ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲೂ ವ್ಹೇಲ್ ಅಪಾಯಕಾರಿ ಆಟದ ತಡೆಗೆ ಸುಲಭ ಸೂತ್ರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಅಪಾಯಕಾರಿ ಆನ್ ಲೈನ್ ಆಟವಾದ ಬ್ಲೂ ವ್ಹೇಲ್ ಇದೀಗ ಎಲ್ಲ ಸರ್ಕಾರಗಳಿಗೂ ತಲೆನೋವಾಗಿ ಪರಿಣಮಿಸಿದೆ.

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

ಆದ್ದರಿಂದ ಅಂತರ್ಜಾಲ ತಾಣಗಳಲ್ಲಿ ಅನಾರೋಗ್ಯಕರ ಆನ್‍ಲೈನ್ ಆಟಗಳಿಂದ ದೂರವಿರುವಂತೆ ಮತ್ತು ವೆಬ್ ಸೈಟ್ ಗಳನ್ನು ಬಳಕೆ ಮಾಡದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಇದು ಶಿಕ್ಷಣ ಇಲಾಖೆ, ಪೋಷಕರ, ಸಂಘ ಸಂಸ್ಥೆಗಳ ಮತ್ತು ಕಾಲೇಜಿನ ವ್ಯವಸ್ಥಾಪಕ ಮಂಡಳಿಗಳ ಆದ್ಯ ಕರ್ತವ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಬ್ಲೂ ವ್ಹೇಲ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ ಬ್ಲೂ ವ್ಹೇಲ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

'ಬ್ಲೂವೇಲ್ ಚಾಲೆಂಜ್' ಎಂಬ ಆನ್‍ಲೈನ್ ಗೇಮ್ ನಿಂದ ಶಾಲಾ-ಕಾಲೇಜು ಮಕ್ಕಳು ಪ್ರಚೋದನೆಗೊಂಡು ಅಂತಿಮವಾಗಿ ಆತ್ಮಹತ್ಯೆಗೆ ಈಡಾಗುತ್ತಿರುವ ಹಲವು ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಅವುಗಳ ಪರಿಹಾರಕ್ಕೆ ಕೆಲವು ಸಲಹೆಗಳನ್ನು ಇಲಾಖೆ ತಿಳಿಸಿದೆ.

ಇಂಥ ಲಕ್ಷಣ ಕಂಡುಬಂದರೆ ಎಚ್ಚರ ವಹಿಸಿ!

ಇಂಥ ಲಕ್ಷಣ ಕಂಡುಬಂದರೆ ಎಚ್ಚರ ವಹಿಸಿ!

• ಮಗುವಿನ ಶರೀರದಲ್ಲಿ ಅಸಾಮಾನ್ಯ ಚಿಹ್ನೆಗಳು ಮತ್ತು ಗಾಯದ ಗುರುತುಗಳು ವಿಶೇಷವಾಗಿ ತೋಳು ಮತ್ತು ತುಟಿಗಳಲ್ಲಿ ಕಾಣಿಸಿಕೊಂಡಾಗ.
• ಮಗು ಬಹಳ ಸಮಯದವರೆಗೆ ಹೆದರುವ (ಹಾರರ್) ಚಲನಚಿತ್ರ ನೋಡುತ್ತಿರುವಾಗ

ಅಸ್ವಾಭಾವಿಕ ವರ್ತನೆ ಕಂಡರೆ...

ಅಸ್ವಾಭಾವಿಕ ವರ್ತನೆ ಕಂಡರೆ...

• ಮಗು ಅಸ್ವಾಭಾವಿಕ ಸಮಯದಲ್ಲಿ ಅಂದರೆ ಮುಂಜಾನೆ 4.20 ಕ್ಕೆ ಸರಿಯಾಗಿ ಏಳುತ್ತಿದ್ದರೆ.
• ಮಗು ವಿಚಿತ್ರವಾದ ಸಂಗೀತ ಕೇಳುತ್ತಿದ್ದಾರೆ. ಮಗು ಸಾಮಾಜಿಕ ಜಾಲತಾಣಗಳಲ್ಲಿ ಖಿನ್ನತೆಗೊಳಗಾದ ಸಂದೇಶ ಮತ್ತು ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಿದ್ದರೆ! ಈ ಎಲ್ಲಾ ಲಕ್ಷಣ ಕಂಡುಬಂದರೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಶಾಲಾ-ಕಾಲೇಜಿನ ಶಿಕ್ಷಕರ ಕರ್ತವ್ಯ

