ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳದಲ್ಲಿ #Steelflyoverbeku ಸಹಿ ಸಂಗ್ರಹ ಅಭಿಯಾನ

ಹೆಬ್ಬಾಳ ನಿವಾಸಿಗಳ ಹಿತರಕ್ಷಣಾ ಸಂಘವಾದ ಹೆಬ್ಬಾಳ ವಿಧಾನಸಭಾ ನಾಗರಿಕರ ಹಿತರಕ್ಷಣಾ ಸಮಿತಿ ಸರ್ಕಾರದ ಉದ್ದೇಶಿತ ಸ್ಟೀಲ್ ಫ್ಲೈಓವರ್ ನಿರ್ಮಾಣದ ಪರವಾಗಿ ಸಹಿ ಸಂಗ್ರಹ ಆಂದೋಲನವನ್ನು ಆರಂಭಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಹೆಬ್ಬಾಳ ನಿವಾಸಿಗಳ ಹಿತರಕ್ಷಣಾ ಸಂಘವಾದ ಹೆಬ್ಬಾಳ ವಿಧಾನಸಭಾ ನಾಗರಿಕರ ಹಿತರಕ್ಷಣಾ ಸಮಿತಿ ಸರ್ಕಾರದ ಉದ್ದೇಶಿತ ಸ್ಟೀಲ್ ಫ್ಲೈಓವರ್ ನಿರ್ಮಾಣದ ಪರವಾಗಿ ಸಹಿ ಸಂಗ್ರಹ ಆಂದೋಲನವನ್ನು ಭಾನುವಾರ ಆರಂಭಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕೈಗೆತ್ತಿಕೊಳ್ಳಲಿರುವ ಈ ಉಕ್ಕಿನ ಮೇಲ್ಸೇತುವೆ ನಿರ್ಮಾಣವಾಗಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೆಬ್ಬಾಳ ಫ್ಲೈಓವರ್ ಬಳಿ ಸಮಾವೇಶಗೊಂಡ ಹೆಬ್ಬಾಳ ವಿಧಾನಸಭಾ ಕ್ಷೇತ್ರದ 5000 ಕ್ಕೂ ಅಧಿಕ ಜನರು ಸಹಿ ಸಂಗ್ರಹ ಆಂದೋಲನದಲ್ಲಿ ಸಹಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಬಳ್ಳಾರಿ ರಸ್ತೆಯನ್ನು ಬಳಸುವ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ ಕ್ಷೇತ್ರದ ಪ್ರತಿನಿಧಿಗಳು ಫ್ಲೈಓವರ್ ನಿರ್ಮಾಣಕ್ಕೆ ಬೆಂಬಲ ನೀಡುವಂತೆ ಅವರಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಂದ ಸಹಿ ಸಂಗ್ರಹ ಮಾಡಿದರು. ಈ ಫ್ಲೈಓವರ್ ನಿರ್ಮಾಣದ ಪರವಾಗಿ ಸಹಿ ಹಾಕಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದರು.[KIAಗೆ 3 ಪರ್ಯಾಯ ಮಾರ್ಗಗಳು, 300 ಕೋಟಿ ರು ಅನುದಾನ]

ಹೆಬ್ಬಾಳ ಫ್ಲೈಓವರ್ ಬಳಿ ಆಗುವ ಸಂಚಾರ ದಟ್ಟಣೆ ಪರಿಹಾರಕ್ಕೆ ಈ ಉಕ್ಕಿನ ಸೇತುವೆ ನಿರ್ಮಾಣ ಪರಿಹಾರ ಆಗುತ್ತದೆ ಎಂಬುದನ್ನು ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಹೆಬ್ಬಾಳದ ನಿವಾಸಿಗಳು ಮನಗಂಡಿದ್ದಾರೆ. ಈ ಕಾರಣಕ್ಕಾಗಿಯೇ ಸಹಿ ಸಂಗ್ರಹ ಆಂದೋಲನವನ್ನು ಹಮ್ಮಿಕೊಂಡಿದ್ದರು.[ಮೇಲ್ಸೇತುವೆ ವಿರುದ್ಧದ ಪ್ರತಿಭಟನೆ ಭರ್ಜರಿ ಯಶಸ್ವಿ]

