ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರ ಪೀಡಿತ ತಾಲೂಕುಗಳಿಗೆ 2,434 ಕೋಟಿ ಬೇಡಿಕೆ ಇಟ್ಟ ರಾಜ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿನ ಬರಪೀಡಿತ ತಾಲೂಕುಗಳ ಅಭಿವೃದ್ಧಿಗೆ 2,434 ಕೋಟಿ ರೂ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ರಾಜ್ಯದ 24 ಜಿಲ್ಲೆಗಳ 100 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ್ನು ಅನುಭವಿಸಿ ನೂರು ತಾಲೂಕುಗಳು ಬರಪೀಡಿತವಾಗಿವೆ. ಈ ತಾಲೂಕುಗಳಲ್ಲಿ ಒಟ್ಟು 16,662 ಕೋಟಿ ರೂ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ 2434 ಕೋಟಿ ರೂಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.

ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆ

ಈ ಕುರಿತು ಕೇಂದ್ರ ಕೃಷಿ ಸಚಿವ ರಾಜನಾಥ್ ಸಿಂಗ್ ಹಾಗೂ ರಾಧಾ ಮೋಹನ್ ಸಿಂಗ್ ಅವರಿಗೆ ಕಂದಾಯ ಸಚಿವ ಆರ್‌ವಿ ದೇಶಪಾಂಪಡೆ ಅವರು ಪತ್ರ ಬರೆದಿದ್ದಾರೆ. ಮುಂಗಾರು ವೈಫಲ್ಯದಿಂದ 26.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1.94 ಲಕ್ಷ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆ ಗಳು ನಷ್ಟವಾಗಿವೆ.

State seeks to center for Rs 2,434 Crore as drought relief

ಕರ್ನಾಟಕದ 13 ಜಿಲ್ಲೆಗಳಲ್ಲಿ ನೀರಿನ ಬರ! ಕರ್ನಾಟಕದ 13 ಜಿಲ್ಲೆಗಳಲ್ಲಿ ನೀರಿನ ಬರ!

ಬೆಳೆ ನಷ್ಟದ ಒಟ್ಟು ಅಂದಾಜು 16,662.48 ಕೋಟಿ ರೂಗಳಾಗಿವೆ. ಈ ಪೈಕಿ ಬೆಳೆ ನಷ್ಟ ಪರಿಹಾರ ಮತ್ತು ಬರ ಪರಿಹಾರ ನಿರ್ವಹಣೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರಾಜ್ಯಕ್ಕೆ ಒಟ್ಟು 2,434 ಕೋಟಿ ರೂ ಬಿಡಗಡೆ ಮಾಡಬೇಕೆಂದು ಕೋರಿದ್ದಾರೆ.

English summary
State government has been sought central government for Rs 2,434 crores for drought relief in Natural Disaster Relief Fund as more than 100 taluks in the state were declared as drought prone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X