ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಜನರಿಗಾಗಿ ರಾಜ್ಯ ಮಟ್ಟದ ''ಗಾಂಧಿಗೆ ಒಂದು ಪತ್ರ'' ಲೇಖನ ಸ್ಪರ್ಧೆ

|
Google Oneindia Kannada News

ಬೆಂಗಳೂರು, ಡಿ. 22: ಕರ್ನಾಟಕ ಸರ್ವೋದಯ ಮಂಡಲವು ಮುಂಬರುವ 2021 ಜನವರಿ 30 ಸರ್ವೋದಯ ದಿನದ ಸಂದರ್ಭದಲ್ಲಿ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.

'ಸರ್ವೋದಯ ಸಮಾಜ ಸೃಷ್ಟಿಯ ಸಾಧ್ಯತೆಗಳು - ಒಂದು ವಿಶ್ಲೇಷಣೆ' ಲೇಖನದ ವಸ್ತುವಾಗಿದ್ದು, ಗಾಂಧಿ ಚಿಂತನೆ ಹಾಗೂ ಇಂದಿನ ಪರಿಸ್ಥಿತಿ ಮತ್ತು ಸವಾಲುಗಳನ್ನು ಕುರಿತು 'ಗಾಂಧಿಗೆ ಒಂದು ಪತ್ರ' ಈ ಎರಡು ಕನ್ನಡ ಲೇಖನ ಸ್ಪರ್ಧೆಗಳಲ್ಲಿ 15-30 ವಯೋಮಿತಿಯ ಯುವಜನರು ಮಾತ್ರ ಭಾಗವಹಿಸಬಹುದು.

ಗಾಂಧೀಜಿ ಜೀವನ ಪ್ರಯೋಗದ ಫಲವೇ ಇಂದಿನ ಸ್ವತಂತ್ರ ಭಾರತಗಾಂಧೀಜಿ ಜೀವನ ಪ್ರಯೋಗದ ಫಲವೇ ಇಂದಿನ ಸ್ವತಂತ್ರ ಭಾರತ

ಪತ್ರ ಲೇಖನದಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಡ್ಡಾಯವಾಗಿ ಅಂಚೆ ಕಚೇರಿಯಲ್ಲಿ ದೊರಕುವ ಅಂತರ್ದೇಶೀಯ ಪತ್ರ (ಇನ್‍ಲ್ಯಾಂಡ್ ಲೆಟರ್) ದಲ್ಲಿ ತಮ್ಮ ಸ್ವಂತ ಕೈ ಬರಹದಲ್ಲಿ ಬರೆಯಬೇಕು. ಉಳಿದಂತೆ ಲೇಖನ ಸ್ಪರ್ಧಿಗಳು ಎ4 ಅಳತೆಯ ಮೂರು ಪುಟಗಳಿಗೆ ಮೀರದಂತೆ ತಮ್ಮ ಬರಹಗಳನ್ನು ಸೀಮಿತಗೊಳಿಸಬೇಕು. ಗಾಂಧಿ ವಿಚಾರಕ್ಕೆ ಮೀಸಲಾದ ಕನ್ನಡ-ಇಂಗ್ಲಿಷ್ ದ್ವೈಮಾಸಿಕ 'ಅಮರ ಬಾಪು ಚಿಂತನ' ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣ ಪತ್ರ ನೀಡಲಾಗುವುದು ಮತ್ತು ತೀರ್ಪುಗಾರರು ಆಯ್ಕೆ ಮಾಡಿದ ಲೇಖನಗಳನ್ನು ಅಮರ ಬಾಪು ಚಿಂತನ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

State Level Essay competition on Sarvodaya Society and Gandhian philosophy

Recommended Video

Bangalore: ರೂಪಾಂತರಗೊಂಡ ಕೊರೊನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ- ಸಿಎಂ ಯಡಿಯೂರಪ್ಪ ಮಾಹಿತಿ | Oneindia Kannada

ಸ್ಪರ್ಧಿಗಳು ತಮ್ಮ ಲೇಖನ/ಪತ್ರಗಳನ್ನು ಸಂಪಾದಕರು, ಅಮರ ಬಾಪು ಚಿಂತನ, ಗಾಂಧೀಭವನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001 ಈ ವಿಳಾಸಕ್ಕೆ ಜನವರಿ 19, 2021ರೊಳಗೆ ತಲುಪುವಂತೆ ಕಳುಹಿಸಬೇಕು. ಸ್ಪರ್ಧಿಗಳು ತಮ್ಮ ಜನ್ಮ ದಿನಾಂಕ - ವರ್ಷ ಮತ್ತು ದೂರವಾಣಿ ಸಂಖ್ಯೆ ನಮೂದಿಸುವುದು ಕಡ್ಡಾಯ ಎಂದು ಆಯೋಜಕರು ತಿಳಿಸಿದ್ದಾರೆ.

English summary
Karnataka State Level Essay competition is organised on Sarvodaya Society and Gandhian philosophy subject.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X