ಹೆಬ್ಬಾಳ ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಆನಂದಕುಮಾರ್

ಹೆಬ್ಬಾಳ ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಆನಂದಕುಮಾರ್

ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳ ನಾಗರಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಆನಂದಕುಮಾರ್: ಹೆಬ್ಬಾಳ ಸಂಪರ್ಕ ವೃತ್ತದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ಅತಿಯಾದ ವಾಹನಗಳಿಂದಾಗಿ ಹೆಚ್ಚು ತೊಂದರೆ ಅನುಭವಿಸುತ್ತಿರುವವರೆಂದರೆ ಹೆಬ್ಬಾಳದ ನಾಗರಿಕರು. ಈ ಹಿನ್ನೆಲೆಯಲ್ಲಿ ಉಕ್ಕಿನ ಸೇತುವೆ ನಿರ್ಮಾಣವಾದರೆ ಈ ಸಮಸ್ಯೆ ನಿವಾರಣೆ ಆಗುತ್ತದೆ ಎಂದರು.

ಸಂಚಾರ ದಟ್ಟಣೆ ಕಿರಿಕಿರಿ ಇರುವುದಿಲ್ಲ

ಸಂಚಾರ ದಟ್ಟಣೆ ಕಿರಿಕಿರಿ ಇರುವುದಿಲ್ಲ

ಈ ಉಕ್ಕಿನ ಸೇತುವೆ ನಿರ್ಮಾಣಗೊಂಡಲ್ಲಿ ಪ್ರಮುಖವಾಗಿ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸುತ್ತವೆ. ಆಗ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ. ಇದರಿಂದ ನಮಗೆ ಸಂಚಾರ ದಟ್ಟಣೆ ಕಿರಿಕಿರಿ ಇರುವುದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಹೆಬ್ಬಾಳದ ಐಟಿ ವೃತ್ತಿಪರರಿಂದಲೂ ಬೆಂಬಲ

ಹೆಬ್ಬಾಳದ ಐಟಿ ವೃತ್ತಿಪರರಿಂದಲೂ ಬೆಂಬಲ

ಹೆಬ್ಬಾಳದ ಐಟಿ ವೃತ್ತಿಪರರು ಮತ್ತು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಉಕ್ಕಿನ ಸೇತುವೆ ನಿರ್ಮಾಣದ ಪರವಾಗಿ ಸಹಿ ಸಂಗ್ರಹ ಕಾರ್ಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಹ್ಯಾಶ್ ಟ್ಯಾಗ್ #ಸ್ಟೀಲ್ ಫ್ಲೈ ಓವರ್ #Steelflyoverbeku.

50,000 ಕ್ಕೂ ಅಧಿಕ ಸಹಿ ಸಂಗ್ರಹಿಸುವ ಗುರಿ

50,000 ಕ್ಕೂ ಅಧಿಕ ಸಹಿ ಸಂಗ್ರಹಿಸುವ ಗುರಿ

ಈ ಯೋಜನೆ ಪರವಾಗಿ ಇವರು ಇದುವರೆಗೆ 20,000 ಕ್ಕೂ ಅಧಿಕ ಸಹಿ ಸಂಗ್ರಹ ಮಾಡಿದ್ದು, 50,000 ಕ್ಕೂ ಅಧಿಕ ಸಹಿ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ.

