ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಎಫ್ ಸಂಸ್ಥೆ ವಿಸರ್ಜನೆಗೆ ಸರ್ಕಾರ ನಿರ್ಧಾರ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಬಿಎಂಟಿಎಫ್ ಸಂಸ್ಥೆಯನ್ನು ರದ್ದುಗೊಳಿಸಿ ಸಿಎಸ್‌ಎಫ್ ಎಂಬ ಸಂಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನವೆಂಬರ್ ತಿಂಗಳಿನಿಂದಲೇ ಈ ಆದೇಶ ಜಾರಿಗೆ ಬರಲಿದೆ. ಬಿಎಂಟಿಎಫ್ ಅನ್ನು ರದ್ದುಗೊಳಿಸಿ ಕಾರ್ಪೊರೇಷನ್ ಸೆಕ್ಯುರಿಟಿ ಫೋರ್ಸ್ ಎಂಬ ಹೆಸರಿನ ಸಂಸ್ಥೆಯನ್ನು ಜಾರಿಗೆ ತರಲಿದೆ. ಬಿಎಂಟಿಎಫ್ ಪೊಲೀಸರ ತರಹ ಭ್ರಷ್ಟರ ವಿರುದ್ಧ ಐಪಿಸಿ ಸೆಕ್ಷನ್ ಗಳನ್ನು ಸಿಎಸ್‌ಎಫ್ ಸಂಸ್ಥೆಯು ಹಾಕಲು ಅವಕಾಶ ಕೊಡುವುದಿಲ್ಲ.

ಬಿಬಿಎಂಪಿ ನಕಲಿ ಬಿಲ್ ಹಗರಣ, ಶಾಸಕರ ರಾಜೀನಾಮೆಗೆ ಎಎಪಿ ಒತ್ತಾಯ ಬಿಬಿಎಂಪಿ ನಕಲಿ ಬಿಲ್ ಹಗರಣ, ಶಾಸಕರ ರಾಜೀನಾಮೆಗೆ ಎಎಪಿ ಒತ್ತಾಯ

ಬಿಡಿಎ, ಜಲಮಂಡಿ, ಕೆಐಎಡಿಬಿ ಮೊದಲಾದ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಎಸ್‌ಎಫ್ ಸಂಸ್ಥೆಯು ದೂರುಗಳನ್ನು ದಾಖಲಿಸಿಕೊಳ್ಳುವಂತಿಲ್ಲ.

State govt to abolish BMTF soon

ಸಿಎಸ್‌ಎಫ್ ಸಂಸ್ಥೆಗೆ ಪಾಲಿಕೆಯ ಆಯುಕ್ತರೇ ಮುಖ್ಯಸ್ಥರಾಗಿರುತ್ತಾಋಎ. ಸಿಎಸ್‌ಎಫ್ ಸಂಸ್ಥೆಯ ಆರಂಭಕ್ಕೆ ಸರ್ಕಾರ ಅಧಿಕೃತ ಮುದ್ರೆ ಹಾಕಿದ ನಂತರ ಭ್ರಷ್ಟರು ಇನ್ನಷ್ಟು ನಿರಾಳರಾಗಿ ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡುವುದಷ್ಟೇ ಅಲ್ಲದೆ, ಲೋಕಾಯುಕ್ತ ಮತ್ತು ಎಸಿಬಿಗಳಂತೆ ಬಿಎಂಟಿಎಫ್ ಪೊಲೀಸರ ಹಲ್ಲುಗಳನ್ನು ಕೀಳುವುದರಲ್ಲಿ ಸರ್ಕಾರ ಯಶಸ್ವಿಯಾದಂತಾಗುತ್ತದೆ.

ಪೊಲೀಸರ ಚುನಾವಣಾ ಭತ್ಯೆ ಹೆಚ್ಚಳ: ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್ ಪೊಲೀಸರ ಚುನಾವಣಾ ಭತ್ಯೆ ಹೆಚ್ಚಳ: ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್

ಈ ಕುರಿತು ಆಗುವ ಅನನುಕೂಲಗಳ ಬಗ್ಗೆ ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಲು ಬಿಎಂಟಿಎಫ್ ನ ಎಡಿಜಿಪಿ ಮತ್ತು ಎಸ್‌ಪಿ ಶನಿವಾರ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಲಿದ್ದಾರೆ.

English summary
State government has decided to abolish Bangalore Metropolitan Task Force soon and form Corporation Security Force under BBMP to protect its properties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X