• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ

|

ಕೇಂದ್ರ ಸರ್ಕಾರದ ಭಾಷಾ ತಾರತಮ್ಯ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಅಭಿಮಾನ ನಡೆಸಲಾಗಿದೆ.

ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತೀಯರು ಸತತ ಟ್ವೀಟ್ ಗಳ ಮೂಲಕ ಭಾನುವಾರದಂದು #StopHindiImposition ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಂಡಿದ್ದಾರೆ. ತ್ರಿಭಾಷಾ ಸೂತ್ರ, ಶೈಕ್ಷಣಿಕ ನೀತಿ ವಿರುದ್ಧ ವಿರೋಧ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. 'ಇದು ಶಿಫಾರಸು ಅಷ್ಟೇ' ಎಂದು ಕರಡು ಸಮಿತಿ ಮುಖ್ಯಸ್ಥರಾಗಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.

ಹಿಂದಿ ಬರದೆಂದ ಮಂಡ್ಯ ರೈತನನ್ನು ಹೊರಗಟ್ಟಿದ ಬ್ಯಾಂಕ್ ನೌಕರ

ಸಂವಿಧಾನ 8 ಪರಿಚ್ಛೇದದ ಅನ್ವಯ ಎಲ್ಲಾ ಭಾಷೆಗಳಿಗೂ(22) ಸಮಾನ ಮಾನ್ಯತೆ ಹಾಗೂ ದೇಶದ ಅಧಿಕೃತ ಭಾಷೆ ಎಂದು ಕರೆಸಿಕೊಳ್ಳುವ ಹಕ್ಕಿದೆ. ಅದರೆ, ಹಿಂದಿ ಭಾಷೆಯನ್ನು ಮಾತ್ರ ಹೇರಿಕೆ ಮಾಡುವುದು ಸರಿಯಲ್ಲ. ಹಿಂದಿಯೇತರ ರಾಜ್ಯಗಳ ಜನತೆಯನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ.

ಹಿಂದಿ ಹೇರಿಕೆ ವಿರುದ್ಧದ ಟ್ವೀಟ್ ಪ್ರತಿಭಟನೆ ಯಶಸ್ವಿ!

ಪರಿಸ್ಥಿತಿ ಹೀಗಿರುವಾಗ, ತ್ರಿಭಾಷಾ ಸೂತ್ರದ ಅಡಿಯಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಕೇಂದ್ರ ಸರ್ಕಾರ ಹೊರಡಿರುವುದು ಸರಿಯಲ್ಲ ಎಂದು ವಿರೋಧಿಸಲಾಗಿದೆ.

ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ

1965ರಿಂದ ಹಿಂದಿಯನ್ನು ಮಾತ್ರ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂದಿಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಿತು. ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಬಳಸಿ ಜಾಗೃತಿ ಮೂಡಿಸಲಾಗಿದೆ.

ಇದೆ ಮೊದಲಲ್ಲ, ಈ ಹಿಂದೆ ಕೂಡಾ ಸರ್ಕಾರಕ್ಕೆ ಹಿನ್ನಡೆ

ಇದೆ ಮೊದಲಲ್ಲ, ಈ ಹಿಂದೆ ಕೂಡಾ ಸರ್ಕಾರಕ್ಕೆ ಹಿನ್ನಡೆ

'ತಮಿಳಿಗರಿಗೆ ತಮ್ಮ ಭಾಷೆಯ ಬಗ್ಗೆ ತುಂಬಾ ಗೌರವ ಮತ್ತು ಭಾವನಾತ್ಮಕ ಸಂಬಂಧ ಇದೆ ಎಂದು ಅಂದಿನ ಸಿಎಂ ಜಯಲಲಿತಾ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಭಾಷೆ ವಿಷಯದಲ್ಲಿ ಪ್ರತಿಪಕ್ಷ ಡಿಎಂಕೆ ಕೂಡಾ ಕೈಜೋಡಿಸಿ ಮೋದಿ ಸರ್ಕಾರದ ಕ್ರಮವನ್ನು ಖಂಡಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ಸರ್ಕಾರ ಹಿಂಪಡೆದಿತ್ತು. ಈಗ ಮತ್ತೊಮ್ಮೆ ಹಿಂದಿ ಹೇರಿಕೆ ಭೀತಿ ಎದುರಾಗಿದ್ದು, ಡಿಎಂಕೆ ನಾಯಕ ಸ್ಟಾಲಿನ್ ಕೂಡಾ ಖಂಡಿಸಿದ್ದಾರೆ.

