ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Stories of strength; ಕೋವಿಡ್‌ಗೆದ್ದ ದೇವನಹಳ್ಳಿಯ 110ರ ವೃದ್ಧೆ!

|
Google Oneindia Kannada News

ಕೋವಿಡ್ 2ನೇ ಅಲೆ ಹೊಡೆತಕ್ಕ ಹಲವಾರು ಯುವಕರು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧೈರ್ಯವಿದ್ದರೆ ಕೊರೊನಾ ಗೆಲ್ಲಬಹುದು ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವೃದ್ಧೆಯೊಬ್ಬರು ಸಾಕ್ಷಿಯಾಗಿದ್ದಾರೆ.

ಕೋವಿಡ್ ಸೋಂಕು ತಗುಲಿದೆ ದೇವನಹಳ್ಳಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿದ್ದ 110 ವರ್ಷದ ಅಕ್ಕಯಮ್ಮ ಸಂಪೂರ್ಣ ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ಸ್ಯಾಚುರೇಶನ್ 98 ಇದ್ದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್ ಸೂಚನೆಯಂತೆಯೇ ಡಿಸ್ಚಾರ್ಜ್ ಮಾಡಲಾಗಿದೆ.

 Stories Of Strength; ಕಲಿಯಬೇಕಿದೆ ಚೈತನ್ಯ ಕಳೆದುಕೊಳ್ಳದೇ ಬದುಕುವ ಕಲೆ Stories Of Strength; ಕಲಿಯಬೇಕಿದೆ ಚೈತನ್ಯ ಕಳೆದುಕೊಳ್ಳದೇ ಬದುಕುವ ಕಲೆ

ಅಕ್ಕಯಮ್ಮ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ನಿವಾಸಿ. ಬಿಪಿ, ಶುಗರ್ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಮೇ 22ರಂದು ಅಕ್ಕಮ್ಮಗೆ ಸೋಂಕು ತಗುಲಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಉಸಿರಾಟ ಸಮಸ್ಯೆ ಕಂಡುಬಂದಾಗ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು.

 Stories Of Strength: ದಾವಣಗೆರೆಯಲ್ಲಿ ಕೋವಿಡ್ ಗೆದ್ದ 16 ನವಜಾತ ಶಿಶುಗಳು Stories Of Strength: ದಾವಣಗೆರೆಯಲ್ಲಿ ಕೋವಿಡ್ ಗೆದ್ದ 16 ನವಜಾತ ಶಿಶುಗಳು

Stories Of Strength 110 Year Old Devananahalli Women Wins Covid Battle

110 ವರ್ಷವಾದ್ದರಿಂದ ವೈದ್ಯರು, ನರ್ಸ್‌ಗಳು ವಿಶೇಷ ಕಾಳಜಿ ವಹಿಸಿದರು. ಬೇರೆ ಆರೋಗ್ಯ ಸಮಸ್ಯೆ ಇಲ್ಲದ ಒಟ್ಟು 12 ದಿನಗಳ ಚಿಕಿತ್ಸೆ ಬಳಿಕ ಅಕ್ಕಯಮ್ಮ ಸಂಪೂರ್ಣ ಗುಣಮುಖಗೊಂಡಿದ್ದಾರೆ.

ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ

ಅಕ್ಕಯಮ್ಮ ಮನೆಯಲ್ಲಿ ಮೂವರಿಗೆ ಕೋವಿಡ್ ಸೋಂಕು ತಗುಲಿತ್ತು. ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖಗೊಂಡಿದ್ದಾರೆ. ಹಿಂದೆ ಅಕ್ಕಯಮ್ಮನಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೆಲ್ಲ ತಿಳಿದಿಲ್ಲ, ಅಷ್ಟು ಆರೋಗ್ಯವಂತರಾಗಿದ್ದಾರೆ.

"ಧೈರ್ಯದಿಂದ ಇದ್ದರೆ ಕೋವಿಡ್ ಗೆಲ್ಲಬಹುದು ಎಂಬುದಕ್ಕೆ ಅಜ್ಜಿಯೇ ಮಾದರಿ. ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದೇವೆ" ಎಂದು ಮೊಮ್ಮಗ ಚನ್ನಕೃಷ್ಣಪ್ಪ ಮಾಧ್ಯಮಗಳ ಜೊತೆ ಮಾತನಾಡಿದರು.

Recommended Video

ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

ಕೋವಿಡ್ ಕೇರ್ ಸೆಂಟರ್‌ನಿಂದ ಅಕ್ಕಯಮ್ಮ ಡಿಸ್ಚಾರ್ಜ್ ಆಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗಳು ಫೋಟೋ ತೆಗೆಸಿಕೊಂಡರು. ಕೋವಿಡ್‌ಗೆ ಭಯಪಡದೇ ಚಿಕಿತ್ಸೆ ಪಡೆಯಿರಿ ಎಂದು ಸಿಬ್ಬಂದಿಗಳು ಸಹ ಕರೆ ನೀಡಿದ್ದಾರೆ.

English summary
Akkayamma 110 year old Devanahalli based women recovered from Covid 19. Women under treatment for 12 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X