ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಲ್ಲಿ ಹೆಚ್ಚಾಗುತ್ತಿದೆ 'ಸ್ಟಮಕ್ ಫ್ಲೂ', ಪೋಷಕರಲ್ಲಿ ಆತಂಕ

|
Google Oneindia Kannada News

ಬೆಂಗಳೂರು, ನವೆಂಬರ್ 29: ಕೊರೊನಾ ಸೋಂಕು ರಾಜ್ಯದಲ್ಲಿ ಕಡಿಮೆಯಾಗಿದ್ದು, ಶಾಲೆಗಳು ಪುನರಾರಂಭಗೊಂಡಿವೆ. ಇದೀಗ ಕೊರೊನಾ ಜತೆಗೆ ಸ್ಟಮಕ್ ಫ್ಲೂ ಎನ್ನುವ ಹೊಸ ಆರೋಗ್ಯ ಸಮಸ್ಯೆ ಮಕ್ಕಳನ್ನು ಕಾಡುತ್ತಿದೆ. ಶಾಲೆಗಳಿಗೆ ತೆರಳುತ್ತಿರುವ ಬಹುತೇಕ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶಾಲೆಗಳು ಪುನರಾರಂಭಗೊಂಡ ಕೆಲವು ತಿಂಗಳುಗಳಲ್ಲೇ ನಗರದ ಮಕ್ಕಳಲ್ಲಿ 'ಸ್ಟಮಕ್ ಫ್ಲೂ' (ಹೊಟ್ಟೆ ಜ್ವರ) ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ.

ರಾಜ್ಯದಲ್ಲಿ ಲಾಕ್‌ಡೌನ್‌ ಪ್ರಸ್ತಾಪವಿಲ್ಲ, ಸುಳ್ಳುಸುದ್ದಿ ನಂಬಬೇಡಿ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ರಾಜ್ಯದಲ್ಲಿ ಲಾಕ್‌ಡೌನ್‌ ಪ್ರಸ್ತಾಪವಿಲ್ಲ, ಸುಳ್ಳುಸುದ್ದಿ ನಂಬಬೇಡಿ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಈ ಸ್ಟಮಕ್ ಫ್ಲೂವನ್ನೂ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಎಂದೂ ಕರೆಯಲಾಗುತ್ತಿದೆ. ಪ್ರತೀನಿತ್ಯ ಈ ಸಮಸ್ಯೆಯಿಂದ 10-12 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

Stomach Flu Cases Increase Among Bengaluru Children

ಚಳಿಗಾಲದಲ್ಲಿ ಬ್ಯಾಕ್ಟಿರಿಯಾ ಸೋಂಕುಗಳು ಸಾಮಾನ್ಯವಾಗಿರುತ್ತದೆ. ಮಳೆ ಹಾಗೂ ಅಲ್ಲಲ್ಲಿ ನೀರು ನಿಂತಿರುವುದು, ಶುದ್ಧ ನೀರಿನೊಂದಿಗೆ ಒಳಚರಂಡಿ ನೀರು ಮಿಶ್ರಣಗೊಳ್ಳುವುದು ಇದಕ್ಕೆ ಕಾರಣವಾಗಬಹುದು. ಅಪಾರ್ಟ್ ಮೆಂಟ್ ಗಳಲ್ಲಿನ ಮಕ್ಕಳು ಇಂತಹ ಸೋಂಕಿನಿಂದ ಹೆಚ್ಚಾಗಿ ಬಳಲುತ್ತಿರುವುದು ಕಂಡು ಬರುತ್ತಿದೆ.

ಮಳೆಗಾಲದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯ ಎಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಸಲಹೆಗಾರ ಡಾ.ಶ್ರೀಕಾಂತ್ ಕೆ.ಪಿ ಅವರು ಹೇಳಿದ್ದಾರೆ.

ಬಹುತೇಕ ಮಕ್ಕಳು 3-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲ ಮಕ್ಕಳು ಗುಣಮುಖರಾಗಲು ಸಾಕಷ್ಟು ಸಮಯ ಬೇಕಾಗುತ್ತಿದೆ. ಕೆಲ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತಿದೆ.

ಕೆಲ ಮಕ್ಕಳ ಮಲದಲ್ಲಿ ರಕ್ತ ಬೀಳುತ್ತಿರುವುದು ಕಂಡು ಬರುತ್ತಿದೆ. ಕೆಲ ಮಕ್ಕಳ ಕರುಳಿನಲ್ಲಿ ದೀರ್ಘಕಾಲದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ಸ್ಟಮಕ್ ಫ್ಲೂ ಕುರಿತು ವೈದ್ಯರು ವಿವರಿಸಿದ್ದಾರೆ.

