ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಧನ ಪುಗಸಟ್ಟೆ ಕೊಡಲು ಇರಾನ್‌ನಲ್ಲಿ ನಮ್ಮ ಮಾವಂದಿರು ಇಲ್ಲ: ಸಿಟಿ.ರವಿ

By Manjunatha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಇಂಧನವನ್ನು ಪುಗಸೆಟ್ಟೆ ಕೊಡಲು ಇರಾನ್-ಇರಾಕ್‌ನಲ್ಲಿ ನಮ್ಮ ಮಾವಂದಿರು ಇಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೀಡಿರುವ ಭಾರತ್ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಇರಾಕ್‌, ಇರಾನ್‌ನವರು ಪುಗಸೆಟ್ಟೆಯಾಗಿ ಇಂಧನ ಕೊಟ್ಟಿದ್ದರೆ ನಾವೂ ಕೊಡುತ್ತಿದ್ದೆವು ಎಂದು ಉಢಾಫೆಯ ಪ್ರತಿಕ್ರಿಯೆ ನೀಡಿದರು.

ಭಾರತ್ ಬಂದ್: ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಡೆತ್ತಿದ ಉಡುಪಿಯ ರಿಕ್ಷಾ ಚಾಲಕರುಭಾರತ್ ಬಂದ್: ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಡೆತ್ತಿದ ಉಡುಪಿಯ ರಿಕ್ಷಾ ಚಾಲಕರು

ನೀರು ಹಾಕಿಕೊಂಡು ಬಸ್ಸು ಓಡಿಸಲಾಗುವುದಿಲ್ಲ, ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡು ಅಂತ ದೇವೇಗೌಡರು ತಮ್ಮ ಮಗನಿಗೆ ಹೇಳಬೇಕು ಎಂದು ರವಿ ಕ್ರೋಧ ಭರಿತವಾಗಿ ಹೇಳಿದರು.

State should cut of fuel price not central: CT Ravi

ಉಢಾಫೆಯಿಂದ , ಕ್ರೋಧ ಭರಿತವಾಗಿ ಮಾತನಾಡಿದ ಸಿ.ಟಿ.ರವಿ ತಮ್ಮ ಮಾತಿನಲ್ಲಿ ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಬೆಲೆ ಇಳಿಸಬೇಕಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಅವರು ಹೇಳಿದರು.

ಬೋಳಂಗಡಿಯಲ್ಲಿ ಶಾಸಕ ರಾಜೇಶ್ ನಾಯಕ್ ಕಾರಿನ ಮೇಲೆ ಕಲ್ಲು ತೂರಾಟಬೋಳಂಗಡಿಯಲ್ಲಿ ಶಾಸಕ ರಾಜೇಶ್ ನಾಯಕ್ ಕಾರಿನ ಮೇಲೆ ಕಲ್ಲು ತೂರಾಟ

ಕುಟುಂಬದ ಹಿಡಿತದಿಂದ ಅಧಿಕಾರ ಕೈತಪ್ಪಿರುವ ಕಾರಣ ಕಾಂಗ್ರೆಸ್ ಹತಾಶವಾಗಿದೆ ಹಾಗಾಗಿ ಈ ರೀತಿ ಬಂದ್‌ಗೆ ಮಾಡುತ್ತಿದೆ. ಅಧಿಕಾರ ಇಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತೆ ಕಾಂಗ್ರೆಸ್ ಒದ್ದಾಡುತ್ತಿದೆ ಎಂದು ಅವರು ಹೇಳಿದರು.

English summary
State government should reduce the tax on petrol and diesel not central government said BJP MLA CT Ravi. He also said Deve Gowda should tell his son (CM Kumaraswamy) to reduce petrol price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X