ಶಾಲಾ-ಕಾಲೇಜಿನ ಶಿಕ್ಷಕರ ಕರ್ತವ್ಯ

• ಮಕ್ಕಳೊಂದಿಗೆ ಆತ್ಮೀಯ ವಾತಾವರಣ ಸೃಷ್ಟಿಸುವ ಮೂಲಕ ಬ್ಲೂವೇಲ್ ಚಾಲೆಂಜ್ ಆಟದ ದುಪ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
• ಈ ಬಗ್ಗೆ ವ್ಯಾಪಕ ಪ್ರಚಾರವನ್ನು ಹಮ್ಮಿಕೊಳ್ಳುವುದು, ಮಕ್ಕಳಿಗೆ ಪ್ರತಿದಿನ ತಿಳುವಳಿಕೆ ನೀಡುವುದು.

ಅನಾರೋಗ್ಯಕರ ಚಟುವಟಿಕೆಯಿಂದ ದೂರವಿರಲು ತಿಳಿವಳಿಕೆ

ಅನಾರೋಗ್ಯಕರ ಚಟುವಟಿಕೆಯಿಂದ ದೂರವಿರಲು ತಿಳಿವಳಿಕೆ

• ಸೈಬರ್ ಕೆಫೆ ಮತ್ತು ಅಂತರ್ಜಾಲ ತಾಣಗಳಿಂದ ಈ ರೀತಿಯ ಅನಾರೋಗ್ಯಕರ ಚಟುವಟಿಕೆಗಳಿಂದ ದೂರವಿರುವಂತೆ ಮಕ್ಕಳಿಗೆ ತಿಳಿಸುವುದು.
• ಈ ಬಗ್ಗೆ ಪೋಷಕರುಗಳಲ್ಲಿಯೂ ಸಹ ಜಾಗೃತಿ ಮೂಡಿಸಲು ಆಂದೋಲನವನ್ನು ರೂಪಿಸಬೇಕು.
• ರಾಜ್ಯಾದ್ಯಂತ ಎಲ್ಲಾ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಪತ್ರ, ಬ್ಯಾನರ್, ಪತ್ರಿಕಾ ಪ್ರಕಟಣೆ ಮುಖಾಂತರ ವ್ಯಾಪಕವಾದ ಪ್ರಚಾರವನ್ನು ಹಮ್ಮಿಕೊಳ್ಳುವುದು.

ಬ್ರೌಸಿಂಗ್ ಸೆಂಟರ್ ಮೇಲೆ ಕಣ್ಣು!

ಬ್ರೌಸಿಂಗ್ ಸೆಂಟರ್ ಮೇಲೆ ಕಣ್ಣು!

• ಸದರಿ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ನೀಡಿ ಈ ಕಾರ್ಯಕ್ರಮಕ್ಕೆ ಸಹಕರಿಸುವುದು.
• ಬ್ರೌಸಿಂಗ್ ಸೆಂಟರ್‍ ಗಳಲ್ಲಿ ಮಕ್ಕಳಿಗೆ ಬ್ಲೂವೇಲ್ ಚಾಲೆಂಜ್ ಆಟ ಆಡಲು ಅವಕಾಶ ಕಲ್ಪಿಸದಂತೆ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಿಸುವುದು.

ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಈ ರೀತಿಯ ಅನಾರೋಗ್ಯಕರ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವಲ್ಲಿ ಜಿಲ್ಲಾಡಳಿತದ ಸಹಕಾರ ಪಡೆದು, ಉಪ ನಿರ್ದೇಶಕರು ಹಾಗೂ ಕಾಲೇಜಿನ ಸಂಸ್ಥೆಯವರು, ಪ್ರಾಂಶುಪಾಲರು ಶಿಕ್ಷಕರುಗಳು' ಬ್ಲೂ ವೇಲ್ ಚಾಲೆಂಜ್' ಎಂಬ ಅನಾರೋಗ್ಯಕರ ಅಂತರ್ಜಾಲ ಆಟದಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕಿದೆ. (ಕೃಪೆ: ಕರ್ನಾಟಕ ವಾರ್ತೆ)

English summary
To prevent blue whale deaths in the state, the department of pre university has given some important steps. Here are some of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X