ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಒಪಿ ಗಣೇಶ ಬಳಸಿದರೆ ಕಠಿಣ ಕ್ರಮ: ಕೆಎಸ್‌ಪಿಸಿಬಿ

|
Google Oneindia Kannada News

ಬೆಂಗಳೂರು, ಆಗಸ್ಟ್‌ 13: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ನಿಷೇಧಿಸಿರುವ ಕೆಎಸ್‌ಪಿಸಿಬಿ, ಬಿಬಿಎಂಪಿ ಸೇರಿದಂತೆ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಹೈಕೋರ್ಟ್ ತನ್ನ 2016 ರ ಅಧಿಸೂಚನೆಯನ್ನು ಮಾನ್ಯ ಮಾಡಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದ್ದು, ವಿಗ್ರಹಗಳ ತಯಾರಿಕೆಯಲ್ಲಿ ಪಿಒಪಿ ಮತ್ತು ರಾಸಾಯನಿಕ ಬಣ್ಣಗಳನ್ನು ತೊಡೆದುಹಾಕಲು ಸ್ಥಳೀಯ ಸಂಸ್ಥೆಗಳು ಜವಾಬ್ದಾರಿ ತೋರುವ ಅಗತ್ಯ ಇದೆ ಎಂದು ಹೇಳಿದೆ.

ಈಚಲು ಮರದಲ್ಲಿ ಮೂಡಿದ ಗಣಪ, ಜನರಿಂದ ಪೂಜೆ, ಪುನಸ್ಕಾರ ಆರಂಭ!ಈಚಲು ಮರದಲ್ಲಿ ಮೂಡಿದ ಗಣಪ, ಜನರಿಂದ ಪೂಜೆ, ಪುನಸ್ಕಾರ ಆರಂಭ!

ಆಗಸ್ಟ್‌ 12 ಶುಕ್ರವಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸುವವರು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯ ಮಾಡುವಂತಿಲ್ಲ ಹಾಗೂ ಇತರೆ ತ್ಯಾಜ್ಯಗಳನ್ನು ವಿಲೇವಾರಿಗೆ ನಿಯಮ ಉಲ್ಲಂಘಿಸುವಂತಿಲ್ಲ ಎಂದು ಪ್ರತಿಜ್ಞೆ ನೀಡಬೇಕು ಎಂದು ಅದು ಹೇಳಿದೆ.

Strict action against if POP Ganesh is used: KSPCB

ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್‌(ಶಾಮಿಯಾನ) ಹಾಕಲು ಸಂಘಟನೆಗಳು ಮತ್ತು ಗುಂಪುಗಳಿಗೆ ಪೊಲೀಸರು ನೀಡಿದ ಅನುಮತಿಗಳ ವಿವರಗಳನ್ನು ಕೆಎಸ್‌ಪಿಸಿಬಿ ಪರಿಶೀಲಿಸಿದೆ. ಯಾವುದೇ ಸಂಸ್ಥೆಯು ತನ್ನ ನಿಯಮಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಮಾಹಿತಿಗಾಗಿ ಈ ವಿವರಗಳನ್ನು ಬಳಸಲು ಅಧಿಕಾರಿಗಳಿಗೆ ಸೂಚಿಸಿದೆ. ಬಿಬಿಎಂಪಿ ಮಟ್ಟದಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲು ವಲಯ ಜಂಟಿ ಆಯುಕ್ತರು, ಕೆಎಸ್‌ಪಿಸಿಬಿ ಪ್ರಾದೇಶಿಕ ಅಧಿಕಾರಿ, ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಎನ್‌ಜಿಒ ಪ್ರತಿನಿಧಿಯನ್ನು ಒಳಗೊಂಡ ವಲಯ ಸಮಿತಿಗಳನ್ನು ರಚಿಸಲು ನಿರ್ದೇಶನ ನೀಡಲಾಗಿದೆ.

ಚಾಮರಾಜಪೇಟೆ ನಂತರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಾಯಚಾಮರಾಜಪೇಟೆ ನಂತರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಾಯ

ರಾಜ್ಯಕ್ಕೆ ಹೊರಗಿನಿಂದ ಬರುವ ಪಿಒಪಿ ಮೂರ್ತಿಗಳ ಹರಿವನ್ನು ಪರಿಶೀಲಿಸಲು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ರಾಜ್ಯದ ಗಡಿಯಲ್ಲಿ ಜಿಲ್ಲಾ ಅಧಿಕಾರಿಗಳಿಗೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲು ತಿಳಿಸಲಾಗಿದೆ. ಜನರು ಪಿಒಪಿ ವಿಗ್ರಹಗಳನ್ನು ಸ್ಥಾಪಿಸಿದರೆ ಅಂತಹ ವಿಗ್ರಹಗಳು ಕೆರೆಗಳು, ಕೊಳಗಳು ಅಥವಾ ನದಿಗಳಿಗೆ ತಲುಪದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವುಗಳ ತೆರವಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕೆಎಸ್‌ಪಿಸಿಬಿ ತಿಳಿಸಿದೆ.

Strict action against if POP Ganesh is used: KSPCB

ಐದು ಅಡಿ ಎತ್ತರದ ಗಣೇಶನ ವಿಗ್ರಹದ ಮೇಲಿನ ನಿರ್ಬಂಧವನ್ನು ಈ ಸಲವು ನಿರ್ಬಂಧ ಮಾಡಲಾಗಿದೆ. ಗರಿಷ್ಠ ಎತ್ತರದ ಮಿತಿಯನ್ನು ನಿಗದಿಪಡಿಸುವ ಮೊದಲು ತೂಕ, ಸಾಗಣೆ ಮತ್ತು ತ್ಯಾಜ್ಯ ಉತ್ಪಾದನೆಯನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಕೆಎಸ್‌ಪಿಸಿಬಿ ಹೇಳಿದೆ. ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಮಾತನಾಡಿ, ನಿಯಮಾವಳಿಗಳು ಜಾಗೃತಿ ಮೂಡಿಸುವ ಉದ್ದೇಶ ಹೊಂದಿವೆ. ನಮ್ಮ ಚಟುವಟಿಕೆಗಳು ಸೀಮಿತವಾಗಿದ್ದರೂ, ಸಮಾಜದಲ್ಲಿ ನಾವು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೋಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಜನರು ಪರಿಸರ ಸ್ನೇಹಿಯಾಗಿ ಹಬ್ಬದ ಆಚರಣೆಯ ಮಹತ್ವವನ್ನು ಅರ್ಥಮಾಡಿಕೊಂಡಿರುವುದನ್ನು ನಾವು ನೋಡಿದ್ದೇವೆ ಎಂದು ಕೆಎಸ್‌ಪಿಸಿಬಿ ಹೇಳಿದೆ.

English summary
KSPCB, which has banned Ganesha and Gowri idols made of plaster of Paris (POP) and chemical dyes, has directed local bodies across the state, including BBMP, to take strict action against violators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X