• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪಾರ್ಟ್ ಮೆಂಟ್ ಗಳಿಗೆ ಎಸ್ ಟಿಪಿ ಕಡ್ಡಾಯ: ತಿಳಿಯಬೇಕಾದ 5 ಅಂಶಗಳು

|

ಬೆಂಗಳೂರು, ಏಪ್ರಿಲ್ 28: ನಗರದ ಅಪಾರ್ಟ್ ಮೆಂಟ್ ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್-ಎಸ್ ಟಿಪಿ )ಗಳನ್ನು ಕಡ್ಡಾಯವಾಗಿ ನಿರ್ಮಿಸಬೇಕೆಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ಆದೇಶ ಹೊರಡಿಸಿದೆ.

ಕನಿಷ್ಟ ಐವತ್ತು ಹಾಗೂ ಅದಕ್ಕಿಂತ ಹೆಚ್ಚು ವಾಸದ ಮನೆಗಳನ್ನು ಹೊಂದಿರುವ ಅಪಾರ್ಟ್ ಮೆಂಟ್ ಗಳಲ್ಲಿ ಇಂಥ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಅದು ಸೂಚಿಸಿದೆ.[ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್]

ಇನ್ನು, 2 ಸಾವಿರ ಚದುರಡಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿರುವ ವಾಣಿಜ್ಯ ಸಂಕೀರ್ಣಗಳಿಗೆ ತ್ಯಾಜ್ಯ ಸಂಸ್ಕರಣಾ ಘಟಕವೂ ಸೇರಿದಂತೆ ಎರಡು ಪೈಪುಗಳ ವ್ಯವಸ್ಥೆಯನ್ನು (ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಪುನರ್ಬಳಕೆಗೆ ಅನುಕೂಲವಾಗುವಂತೆ) ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಮೇಲೆ ತಿಳಿಸಿರುವ ನಿಬಂಧನೆಗಳು ಈಗ ಅಸ್ತಿತ್ವದಲ್ಲಿರುವ ಅಪಾರ್ಟ್ ಗಳಿಗೆ, ವಾಣಿಜ್ಯ ಸಂಕೀರ್ಣಗಳಿಗೆ ಅನ್ವಯವಾಗಲಿವೆಯಾದರೂ, ಹೊಸದಾಗಿ ನಿರ್ಮಾಣವಾಗುವ ಅಪಾರ್ಟ್ ಮೆಂಟ್ ಗಳಿಗೆ ಈ ನಿಬಂಧನೆ ಹೆಚ್ಚು ಕಟ್ಟುನಿಟ್ಟಾಗಿರಲಿದೆ.

ಕೆಲ ವರ್ಷಗಳ ಹಿಂದೆಯೇ ಬಿಡಬ್ಲ್ಯೂಎಸ್ಎಸ್ ಬಿ ಇಂಥದ್ದೊಂದು ನಿರ್ಧಾರ ಕೈಗೊಂಡಿತ್ತು. ಆದರೆ, ಅದಕ್ಕೆ ವ್ಯಾಪಕ ವಿರೋಧಗಳೂ ವ್ಯಕ್ತವಾಗಿದ್ದವು. ಹಾಗಿದ್ದರೆ, ಈ ಎಸ್ ಟಿಪಿ ಏನು, ಅದರ ಪ್ರಯೋಜನಗಳೇನು, ಹೊಸ ಆದೇಶ ಏನು ಹೇಳುತ್ತೆ ಮುಂತಾದವುಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

(ಇಲ್ಲಿ ಬಳಸಲಾಗಿರುವ ಎಲ್ಲಾ ಚಿತ್ರಗಳೂ ಸಾಂದರ್ಭಿಕವಾದವು)

ನೀರಿನ ಉತ್ಪತ್ತಿಗೆ ಹೊಸ ಆಯಾಮ

ನೀರಿನ ಉತ್ಪತ್ತಿಗೆ ಹೊಸ ಆಯಾಮ

ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಒಳ ಚರಂಡಿಗಳಿಂದ ಬರುವ ನೀರನ್ನು ಶುದ್ಧೀಕರಿಸಿ ಶೇ. 100ರಷ್ಟು ಬಳಸಲು ಯೋಗ್ಯವಾದ ನೀರನ್ನಾಗಿ ಪರಿವರ್ತಿಸಲಾಗುತ್ತದೆ. ಈ ನೀರನ್ನು ಕುಡಿಯುವ ಹೊರತಾಗಿನ ಎಲ್ಲಾ ಬಳಕೆಗೆ ಉಪಯೋಗಿಸಬಹುದು. ನಗರದ ಎಲ್ಲಾ ಅಪಾರ್ಟ್ ಮೆಂಟ್ ಗಳಲ್ಲಿ ಕಾಲೋನಿಗಳಲ್ಲಿ ಇಂಥ ವ್ಯವಸ್ಥೆ ಚಾಲನೆಗೆ ಬಂದರೆ, ನಗರದ ನೀರಿನ ಕೊರತೆ ಬಹುತೇಕ ಕಡಿಮೆಯಾಗುತ್ತದೆ.

