ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ; ವಕ್ಫ್‌ ಬೋರ್ಡ್‌ನಿಂದ ಪರಿಷ್ಕೃತ ಸುತ್ತೋಲೆ

|
Google Oneindia Kannada News

ಬೆಂಗಳೂರು, ಮಾರ್ಚ್ 18: ಮಸೀದಿ, ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಕರ್ನಾಟಕ ರಾಜ್ಯ ವಕ್ಫ್‌ ಬೋರ್ಡ್ ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದು, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕುರಿತು ಹೊರಡಿಸಿದ್ದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಮಸೀದಿ, ದರ್ಗಾಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸದಂತೆ ವಕ್ಫ್‌ ಬೋರ್ಡ್‌ ಮಂಗಳವಾರ ಸುತ್ತೋಲೆ ಹೊರಡಿಸಿತ್ತು. ಬೋರ್ಡ್ ಅಡಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳು ಈ ಸುತ್ತೋಲೆ ಅನುಸರಿಸುವಂತೆ ಸೂಚಿಸಿತ್ತು. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳ ಅನುಸರಣೆಗೆ ಈ ನಿಯಮ ಅವಶ್ಯಕ ಎಂದು ತಿಳಿಸಿತ್ತು.

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ; ರಾಜ್ಯ ವಕ್ಫ್‌ ಬೋರ್ಡ್‌ ಸುತ್ತೋಲೆಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ; ರಾಜ್ಯ ವಕ್ಫ್‌ ಬೋರ್ಡ್‌ ಸುತ್ತೋಲೆ

ಆದರೆ ಸುತ್ತೋಲೆ ನಂತರ, ಅಝಾನ್ ನೀಡುವ ಕುರಿತು ಗೊಂದಲ ಏರ್ಪಟ್ಟಿತ್ತು. ಹೀಗಾಗಿ ಧ್ವನಿವರ್ಧಕದ ಮೂಲಕ ಫಜರ್ ನಮಾಜ್ ಸಂದರ್ಭ ಅಝಾನ್ ನೀಡಲು ಯಾವುದೇ ನಿರ್ಬಂಧ ಇಲ್ಲ ಎಂದು ಬೋರ್ಡ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಧ್ವನಿವರ್ಧಕ ಬಳಕೆ ನಿಷೇಧವನ್ನು ಬೆಳಿಗ್ಗೆ ಅಝಾನ್‌ಗೆ ನಿಷೇಧ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು. ನಿಗದಿತ ಮಾನದಂಡಗಳನ್ನು ಅನುಸರಿಸಿ ಬೆಳಿಗ್ಗೆ ಅಝಾನ್‌ಗೆ ಧ್ವನಿವರ್ಧಕ ಬಳಸುವುದನ್ನು ತಡಯುವುದಿಲ್ಲ ಎಂದು ಹೊಸ ಸುತ್ತೋಲೆಯಲ್ಲಿ ತಿಳಿಸಲಾಗಿದೆ

State Waqf Board Revised Circular On Using Loudspeaker At Mosque And Dargas

Recommended Video

ಟ್ರೋಲಿಗೆ ಸಿಲುಕಿದ ತಮಿಳುನಾಡು ಬಿಜೆಪಿ!! | Oneindia Kannada

ರಾಜ್ಯ ವಕ್ಫ್‌ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಯೂಸುಫ್, ಮಸೀದಿ, ದರ್ಗಾಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಫಜರ್ ಸೇರಿದಂತೆ ಅಝಾನ್, ನಿಧನವಾರ್ತೆ, ದಫನ್ ಕಾರ್ಯದ ಸಮಯ, ಚಂದ್ರ ದರ್ಶನದಂಥ ಪ್ರಮುಖ ಘೋಷಣೆ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

English summary
Karnataka State Board of waqf revised its circular and clarified using loudspeakers between 10:00 pm and 6:00 am
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X