ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಬ್‌ನಲ್ಲಿ ಏಕಾಏಕಿ ಬಂದು ಯುವತಿಯನ್ನು ತಬ್ಬಿದ ಅಪರಿಚಿತ, ನಡೆದಿದ್ದೇನು?

|
Google Oneindia Kannada News

ಬೆಂಗಳೂರು, ಏ.9: ಪಬ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಷ್ಟೇ ಅಲ್ಲದೆ ತನ್ನನ್ನು ತಬ್ಬಿಕೊಂಡು ದುರ್ವರ್ತನೆ ತೋರಿದ್ದಾನೆ ಎಂದು 23 ವರ್ಷದ ಯುವತಿಯೊಬ್ಬಳು ದೂರು ದಾಖಲಿಸಿದ್ದಾಳೆ.

ಆಕೆ ಪಬ್‌ ಒಂದಕ್ಕೆ ಹೋಗಿದ್ದ ಸಂದರ್ಭದಲ್ಲಿ ಸ್ಮೋಕಿಂಗ್ ಏರಿಯಾದಲ್ಲಿ ಒಬ್ಬಳೇ ಕುಳಿತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ತಬ್ಬಿಕೊಂಡಿದ್ದಷ್ಟೇ ಅಲ್ಲದೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಆಕೆ ದೂರಿದ್ದಾಳೆ.

ಸಮಯ ಮೀರುವ ರೆಸ್ಟೋರೆಂಟ್, ಬಾರ್ ವಿರುದ್ಧ ಕ್ರಮ ಸಮಯ ಮೀರುವ ರೆಸ್ಟೋರೆಂಟ್, ಬಾರ್ ವಿರುದ್ಧ ಕ್ರಮ

ಯುವತಿ ಹಾಗೂ ಆಕೆಯ ಫ್ರೆಂಡ್ ರಾತ್ರಿ ಸುಮಾರು 10.30ಕ್ಕೆ ಕೋರಮಂಗಲ 5ನೇ ಬ್ಲಾಕ್‌ನಲ್ಲಿರುವ ಗ್ಯಾಸ್ಟ್ರೋ ಪಬ್‌ಗೆ ಹೋಗಿದ್ದರು. ಆಕೆ ಸ್ಮೋಕಿಂಗ್ ರೂಮಿನಲ್ಲಿದ್ದಾಗ ಅಪರಿಚಿತ ವ್ಯಕ್ತಿ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಆಲ್ಲಿಂದ ಆಕೆ ತಕ್ಷಣ ಓಡಿ ಹೋಗಿದ್ದಾಳೆ. ತಕ್ಷಣ ಎಲ್ಲರಿಗೂ ವಿಷಯ ತಿಳಿಸಿದ್ದಾಳೆ.

stranger hugs woman at pub in Bengaluru

ಆದರೆ ಪಬ್‌ನ ಸಿಬ್ಬಂದಿಗಳು ಇದ್ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ಆತನ ವಿರುದ್ಧ ಕ್ರಮಕ್ಕೂ ಮುಂದಾಗಲಿಲ್ಲ ಹಾಗಾಗಿ ದೂರು ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಕೆಯ ಹೇಳಿಕೆ ಗೊಂದಲಮಯವಾಗಿದೆ ಅಪರಿಚತ ವ್ಯಕ್ತಿಯೊಬ್ಬ ತನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ ಎಂದು ದೂರು ನೀಡಿದ್ದಾಳೆ. ಆದರೆ ಸಿಸಿಟಿವಿ ವೀಕ್ಷಿಸಿದಾಗ ಸ್ಮೋಕಿಂಗ್ ಏರಿಯಾದಲ್ಲಿ ಬೌನ್ಸರ್ ಇದ್ದಿದ್ದು ಕಂಡು ಬಂದಿತ್ತು.

ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಬೌನ್ಸರ್ ಒಬ್ಬರನ್ನು ಬಿಟ್ಟು ಇನ್ಯಾರೂ ಆ ಪ್ರದೇಶದಲ್ಲಿ ಕಾಣಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
A 23 year old woman has filed a police complaint stating that a man , a complete stranger, misbehaved with her by hugging her from behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X