ಎಲ್ಲವೂ ಕಡ್ಡಾಯ

ಎಲ್ಲವೂ ಕಡ್ಡಾಯ

ಇನ್ನು ಮುಂದೆ ನಿರ್ಮಾಣಗೊಳ್ಳಲಿರುವ ಹೊಸ ಅಪಾರ್ಟ್ ಮೆಂಟ್ ಗಳು ಕಡ್ಡಾಯವಾಗಿ ಎಸ್ ಟಿಪಿ ಹಾಗೂ ಎರಡು ಪೈಪುಗಳ ವ್ಯವಸ್ಥೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಿದೆ. ಅಲ್ಲದೆ, ಕನಿಷ್ಠ 20 ಮನೆಗಳಿರುವ ಅಪಾರ್ಟ್ ಮೆಂಟ್ ಕಟ್ಟಿದರೂ ಅವಕ್ಕೂ ಈ ನಿಬಂಧನೆ ಅನ್ವಯವಾಗುತ್ತದೆ.

ತಪ್ಪಿದರೆ ದಂಡ

ತಪ್ಪಿದರೆ ದಂಡ

ಈಗ ಅಸ್ತಿತ್ವದಲ್ಲಿರುವ ಅಪಾರ್ಟ್ ಮೆಂಟ್ ಗಳಲ್ಲಿ ಎಸ್ ಟಿಪಿ ಅಳವಡಿಕೆಗೆ ಇದೇ ವರ್ಷ ಡಿಸೆಂಬರ್ 31ರ ಗಡುವನ್ನು ವಿಧಿಸಲಾಗಿದೆ. ಇಲ್ಲವಾದರೆ, ಅಧಿಕ ಪ್ರಮಾಣದ ದಂಡ ವಿಧಿಸುವುದಾಗಿ ಮಂಡಳಿ ಎಚ್ಚರಿಕೆ ನೀಡಿದೆ.

ಹೆಚ್ಚುವರಿ ಶುಲ್ಕ, ಲೆವಿ

ಹೆಚ್ಚುವರಿ ಶುಲ್ಕ, ಲೆವಿ

ಎಸ್ ಟಿಪಿ ಅಳವಡಿಕೆ ಕುರಿತಂತೆ ನಿರ್ಲಕ್ಷ್ಯ ವಹಿಸುವ ಅಪಾರ್ಟ್ ಮೆಂಟ್ ಮಾಲೀಕರಿಗೆ ಆ ಅಪಾರ್ಟ್ ಮೆಂಟ್ ಗೆ ಮೂರು ತಿಂಗಳ ನೀರಿನ ಹಾಗೂ ಸ್ಯಾನಿಟಲಿ ಶುಲ್ಕದ ಒಟ್ಟು ಮೊತ್ತದ ಆಧಾರದ ಮೇಲೆ ಶೇ. 25ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಗಡುವು ಮುಗಿದ ನಂತರದ ಮೊದಲ ಮೂರು ತಿಂಗಳುಗಳ ಕಾಲ ಈ ದಂಡದ ನಿಯಮ ಪಾಲಿಸಲಾಗುತ್ತದೆ. ಮೂರು ತಿಂಗಳು ದಾಟಿದ ನಂತರ, ವಾರ್ಷಿಕವಾಗಿ ನಿರ್ದಿಷ್ಟ ಅಪಾರ್ಟ್ ಮೆಂಟ್ ಗೆ ತಗಲುವ ನೀರಿನ ಹಾಗೂ ಸ್ಯಾನಿಟರಿ ಶುಲ್ಕದ ಶೇ. 50ರಷ್ಟು ಶುಲ್ಕವನ್ನು ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತದೆ.

ವಿಚಾರ ಕೋರ್ಟ್ ನಲ್ಲಿದ್ದರೂ ಆದೇಶ

ವಿಚಾರ ಕೋರ್ಟ್ ನಲ್ಲಿದ್ದರೂ ಆದೇಶ

ವರ್ಷಗಳ ಹಿಂದೆಯೇ ಬಿಡಬ್ಲ್ಯೂಎಸ್ಎಸ್ ಬಿ ಇಂಥದ್ದೊಂದು ಆಲೋಚನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ, ಆಗ ಬಹುತೇಕ ಅಪಾರ್ಟ್ ಮೆಂಟ್ ಮಾಲೀಕರು ಇದನ್ನು ವಿರೋಧಿಸಿದ್ದರು. ಈಗಾಗಲೇ ಅಸ್ತಿತ್ವದಲ್ಲಿರುವ ಅಪಾರ್ಟ್ ಮೆಂಟ್ ಗಳಲ್ಲಿ ಎಸ್ ಟಿಪಿ ಅಳವಡಿಸುವುದು ತಾಂತ್ರಿಕವಾಗಿ ಅಸಾಧ್ಯದ ಕೆಲಸ ಎಂದಿದ್ದರು. ಇನ್ನೂ ಕೆಲವು ಅಪಾರ್ಟ್ ಮೆಂಟ್ ಮಾಲೀಕರು ಈ ಬಗ್ಗೆ ಹೈಕೋರ್ಟ್ ನಲ್ಲಿ ದೂರನ್ನೂ ಸಲ್ಲಿಸಿದ್ದರು. ಆದರೆ, ಇದ್ಯಾವುದನ್ನೂ ಲೆಕ್ಕಿಸದ ಬಿಡಬ್ಲ್ಯೂಎಸ್ಎಸ್ ಬಿ, ಈಗ ಕಟ್ಟುನಿಟ್ಟಾದ ಆದೇಶವನ್ನು ಜಾರಿಗೊಳಿಸಿದೆ.

English summary
The Bangalore Water Supply and Sewerage Board (BWSSB) has issued a final notification making sewege tratment plants (STP) and dual-piping system mandatory for all exsting apartments having 50 adn more residential units/buildings measuring 5,000 square and above, which ever is lower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X