ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟ್ರಾಫಿಕ್ ನಿರ್ವಹಣೆ ಶಾಲಾ ಪಠ್ಯದಲ್ಲಿ ಅಳವಡಿಕೆ

|
Google Oneindia Kannada News

ಬೆಂಗಳೂರು, ಜನವರಿ 31 : ಬೆಂಗಳೂರು ನಗರದ ವಾಹನ ಸಂಚಾರ ದಟ್ಟಣೆ ನಿರ್ವಹಣೆ ಕುರಿತ ವಿಷಯವನ್ನು ಪಠ್ಯಕ್ರಮದಲ್ಲಿ ಸರ್ಪಡೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 2019-20 ನೇ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ.

ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ನಿರ್ವಹಣೆ ಕುರಿತ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಪರಿಶೀಲಿಸುವಂತೆ ಸಾರಿಗೆ ಇಲಾಖೆಯು ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರಸ್ತಾವನೆ ಸಲ್ಲಿಸಿತ್ತು.

ವಿಡಿಯೋ : ಯಮನಿಗೆ ಆಹ್ವಾನ ನೀಡಬೇಡಿ ಬೈಕ್ ಚಾಲಕರೆವಿಡಿಯೋ : ಯಮನಿಗೆ ಆಹ್ವಾನ ನೀಡಬೇಡಿ ಬೈಕ್ ಚಾಲಕರೆ

ಈ ಹಿನ್ನೆಲೆಯಲ್ಲಿ ಶಾಲಾ ಪಠ್ಯಕ್ರಮದಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷ ಅಂತ್ಯಗೊಂಡು ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಸನಿಹದಲ್ಲಿದೆ. ಅಲ್ಲದೆ, 2018-19 ನೇ ಸಾಲಿನ ಪಠ್ಯ ಪುಸ್ತಕಗಳ ಮುದ್ರಣಕ್ಕೆ ಸರ್ಕಾರ ಕಾರ್ಯಾದೇಶ ಪತ್ರ ನೀಡಿರುವುದರಿಂದ ಈ ಹಂತದಲ್ಲಿ ಹೊಸ ವಿಷಯ ಸೇರ್ಪಡೆಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ2019-20 ನೇ ಶೈಕ್ಷಣಿಕ ವರ್ಷದಿಂದ ಈ ವಿಷಯವನ್ನು ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.

State to include Bengaluru Traffic Management system in school text

ಸಂಚಾರ ವ್ಯವಸ್ಥೆ ಕುರಿತು ಶಿಕ್ಷಕರಿಗೆ ತರಬೇತಿ: ಹೊಸ ದಿಲ್ಲಿಯ ರಸ್ತೆ ಸಂಚಾರ ಶಿಕ್ಷಣ ಸಂಸ್ಥೆಗೆ ಆಯ್ದ ಶಿಕ್ಷಕರನ್ನು ತರಬೇತಿಗೆ ಕಳಿಸಲು ಉದ್ದೇಶಿಸಲಾಗಿದೆ. ಮಾಸ್ಟರ್ ತರಬೇತುದಾರರಾಗಿ ತರಬೇತಿ ಪಡೆಯುವ ಶಿಕ್ಷಕರು, ನಂತರ ಇತರೆ ಶಿಕ್ಷಕರು, ನಂತರ ಇತರ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಕುರಿತು ತರಬೇತಿ ನೀಡಿದ್ದಾರೆ.

ಪಠ್ಯಕ್ರಮದಲ್ಲಿ ಸೇರ್ಪಡೆಗೊಳ್ಳುವ ಅಂಶಗಳು: ರಸ್ತೆ ಸಂಚಾರ ಸಿಗ್ನಲ್ ಹಾಗೂ ನಿಯಮಗಳು, ಸಂಚಾರ ನಿಯಮ ಉಲ್ಲಂಘನೆ ಹಾಗೂ ಅದಕ್ಕೆ ವಿಧಿಸುವ ದಂಡ ಕುರಿತು ಮಾಹಿತಿ, ವೇಗ ನಿಯಂತ್ರಣ, ಓವರ್ ಟೇಕ್, ಪಾದಚಾರಿಗಳಿಗೆ ಸುರಕ್ಷತೆ ಕುರಿತ ಮಾಹಿತಿ, ರಸ್ತೆ ದುರಂತ ಸಂಭವಿಸುವ ಸಂದರ್ಭದಲ್ಲಿ ತುರ್ತು ಸಂಪರ್ಕಿಸಬಹುದಾದ ಸಂಸ್ಥೆಗಳ ವಿವರವಿರಲಿದೆ.

English summary
Department of Primary and secondary education has been submitted a proposal to include Bengaluru traffic management system in text book. State syllabus committee is considering this proposal thinking about implement from academic year 2019-20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X