ತ್ರಿಭಾಷಾ ಸೂತ್ರ ಶೈಕ್ಷಣಿಕ ನೀತಿ ಬಗ್ಗೆ ಸರ್ಕಾರದ ಸ್ಪಷ್ಟನೆ

ತ್ರಿಭಾಷಾ ಸೂತ್ರ ಶೈಕ್ಷಣಿಕ ನೀತಿ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆಯ ಪ್ರಕಟಣೆಯನ್ನು ಟ್ವೀಟ್ ಮಾಡಲಾಗಿದೆ. ಇದು ಕರಡು ಪ್ರತಿಯಷ್ಟೇ, ಈ ಹಿಂದೆ ಕೂಡಾ ಈ ಸೂತ್ರದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ, ಶಿಫಾರಸ್ಸುಗಳಿಗೆ ಸಮ್ಮತಿ ಸಿಕ್ಕಿಲ್ಲ, ಇದನ್ನು ಕಾನೂನಾಗಿ ಜಾರಿಗೊಳಿಸಲಾಗುತ್ತಿಲ್ಲ ಎನ್ನಲಾಗಿದೆ.

ಹಿಂದಿ ಹೇರಿಕೆಯಾಗುತ್ತಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸರಣಿ ಟ್ವೀಟ್ ಮೂಲಕ ಭಾಷೆ ಬಗ್ಗೆ ಅಭಿಮಾನವಿದೆ. ಶೈಕ್ಷಣಿಕ ಕರಡು ಪ್ರತಿ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳಿವೆ, ಸರ್ಕಾರ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಮಾಡುತ್ತಿಲ್ಲ ಎಂದಿದ್ದಾರೆ.

ಹಿಂದಿ ಹೇರಿಕೆ ನಿಲ್ಲಿಸಿ ಎಂದ ತಮಿಳರು

ನಮಗೆ ನಮ್ಮದೇ ಆದ ಪ್ರತ್ಯೇಕ ಅಸ್ಮಿತೆಯಿದೆ, ನಾವು ಹಿಂದಿಯಂಥ ಅನ್ಯಲೋಕದ ಭಾಷೆಯನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಹಿಂದಿ ಹೇರಿಕೆ ನಿಲ್ಲಿಸಿ ಎಂದ ತಮಿಳರು.

ಹಿಂದಿ ರಾಷ್ಟ್ರಭಾಷೆ, ಸಂಸ್ಕೃತ ಎಲ್ಲಾ ಭಾಷೆಗೆ ಮಾತೃಭಾಷೆ

ಹಿಂದಿ ರಾಷ್ಟ್ರಭಾಷೆ, ಸಂಸ್ಕೃತ ಎಲ್ಲಾ ಭಾಷೆಗೆ ಮಾತೃಭಾಷೆ ಅಥವಾ ಮೂಲ ಭಾಷೆ ಎಂಬ ಸುಳ್ಳನ್ನು ಇನ್ನೆಷ್ಟು ಕಾಲ ಹೇಳುತ್ತೀರಿ

ಮೂರನೇ ಐಚ್ಛಿಕ ಭಾಷೆ ಕೂಡಾ ಬೇಡ

ಹಿಂದಿಯನ್ನು ಮೂರನೇ ಐಚ್ಛಿಕ ಭಾಷೆಯಾಗಿ ಕಲಿಸುವುದು ಬೇಡ, ನಮ್ಮದೇ ಭಾಷೆಗಳಾದ, ತುಳು, ಕೊಡವ, ಕೊಂಕಣಿಯನ್ನು ಕಲಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಸಲಹೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hindi should not be made a mandatory third language in schools, a popular campaign on social media said on Saturday, as Twitter was flooded with messages protesting a draft education policy submitted to the new government at the centre a day ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more