ಈ ಸ್ಟಮಕ್ ಫ್ಲೂ ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುತ್ತಿದ್ದು, ಇದರ ರೋಗಲಕ್ಷಣಗಳು ಸೌಮ್ಯ ಅಥವಾ ತೀವ್ರವಾಗಿರಲಿದೆ. ಹೊಟ್ಟೆಯ ಸೆಳೆತ, ಅತಿಸಾರ ಮತ್ತು ವಾಂತಿಯ ಲಕ್ಷಣವನ್ನೂ ಇದು ಒಳಗೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಪ್ರತಿದಿನ, ವೈದ್ಯರು ಕನಿಷ್ಠ 12 ಮಂದಿ ವಿಭಿನ್ನ ಹಾಗೂ ತೀವ್ರ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, 1-8 ವರ್ಷಗಳ ಮಕ್ಕಳು ಹೆಚ್ಚಾಗಿ ಸ್ಟಮಕ್ ಫ್ಲೂವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳಿದ್ದು, ಇದರಿಂದ ಕ್ಲಸ್ಟರ್ ಗಳೂ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್‌ನ ಪ್ರಾಧ್ಯಾಪಕ ಮತ್ತು ಹಿರಿಯ ಸಲಹೆಗಾರ್ತಿ ಡಾ ಪರಿಮಳಾ ವಿ ತಿರುಮಲೇಶ್ ಅವರು ಮಾತನಾಡಿ, ನಗರದಲ್ಲಿ ಸ್ಟಮಕ್ ಫ್ಲೂ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾಕಷ್ಟು ಮಕ್ಕಳು ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದಾರೆಂದು ಹೇಳಿದ್ದಾರೆ.
ಮುಂದಿನ ಎರಡು ತಿಂಗಳ ಕಾಲ ಎಲ್ಲಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ಶಿಕ್ಷಣ ಸಂಸ್ಥೆಗಳಿಗೆ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಸೆಮಿನಾರ್, ಕಾನ್ಫರೆನ್ಸ್, ಶೈಕ್ಷಮಿಕ ಚಟುವಟಿಕೆಯನ್ನು ಮುಂದೂಡಿ ಇಲ್ಲವೇ ಕಡಿಮೆ ಜನರ ಭೌತಿಕ ಹಾಜರಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಆಗುವಂತೆ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರು ನಿಗಾ ಇಡಬೇಕೆಂದು ಸರ್ಕಾರ ಹೇಳಿದೆ.

ಮೆಡಿಕರ್, ಪ್ಯಾರಾಮೆಡಿಕಲ್ ಸೇರಿದಂತೆ ಇಂತಹ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಪ್ರತಿದಿನ ಕೋವಿಡ್-19ರ ರೋಗಲಕ್ಷಣಗಳಿವೆಯೇ ಎಂದು ಪರಿಶೀಲಿಸಬೇಕು. ಸೋಂಕು ಲಕ್ಷಣಗಳಿದ್ದರೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟರೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದೆ.

18 ವರ್ಷದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿರುವುದನ್ನು ಶೈಕ್ಷಣಿಕ ಸಂಸ್ಥೆಯ ಖಾತರಿಪಡಿಸಬೇಕು. ಆರೋಗ್ಯ ಕ್ಷೇತ್ರದ ವೃತ್ತಿಪರರು ಸಮ್ಮೇಳನ, ವಿಚಾರಗೋಷ್ಠಿಗಳನ್ನು ಮುಂದಿನ ಕೆಲವು ತಿಂಗಳ ಕಾಲ ವರ್ಚುವಲ್ ರೂಪದಲ್ಲಿ ಮಾಡಬೇಕು ಎಂದು ತಿಳಿಸಿದೆ.

Recommended Video

KS Bharath ಪಂದ್ಯಕ್ಕೆ ಸಿದ್ದವಾಗಿದ್ದು ಕೇವಲ 12 ನಿಮಿಷದಲ್ಲಿ | Oneindia Kannada

English summary
With schools reopening and many children stepping out of their homes after several months, Bengaluru is seeing an outbreak of 'stomach flu', also known as viral gastroenteritis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X