ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Stories Of Strength: ಎದೆಯಲ್ಲಿ ನಳಿಕೆಯಿಟ್ಟುಕೊಂಡೇ ಕೊರೊನಾ ಗೆದ್ದ 99ರ ವ್ಯಕ್ತಿ

|
Google Oneindia Kannada News

ಬೆಂಗಳೂರು, ಜೂನ್ 07: ಕೊರೊನಾದ ಎರಡನೇ ಅಲೆಯು ಹೆಚ್ಚು ಯುವಕರನ್ನೇ ಬಲಿ ಪಡೆದಿದೆ. ಆದರೆ ಎರಡನೇ ಅಲೆ ಸಂದರ್ಭದಲ್ಲಿ ಹಿರಿಯರು ಕೊರೊನಾವನ್ನು ಗೆದ್ದು ಹೊರಬಂದಿರುವ ಹಲವು ನಿದರ್ಶನಗಳಿವೆ, ಇದರಿಂದ ಯುವ ಜನತೆಗೆ ಬದುಕುವ ಆಸೆಯನ್ನು ಇಮ್ಮಡಿಗೊಳಿಸುತ್ತದೆ.

ಕೊರೊನಾ ಬಂದಾಕ್ಷಣ ಸಾಯುವುದಿಲ್ಲ, ಕೊರೊನಾವನ್ನು ಜಯಿಸಬಹುದು, ಎಂದು ಹಿರಿಯರು ನಮಗೆಲ್ಲಾ ಧೈರ್ಯ ತುಂಬುತ್ತಿದ್ದಾರೆ. ಅದಕ್ಕೆ ಬೆಂಗಳೂರಿನ 99 ವರ್ಷದ ಬಸವಯ್ಯ ಎಂಬುವರೇ ಸಾಕ್ಷಿ, ಅವರು 21 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು, ಅವರ ಎದೆಗೆ ನಳಿಕೆ ಹಾಕಲಾಗಿತ್ತು.

ಅವರಿಗೆ ಮೇ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿತ್ತು, ಉಸಿರಾಟ ತೊಂದರೆಯನ್ನು ಕೂಡ ಅನುಭವಿಸಿದ್ದರು, ಅವರಿಗೆ ನ್ಯೂಮೋಥೊರಾಕ್ಸ್ ಇರುವುದು ಅಪತ್ತೆಯಾಗಿತ್ತು, ಮತ್ತಷ್ಟು ಪರೀಕ್ಷೆ ನಡೆಸಿದಾಗ ಜಠರದಲ್ಲಿ ರಂಧ್ರ ಇರುವುದು ಗೊತ್ತಾಗಿತ್ತು. ಅದು ಅವರ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು.

Stories Of Strength 99 Year Old From Bengaluru Fights Off Covid Bravely With Tube In His Chest

ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿತ್ತು, ಆದರೆ ಅವರು ಕೃತಕ ಆಮ್ಲಜನಕ ಪಡೆಯುತ್ತಿದ್ದ ಕಾರಣ ಔಷಧಿಗಳ ಮೂಲಕ ಕಡಿಮೆ ಮಾಡಲು ವೈದ್ಯರ ತಂಡ ನಿರ್ಧರಿಸಿತ್ತು.
''ಮೊದಲ ಮೂರು ದಿನ ಅವರಿಗೆ ಚಿಕಿತ್ಸೆ ನೀಡಿದ ಬಳಿಕ, ಅವರ ಆರೋಗ್ಯ ಉತ್ತಮವಾಗಲು ಆರಂಭಿಸಿತು'' ಎಂದು ರಾಜಾಜಿನಗರದ ಸುಗುಣಾ ಆಸ್ಪತ್ರೆಯ ವೈದ್ಯರಾದ ಡಾ. ಎನ್‌ ಗ್ನಾನಿ ತಿಳಿಸಿದ್ದಾರೆ.

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada

''ಆದರೆ ಒಂದು ವಾರದ ಬಳಿಕ ಅವರಿಗೆ ತೀವ್ರವಾಗಿ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು, ಬಳಿಕ ಸಿಟಿ ಸ್ಕ್ಯಾನ್ ಮಾಡಲಾಯಿತು, ಗಾಳಿಯಲ್ಲಿ ಹೊರ ಹಾಕಲು ಎದೆಯೊಳಗೆ ಟ್ಯೂಬ್‌ನ್ನು ಅಳವಡಿಸಿದ್ದೇವೆ, ಅದನ್ನು 10 ದಿನಗಳವರೆಗೆ ಇರಿಸಿಲಾಗಿತ್ತು ಆದರೂ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ'' ಎಂದು ವೈದ್ಯರು ಸಂತಸ ವ್ಯಕ್ತಪಡಿಸಿದರು.

English summary
As the Covid-19 second wave has targeted the younger population and claimed many lives, here is 99-year-old Basavaiah from Bengaluru, who had a tube inserted in his chest for 10 days, was discharged recently after being admitted in the hospital for 21 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X