ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಂಡಾ ಕಾಯ್ದೆ ಮಾರ್ಗಸೂಚಿ ಪಾಲನೆಗೆ ಹೈಕೋರ್ಟ್ ತಾಕೀತು, 11 ಅಂಶಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 19: ಗೂಂಡಾ ಕಾಯ್ದೆಯಡಿ ವ್ಯಕ್ತಿಯನ್ನು ಬಂಧಿಸುವ ಮುನ್ನ 11 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.

2018ರ ಆಗಸ್ಟ್‌ನಲ್ಲಿ ರವಿಕುಮಾರ್ ಎಂಬುವವರ ಬಂಧನಕ್ಕೆ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿರುವ ನ್ಯಾ.ಕೆ.ಎನ್. ಫಣೀಂದ್ರ ಮತ್ತು ನ್ಯಾ. ಕೆ ನಟರಾಜನ್ ಅವರಿದ್ದ ಪೀಠ 11 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

ಪೊಲೀಸರ ಆತ್ಮಹತ್ಯೆ ತಡೆಯಲು ನಿಮ್ಹಾನ್ಸ್ ನೀಡುತ್ತಿರುವ ತರಬೇತಿ ಏನು? ಪೊಲೀಸರ ಆತ್ಮಹತ್ಯೆ ತಡೆಯಲು ನಿಮ್ಹಾನ್ಸ್ ನೀಡುತ್ತಿರುವ ತರಬೇತಿ ಏನು?

ಬಂಧನ ಆದೇಶ ಲಿಖಿತ ರೂಪದಲ್ಲಿರಬೇಕು, ಬಂಧನಕ್ಕೂ ಮುನ್ನ ಆ ವ್ಯಕ್ತಿಗೆ ಆದೇಶ ತಲುಪಿರಬೇಕು, ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ ಎಂಬುದಕ್ಕೆ ಕಾರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೀಡಬೇಕು ಎಂದೂ ನ್ಯಾಯಪೀಠ ಹೇಳಿದೆ.

State police should follow guidelines before acting under Goonda act

11 ಅಂಶಗಳು ಇಲ್ಲಿವೆ.
-ಬಂಧನ ಆದೇಶ, ಅದಕ್ಕೆ ಪೂರಕವಾದ ದಾಖಲೆಗಳನ್ನು ಬಂಧಿತನು ತಿಳಿದಿರುವ ಭಾಷೆಗೆ ಅನುವಾದ ಒದಗಿಸಬೇಕು.
-ಬಂಧನ ಆದೇಶವನ್ನು ಲಿಖಿತ ರೂಪದಲ್ಲಿ ಹೊರಡಿಸಿದ ಕೂಡಲೇ ಅದನ್ನು ಐದು ದಿನಗಳೊಳಗೆ ಬಂಧಿತನಿಗೆ ಒದಗಿಸಬೇಕು. ಆದೇಶದೊಂದಿಗೆ ಪ್ರಕರಣದ ಸತ್ಯಾಂಶಗಳು ಸಂಕ್ಷಿಪ್ತವಾಗಿ ಯಾವ ಆಧಾರದ ಮೇಲೆ ಆದೇಶ ಹೊರಡಿಸಲಾಗಿದೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.
-ಬಂಧನ ಆದೇಶ ಹೊರಡಿಸಲು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಾರಣಗಳು ಇದ್ದಲ್ಲಿ, ಅದನ್ನು ಪ್ರತ್ಯೇಕವಾಗಿ ನಮೂದಿಸಬೇಕು ಹಾಗೂ ಅವು ತೃಪ್ತಿಕರವಾಗಿರಬೇಕು.
-ಬಂಧಿತನ ಜಾಮೀನು ಅರ್ಜಿ, ಆ ಕುರಿತು ಕೋಟರ್ ಆದೇಶ, ಜಾಮೀನು ಷರತ್ತು ಉಲ್ಲಂಘಿಸಿದ ಸಂದರ್ಭದಲ್ಲಿ ಆ ಕುರಿತು ಆದೇಶಗಳನ್ನು ನ್ಯಾಯಾಲಯ ಹಾಗೂ ಬಂಧನ ಪ್ರಾಧಿಕಾರ ಕೂಲಂಕುಶವಾಗಿ ಪರಿಶೀಲಿಸಬೇಕು.
-ಬಂಧನ ಆದೇಶ ಪ್ರಶ್ನಿಸಿದ ವೇಳೆ ಪ್ರತಿಯೊದು ಕಾರಣವನ್ನು ನ್ಯಾಯಾಲಯವು ಸ್ವತಂತ್ರವಾಗಿ ಪರಿಗಣಿಸಬೇಕು ಹಾಗೂ ಬಂಧನ ಆದೇಶವು ಈಗ ರೂಪಿಸಲಾಗಿರುವ ಮಾರ್ಗಸೂಚಿಗಳ ಅನುಗುಣವಾಗಿದೆಯೇ ಎಂಬುದರ ಕುರಿತು ಪರಿಶೀಲಿಸಬೇಕು.
-ಬಂಧನ ಆದೇಶದ ಕುರಿತು ಬಂಧಿತನು ಯಾವುದೇ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಮಂಡಳಿ, ಸರ್ಕಾರ, ಬಂಧನ ಪ್ರಾಧಿಕಾರವು ತಕ್ಷಣವೇ ಪರಿಗಣಿಸಬೇಕು.
-ಬಂಧನದ ಆದೇಶ ಹೊರಡಿಸಿದ ಮೂರು ವಾರಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಕಾರಣ, ಬಂಧಿತನ ಮನವಿ ಪತ್ರಗಳನ್ನು ಸಲಹಾ ಮಂಡಳಿಯ ಮುಂದೆ ಸರ್ಕಾರ ಒಗಿಸಬೇಕು.
-ಯಾವುದೇ ಮನವಿಯನ್ನಾದರೂ ಬಂಧನ ಆದೇಶ ಅಂತಿಮಗೊಳಿಸುವ ಮುನ್ನವೇ ಪರಿಗಣಿಸಬೇಕು.
-ಬಂಧನ ಮಾಡಲು ಯಾವುದೇ ಸಕಾರಣ ಇಲ್ಲ ಎಂದು ಸಲಹಾ ಮಂಡಳಿ ವರದಿ ನೀಡಿದರೆ, ಅದನ್ನು ಪರಿಗಣಿಸಿ ಕೂಡಲೇ ಬಂಧಿತನನ್ನು ಬಿಡುಗಡೆ ಮಾಡಬೇಕು.
-ಸಲಹೆ ಮಂಡಳಿ ನೀಡಿದ ವರದಿ ಆಧರಿಸಿ ಬಂಧನದಿಂದ ವ್ಯಕ್ತಿಯನ್ನು ಬಿಡುಗಡೆ ಮಾಡಿದ ಬಳಿಕ, ಅದೇ ಕಾರಣದಿಂದ ಮತ್ತೆ ಆತನನ್ನು ಬಂಧಿಸಲು ಅಥವಾ ಬಂಧನದ ಅವಧಿ ವಿಸ್ತರಿಸಲು ಸಾಧ್ಯವಿಲ್ಲ. ಒಂದೊಮ್ಮೆ ಬಂಧಿಸಬೇಕಾದರೆ ಹೊಸ ಕಾರಣಗಳ ಮೇಲೆ ಪ್ರತ್ಯೇಕ ಅಥವಾ ಹೊಸ ಆದೇಶ ಹೊರಡಿಸಬೇಕು.

English summary
Karnataka High Court instructed to state police that they should follow 11 point guidelines before arresting anyybody as under Goonda act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X