ಸುಧಾಕರ್ ದಿಢೀರ್ ಭೇಟಿಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ಸಚಿವ ಸುಧಾಕರ್ ದಿಢೀರ್ ಭೇಟಿ

 ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕ

ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕ

• ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ 149 ಪರೀಕ್ಷೆ ನಡೆಸಬೇಕಾಗಿದ್ದು, ರಾಜ್ಯದಲ್ಲಿ 300 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಆಂಟಿಜೆನ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ. ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಹೇಳಿದರು.

English summary
Strict action against private hospitals that deny treatment for both covid and non-covid patients said Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X