ಹೆಬ್ಬಾಳ ನಿವಾಸಿ ಚೇತನ್ ಗೌಡ ಅವರು ಮಾತನಾಡಿ

ಹೆಬ್ಬಾಳ ನಿವಾಸಿ ಚೇತನ್ ಗೌಡ ಅವರು ಮಾತನಾಡಿ

ಅಗತ್ಯ ಬಿದ್ದರೆ ನಾವು ಇನ್ನೂ ಹೆಚ್ಚು ಸಹಿ ಸಂಗ್ರಹ ಮಾಡುತ್ತೇವೆ. ಕೆಲವರು 854 ಮರಗಳನ್ನು ಕತ್ತರಿಸಿ ಈ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ಅವರಲ್ಲಿ ಕೇಳುವುದಿಷ್ಟೆ:- ಹೆಬ್ಬಾಳದಲ್ಲಿರುವ 80,000 ಅಧಿಕ ಜನರು ಪ್ರತಿದಿನ ಸಂಚಾರ ದಟ್ಟಣೆ ಕಿರಿಕಿರಿ, ಒತ್ತಡ, ಪರಿಸರ ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿದ್ದಾರಲ್ಲಾ, ಅದು ಮುಖ್ಯವಲ್ಲವೇ? ಎಂದು ಪ್ರಶ್ನಿಸಿದರು.

ಮನವಿ ಪತ್ರವನ್ನು ಸದ್ಯದಲ್ಲೇ ಸಲ್ಲಿಸಲಿದ್ದಾರೆ

ಮನವಿ ಪತ್ರವನ್ನು ಸದ್ಯದಲ್ಲೇ ಸಲ್ಲಿಸಲಿದ್ದಾರೆ

ಹೀಗೆ ಸಂಗ್ರಹಿಸಿದ ಸಹಿಗಳ ಜತೆಗೆ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರಿಗೆ ಮನವಿ ಪತ್ರವನ್ನು ಸದ್ಯದಲ್ಲೇ ಸಲ್ಲಿಸಲಿದ್ದಾರೆ. ನಾವು ಅನುಭವಿಸುತ್ತಿರುವ ಸಂಚಾರ ಕಿರಿಕಿರಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣವಾಗಲೇಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯ ಅಥವಾ ಯಾವುದೇ ವರ್ಗದಿಂದ ವಿರೋಧ ಬಂದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂದು ನಾಗರಿಕರು ಮನವಿ ಪತ್ರದಲ್ಲಿ ಸರ್ಕಾರವನ್ನು ಆಗ್ರಹಿಸಲಿದ್ದಾರೆ.

ಸುಮತಿ ಅವರು ಮಾತನಾಡಿ

ಸುಮತಿ ಅವರು ಮಾತನಾಡಿ

ಹೆಬ್ಬಾಳ ಮಾರುಕಟ್ಟೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಸುಮತಿ ಅವರು ಮಾತನಾಡಿ,'ಹವಾನಿಯಂತ್ರಿತ ಕಾರಿನಲ್ಲಿ ಪ್ರಯಾಣಿಸುವವರು ಮತ್ತು ಯಾವತ್ತೋ ಒಂದು ದಿನ ಈ ರಸ್ತೆಯನ್ನು ಬಳಸುವವರು ಮಾತ್ರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮಂತಹ ಸಾಮಾನ್ಯ ಜನರು ಪ್ರತಿನಿತ್ಯ ಬಸ್ ನಲ್ಲಿ ಪ್ರಯಾಣ ಮಾಡುತ್ತೇವೆ. ಈ ವೇಳೆ ಧೂಳು, ಹೊಗೆಯಂತಹ ಪರಿಸರ ಮಾಲಿನ್ಯದಿಂದ ಬಳಲುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಫ್ಲೈಓವರ್ ಮಾಡುವುದು ಒಳ್ಳೆಯದು ಎಂದು ಹೇಳಿದರು

English summary
Various residents association from North Bengaluru today (October 23) protested in support of Steel Flyover with #Steelflyoverbeku Tag. Many residents, students participated in the campaign and said flyover is needed to curb Traffic Jam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X