ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಮಹಿಳೆಗೆ ಬೆಂಗಳೂರಿನಲ್ಲಿ ಕೊರೊನಾ ಗಿಂತಲೂ ಘೋರ ಸಾವು

|
Google Oneindia Kannada News

ಬೆಂಗಳೂರು, ಮೇ. 15: ನರ ಭಕ್ಷಕ ನಾಯಿಗಳು ದಾಳಿ ಮಾಡಿ ಅಪರಿಚಿತ ವೃದ್ಧೆ ಮಹಿಳೆಯನ್ನು ಕೊಂದಿರುವ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಸುಮಾರು 60 ವರ್ಷ ವಯಸ್ಸಿನ ಮಹಿಳೆ ವಿವರಗಳು ಲಭ್ಯವಾಗಿಲ್ಲ. ಬೆಂಗಳೂರಿನ ರಾಜ ರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಸುಮಾರು 9.30 ರ ಸುಮಾರಿನಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ 60 ವರ್ಷದ ಮಹಿಳೆ ಮೇಲೆ ಎರಗಿವೆ. ಇದನ್ನು ಗಮನಿಸಿ ಸ್ಥಳೀಯರು ನಾಯಿಗಳನ್ನು ಓಡಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮಹಿಳೆ ಅನಾಥಳಾಗಿದ್ದು, ರಸ್ತೆ ಸಮೀಪವೇ ನೆಲೆ ಕಂಡುಕೊಂಡಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ಪುನಃ ದಾಳಿ ನಡೆಸಿರುವ ಬೀದಿ ನಾಯಿಗಳು ಅನಾಥ ಮಹಿಳೆ ಮೇಲೆ ಎರಗಿವೆ. ಜೀವ ರಕ್ಷಿಸಿಕೊಳ್ಳಲಲು ಒದ್ದಾಡಿ ಜೀವ ಬಿಟ್ಟಿದ್ದಾಳೆ. ಮಹಿಳೆಯ ತಲೆ ಹಾಗೂ ಕಾಲಿನ ಅರ್ಧ ಭಾಗವನ್ನು ಸಂಪೂರ್ಣವಾಗಿ ನಾಯಿಗಳು ಕಚ್ಚಿ ತಿಂದಿವೆ.

Bengaluru: street dogs killed orphaned women !

Recommended Video

ಟೀ ಕುಡಿಯೋದ್ರಿಂದ ಕೊರೊನಾ‌ ಸೋಂಕು ತಡೆಗಟ್ಟಬಹುದಾ? | Oneindia Kannada

ಬೆಳಗ್ಗೆ ಮೃತ ದೇಹವನ್ನು ನೋಡಿದ ಸ್ಥಳೀಯರು ಪೊಲೀಸರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಾಜ ರಾಜೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Orphaned woman was killed by street dogs in Bengaluru know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X